ನಂಜನಗೂಡು: ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ನೀಡಬೇಕು ಹಾಗೂ ಚುನಾವಣಾ ಭತ್ಯೆ ನೀಡದಿದ್ದರೆ ಚುನಾವಣೆ ಬಹಿಷ್ಕಾರಯನ್ನು ಬಹಿಷ್ಕಾರ ಮಾಡುವಂತೆ ನಂಜನಗೂಡಿನಲ್ಲಿ ಗ್ರಾಮ ಸಹಾಯಕರ ವತಿಯಿಂದ ಜಿಲ್ಲಾ ಕಾರ್ಯ ಕಾರಿಣಿ ಸಭೆಯಲ್ಲಿ ಗ್ರಾಮ ಸಹಾಯಕರು ಒತ್ತಾಯಿಸಿದ್ದಾರೆ.
ನಂಜನಗೂಡು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಗ್ರಾಮ ಸಹಾಯಕರ ಕುಂದು ಕೊರತೆಗಳ ಸಭೆಯನ್ನು ನಡೆಸಲಾಯಿತು.
ಗ್ರಾಮ ಸಹಾಯಕರ ರಾಜ್ಯಾಧ್ಯಕ್ಷ ದೇವರಾಜು ಮಾತನಾಡಿ, ರಾಜ್ಯದಲ್ಲಿ ಸುಮಾರು 10,400 ಗ್ರಾಮ ಸಹಾಯಕರಿದ್ದೇವೆ. ಕಂದಾಯ ಇಲಾಖೆಯ ಎಲ್ಲಾ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರತಿ ಗ್ರಾಮಗಳಲ್ಲಿ ತಿಳುವಳಿಕೆ ನೀಡಲು ಸಂದೇಶ ರವಾನಿಸಲು , ಹಾಗೂ ಚುನಾವಣಾ ಸಂದರ್ಭದಲ್ಲಿ ಗ್ರಾಮ ಸಹಾಯಕರ ಪಾತ್ರ ಬಹು ಮುಖ್ಯವಾಗಿರುತ್ತದೆ.
ಗ್ರಾಮ ಸಹಾಯಕ ಗ್ರಾಮ ಸೈನಿಕರಂತೆ ಕೆಲಸ ಮಾಡುತ್ತಾರೆ. ಮತಪೆಟ್ಟಿಗೆ ಹೊತ್ತು ಸಾಗಿಸುವುದರಿಂದ ಹಿಡಿದು ಕೌಟಿಂಗ್ ಮುಗಿಯುವವರೆಗೂ ನಮ್ಮದೇ ಆದ ಜವಾಬ್ದಾರಿ ಇರುತ್ತೆ. ಸರಿಯಾದ ಊಟ ನೀರಿನ ವ್ಯವಸ್ಥೆಯು ಇಲ್ಲದೆ ಹೆಂಡತಿ ಮಕ್ಕಳನ್ನು ಬಿಟ್ಟು ಕೆಲಸ ಮಾಡಿದ್ದೇವೆ. ಆದರೆ, ಕಂದಾಯ ಇಲಾಖೆ ನಮಗೆ ಕನಿಷ್ಠ ವೇತನ, ಗೌರವ ಭತ್ಯೆ, ಸೇವಾ ಭದ್ರತೆ ಯಾವ ಸೌಲಭ್ಯವನ್ನು ನೀಡಿಲ್ಲ. ನಮ್ಮ ಕುಟುಂಬ ಹಾಗೂ ಮಕ್ಕಳ ವಿದ್ಯಾಭ್ಯಾಸ ನಿರ್ವಹಣೆಗೆ ತುಂಬಾ ಕಷ್ಟವಾಗಿದೆ. ಬಳ್ಳಾರಿಯಲ್ಲಿ ಕೊರೋನ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಮೂರು ಜನ ಗ್ರಾಮ ಸಹಾಯಕರು ಕೊರೊನದಿಂದ ಸಾವನ್ನಪ್ಪಿದರು. ಖಾಯಂ ನೌಕರರಲ್ಲ ಎಂದು ಪರಿಗಣಿಸಿ ಅವರಿಗೆ ಯಾವುದೇ ಪರಿಹಾರವನ್ನು ನೀಡಲಿಲ್ಲ. ಇಂತಹ ಪರಿಸ್ಥಿತಿ ಬರಬಾರದು ಎಂದು ಮಾನ್ಯ ಮುಖ್ಯಮಂತ್ರಿಗಳಿಗೂ ಮನವಿ ಕೊಟ್ಟಿದ್ದೇವೆ.
ಈ ಕೂಡಲೇ ಡಿ ಗ್ರೂಪ್ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಇಲ್ಲವಾದರೆ ರಾಜ್ಯಾದಂತ ಗ್ರಾಮ ಸಹಾಯಕರೆಲ್ಲರೂ ಮುಂದಿನ ಚುನಾವನೆಗಳನ್ನು ಬಹಿಷ್ಕರಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಹಲೋ ಗ್ರಾಮ ಸಹಾಯಕ ಚಲೋ ಬೆಳಗಾಂ ಮಾಡು ಇಲ್ಲವೇ ಮಡಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಿರಸ್ತೆದಾರ್ ಶ್ರೀನಾಥ್, ರಾಜ್ಯ ಪ್ರದಾನ ಕಾರ್ಯದರ್ಶಿ ಬಿ. ಶಿವರುದ್ರಪ್ಪ, ಜಿಲ್ಲಾ ಅಧ್ಯಕ್ಸ ಬಸವರಾಜು, ತಾಲ್ಲೂಕು ಅಧ್ಯಕ್ಷ ಸತೀಶ್, ನಂಜುಂಡ, ಜವರಯ್ಯ, ಎಲ್ಲಾ ಗ್ರಾಮ ಸಹಾಯಕರು ಹಾಜರಿದ್ದರು.