News Karnataka Kannada
Thursday, April 18 2024
Cricket
ಮೈಸೂರು

ಮೈಸೂರು: ರಾಮಪ್ರಸಾದ್ ಅವರ ಜನ ಪ್ರೀತಿ ಅಪಾರ – ಡಾ.ಎಂ.ಆರ್.ರವಿ

Mysuru: Ramaprasad's love for the people is immense: Dr. M.R. Ravi
Photo Credit : By Author

ಮೈಸೂರು: ಎಸ್.ರಾಮಪ್ರಸಾದ್ ಅವರ ಇಡೀ ಜೀವನ ಗಮನಿಸಿದೇನೆ. ಅವರ ಜೀವನ ಪ್ರೀತಿ, ಮತ್ತೊಂದು ಜನ ಪ್ರೀತಿಯನ್ನು ಅವರು ಅಪಾರವಾಗಿ ಸಂಪಾದಿಸಿದ್ದಾರೆ ಎಂದು ಕೆಎಸ್‌ಐಐಡಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ತಿಳಿಸಿದರು.

ನಗರದ ಸರಸ್ವತಿಪುರಂನ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ ಮತ್ತು ಹೊಯ್ಸಳ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ಎಸ್.ರಾಮಪ್ರಸಾದ್ 80 ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು, ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ರಾಮಪ್ರಸಾದ್ ಅವರು ಮೈಸೂರಿಗೆ ಒಂದು ರೀತಿಯಲ್ಲಿ ರಾಮನಪ್ರಸಾದವೇ ಎಂಬ ಮಟ್ಟಕ್ಕೆ ಅವರಿದ್ದಾರೆ. ಒಂದೇ ಒಂದು ಸಣ್ಣ ಕಳಂಕ, ವಿವಾದದ ಸುಳಿಗೆ ಅವಕಾಶ ಕೊಟ್ಟವರಲ್ಲ. ಮನುಷ್ಯನಲ್ಲಿ ಸ್ವಲ್ಪವೂ ಅಹಂ ಗಮನಿಸಿಲ್ಲ. ಅನೇಕರು ಸ್ವಲ್ಪ ಎತ್ತರಕ್ಕೆ ಬೆಳೆದರೂ ಅಹಂ ಕೋಟೆ ಕಟ್ಟಿಕೊಳ್ಳುತ್ತಾರೆ. ಅದಿಲ್ಲದೆ ಎಷ್ಟು ಸುಂದರವಾದ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಹೊಂದಿಕೆ ಎಂಬುದು ಕಷ್ಟವಾಗಿದೆ. ಆದರೆ, ರಾಮಪ್ರಸಾದ್ ಅವರು ಎಷ್ಟು ಕಷ್ಟದಿಂದ ಈ ಸಮಾಜದಲ್ಲಿ ಬದುಕು ಕಟ್ಟಿದ್ದಾರೆ ಎಂಬುದನ್ನು ಗಮನಿಸಬೇಕು. ಅವರು ತಮ್ಮ ಲೇಖನವೊಂದರಲ್ಲಿ ನನ್ನ ಮನೆ ಒಂದು ರೀತಿಯ ಅನಾಥಾಶ್ರಮ ಎಂದು ಬರೆದುಕೊಂಡಿದ್ದಾರೆ. ಅದನ್ನು ಓದಿದಾಗ ನನ್ನ ಕಣ್ಣುಗಳು ಒದ್ದೆಯಾಯಿತು ಎಂದು ಅವರು ವಿವರಿಸಿದರು.

ವೃದ್ಧಾಪ್ಯ ಎಂಬುದರ ಸಂಕಟ ಅದನ್ನು ಅನುಭವಿಸುವವರಿಗೆ ಮಾತ್ರ ಗೊತ್ತು. ಇತ್ತೀಚೆಗೆ ಅನೇಕ ಮನೆಗಳು ವೃದ್ಧಾಶ್ರಮವಾಗುತ್ತಿವೆ. ಮಕ್ಕಳು, ಮೊಮ್ಮಕ್ಕಳು ಓದಲು, ಉದ್ಯೋಗಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗುವುದರಿಂದ ಮನೆಯಲ್ಲಿ ಉಳಿಯುತ್ತಿರುವುದು ಕೇವಲ ಹಿರಿಯರೇ. ಇಂತಹ ಸಂದರ್ಭಗಳಲ್ಲಿ ಜೀವಂತಿಕೆ ಎಂಬುದು ಇರುವುದಿಲ್ಲ. ವೃದ್ಧರ ಕಷ್ಟಗಳನ್ನು ಯಾರೂ ಅರ್ಥ ಮಾಡಿಕೊಳ್ಳಲಾಗದು ಎಂದರು.

ಎಸ್.ರಾಮಪ್ರಸಾದ್ ಅವರು ಎಲ್ಲದಕ್ಕೂ ಎಸ್ ಎಂದು ಹೇಳುತ್ತಾರೆ. ಆದರೆ, ವಿವಿಯಲ್ಲಿ ಇದ್ದವರು, ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದವರು. ಅನೇಕರಿಗೆ ಮಾರ್ಗದರ್ಶಕರಾದರೂ ಕೂಡ ಪಿಎಚ್‌ಡಿ ಮಾಡಲಿಲ್ಲ. ಅಲ್ಲದೆ ಇವರ ಇಡೀ ಕುಟುಂಬ ಬ್ರಹ್ಮಚಾರಿಗಳಾಗಿ ಜೀವನ ನಡೆಸಿದವರು. ವಿಶ್ವಮಾನವರಾಗಿ ಬೆಳೆದ ರಾಮಪ್ರಸಾದ್ ಅವರ ಜೀವನ ಮತ್ತು ವ್ಯಕ್ತಿತ್ವ ಬಹಳ ವಿಶೇಷವಾಗಿ ಕಾಣಿಸುತ್ತದೆ. ನಂತರದ ಪೀಳಿಗೆಗೆ ಇವರ ಬದುಕು ಆದರ್ಶ ಪ್ರಾಯವಾಗಿದೆ. ಅವರ ಕ್ರಿಯಾಶೀಲತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಅವರು ಕೊಂಡಾಡಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಇದೇ ವೇಳೆ ಸಾಹಿತಿ ಎಸ್.ರಾಮಪ್ರಸಾದ್ ಅವರನ್ನು ಅಭಿನಂದಿಸಲಾಯಿತು. ರಂಗನಾಥ್ ಮೈಸೂರು, ಎಂ.ಮುತ್ತುಸ್ವಾಮಿ, ಕೆ.ಎಸ್.ಜಯಲಕ್ಷ್ಮೀ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು