ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಇಸಾಕ್ ಸ್ಥಾಪಿಸಿದ್ದ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಹೃದಯಹೀನರು
ಸಾಂಸ್ಕೃತಿಕ ನಗರಿ ಮೈಸೂರಿನ ಮುಸಲ್ಮಾನ ವ್ಯಕ್ತಿಯು ತಮ್ಮ ಕನ್ನಡ ಪ್ರೀತಿಯಿಂದಾಗಿ 11 ಸಾವಿರ ಗ್ರಂಥಗಳ ಗ್ರಂಥಾಲಯ ಸ್ಥಾಪಿಸಿ ಓದುಗರಿಗೆ ಆಸರೆಯಾಗಿದ್ದರು. ಧಾರ್ಮಿಕ ಸಾಮರಸ್ಯ ಸಂದೇಶವಿರುವ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಸಂಗ್ರಹಿಸಿದ್ದರು. ಆದರೆ, ವಿಶಾಲ ಹೃದಯದ ವ್ಯಕ್ತಿಯ ನಡೆಯನ್ನು ಸಹಿಸಲಾಗದವರು ಜ್ಞಾನಭಂಡಾರಕ್ಕೆ ಬೆಂಕಿ ಹಚ್ಚಿ ಪುಸ್ತಕಗಳನ್ನು ನಾಶ ಮಾಡಿರುವ ಘಟನೆ ರಾಜೀವ್ನಗರ 2ನೇ ಹಂತದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.