News Kannada
Saturday, February 24 2024
ಮೈಸೂರು

ನಂಜನಗೂಡು: ಕಪಿಲಾ ನದಿಗೆ ಇಳಿದು ರೈತರ ಪ್ರತಿಭಟನೆ

Nanjangud: Farmers protest against Kapila river
Photo Credit : News Kannada

ನಂಜನಗೂಡು:  ತಮಿಳುನಾಡಿಗೆ ನೀರನ್ನು ಬಿಟ್ಟಿರುವ ಕರ್ನಾಟಕ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕಪಿಲಾ ನದಿಗೆ ಇಳಿದು ದಿಢೀರ್‌ ಪ್ರತಿಭಟನೆ ನಡೆಸಿದರು.

ರೈತಸಂಘದ ಜಿಲ್ಲಾಧ್ಯಕ್ಷವಿದ್ಯಾಸಾಗರ್ ಮಾತನಾಡಿ, ಈಗಾಗಲೇ ರಾಜ್ಯದ 195 ತಾಲೂಕುಗಳನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೂ ಸಹ ರಾಜ್ಯ ಸರ್ಕಾರ ಮರ್ಜಿಗೆ ಒಳಗಾಗಿ ಕಾವೇರಿ ನೀರನ್ನು ಬಿಡಲು ಮುಂದಾಗಿರುವುದು ಖಂಡನೀಯ, ನದಿಯಲ್ಲಿ ದಿಢೀರ್‌ಆಗಿ ನೀರಿನ ಅರಿವು ಹೆಚ್ಚಾದ ಕಾರಣ ಶನಿವಾರ ದಿಢೀರ್‌ಪ್ರತಿಭಟನೆಯನ್ನು  ಕೈಗೊಳ್ಳಲಾಗಿದೆ.

ಪ್ರತಿಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ರಾಜಕಾರಣ ಅವರಿಗೆ ಮಾಡಲು ಹೊರಟಿದೆ. ರಾಜ್ಯದ ರೈತರ ರಕ್ಷಣೆ ಮಾಡಬೇಕು ಎಂದು ಹಂಬಲವಿಲ್ಲ. ಬದಲಾಗಿ ಪಕ್ಷಕ್ಕೆ ಹೇಗೆ ಮತ ಸೆಳೆಯಬೇಕು ಎಂಬುದರಲ್ಲಿ ಕಾಲಾರಣ ಮಾಡುತ್ತಿದೆ. ನಾಡಿನ ನೆಲ, ಜಲ ವಿಚಾರದಲ್ಲಿ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ರಾಜಕಾರಣವನ್ನು ಮರೆತು ಬೀದಿಗಿಳಿದು ರೈತರ ಪರವಾಗಿ ಹೋರಾಟ ನಡೆಸಬೇಕು. ರಾಜ್ಯದ ಕನ್ನಡ ನಟರು ಸಹ ಬರೀ ಟ್ವಿಟ್ಟರ್ ಹಾಗೂ ವಾಟ್ಸಪ್ ನಲ್ಲಿ ಹಾಕಿಕೊಂಡು ಹೋರಾಟವನ್ನು ಸೀಮಿತಗೊಳಿಸದೆ.

ಬೀದಿಗೆ ಬಂದು ಹೋರಾಟ ನಡೆಸಬೇಕು, ಜೊತೆಗೆ 5 ಸಾವಿರ ಕೋಟಿ ಬರಪೀಡಿತ ಪರಿಹಾರವನ್ನು ಕೊಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ ರಾಜ್ಯದ 28 ಜನ ಸಂಸದರು ಒ೦ದುಗೂಡಿ ಪ್ರಧಾನಿಯವರ ಬೆಂಚು ಕುಟ್ಟಿ ಪರಿಹಾರ ತರುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು