News Kannada
Friday, March 01 2024
ಮೈಸೂರು

ಮೈಸೂರು: ಬುಡಕಟ್ಟು ಜನಾಂಗದ ಮುಖಂಡ ಬಿರ್ಸಾಮುಂಡ ಅವರ ಜನ್ಮ ದಿನಾಚರಣೆ

Mysuru: Tribal leader Birsamunda’s birth anniversary celebrated
Photo Credit : Twitter

ಮೈಸೂರು: ಆದಿವಾಸಿಗಳ ನಾಯಕ ಬಿರ್ಸಾಮುಂಡ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿ ಆದಿವಾಸಿಗಳಿಗೆ ಕೀರ್ತಿ ತಂದಿದ್ದಾರೆ ಎಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟಾನ್ಲಿ ಅಭಿಪ್ರಾಯಪಟ್ಟರು.

ಜಿಲ್ಲೆಯ ಹುಣಸೂರಿನ ಟ್ಯಾಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಟ್ಯಾಲೆಂಟ್ ಸಂಸ್ಥೆ ಸಹಯೋಗದಲ್ಲಿ ಡೀಡ್ ಆಯೋಜಿಸಿದ್ದ ಬಿರ್ಸಾಮುಂಡ ಅವರ 147ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಆದಿವಾಸಿಗಳು ಬಿರಸಾಮುಂಡ ಅವರ ಬದುಕು, ಹೋರಾಟದ ಬದುಕು ಅರಿಯಬೇಕು. ಕಾಡಿಲ್ಲದೇ, ಭೂಮಿ ಇಲ್ಲದೇ ಸಂಕಷ್ಟದ ಜೀವನ ನಡೆಸುತ್ತಿರುವ ಆದಿವಾಸಿಗಳಿಗೆ ಅರಣ್ಯ ಇಲಾಖೆ ತನ್ನದೇ ಆದ ಕಾನೂನು ತಂದಿದ್ದು, ಅವರನ್ನು ಕಾಡಿನಿಂದ ಹೊರಹಾಕಿ ಅವರ ಬದುಕನ್ನು ದುಸ್ತರಗೊಳಿಸಿದೆ.

ಟ್ಯಾಲೆಂಟ್ ಫೌಂಡೇಶನ್ ಸಂಚಾಲಕ ನವೀನ್ ರೈ ಮಾತನಾಡಿ, ನಿಸರ್ಗವನ್ನು ರಕ್ಷಿಸುವಲ್ಲಿ ಆದಿವಾಸಿಗಳ ಪಾತ್ರ ಅಪಾರವಾಗಿದೆ.ಆದಿವಾಸಿಗಳು ಶಿಕ್ಷಣ ಪಡೆಯಬೇಕು ಮತ್ತು ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು