ವಿಶ್ವಕಪ್ ಗೆಲುವಿಗಾಗಿ ಭಾರತ ತಂಡದ ಪರ ವಿಶೇಷ ಪೂಜೆ

ವಿಶ್ವಕಪ್ ಗೆಲುವಿಗಾಗಿ ಭಾರತ ತಂಡದ ಪರ ವಿಶೇಷ ಪೂಜೆ

LK   ¦    Jun 05, 2019 03:56:26 PM (IST)
ವಿಶ್ವಕಪ್ ಗೆಲುವಿಗಾಗಿ ಭಾರತ ತಂಡದ ಪರ ವಿಶೇಷ ಪೂಜೆ

ಮೈಸೂರು: ಇದೀಗ ವಿಶ್ವಕಪ್ ಕ್ರಿಕೆಟ್ ಜ್ವರ ಆರಂಭವಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಭಾರತ ತಂಡ ಗೆಲ್ಲಬೇಕು ಎಂಬ ಬಯಕೆ ಹೊಂದಿದ್ದು ಅದಕ್ಕಾಗಿ ಪ್ರಾರ್ಥಿಸುತ್ತಿರುವುದು ಕಂಡು ಬರುತ್ತಿದೆ.

ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು ವಿಶ್ವಕಪ್ ನಲ್ಲಿ ಭಾರತ ಗೆದ್ದು ಬರಲಿ ಎಂದು ಪ್ರಾರ್ಥಿಸಿ ಭಾರತ ತಂಡದ ಆಟಗಾರರ ಹೆಸರಿನಲ್ಲಿ ಜಲಪುರಿ ಪೊಲೀಸ್ ಕ್ವಾರ್ಟರ್ಸ್ ವೃತ್ತದಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ಭಾರತ ತಂಡದ ನಾಯಕ ಸೇರಿದಂತೆ ಎಲ್ಲಾ ಆಟಗಾರರ ಹೆಸರಿನಲ್ಲಿ ಅರ್ಚನೆ ಸಂಕಲ್ಪ ಮತ್ತು ವಿಶೇಷ ಪೂಜೆ ಸಲ್ಲಿಸಲಾಗಿದೆ.

ಇದೇ ವೇಳೆ ವಿಶ್ವಕಪ್ ನಲ್ಲಿ ಭಾರತ ಗೆದ್ದು ಬರಲಿ ಎಂದು ನೆರೆದ ಕ್ರಿಕೆಟ್ ಪ್ರೇಮಿಗಳು ಜೈಕಾರ ಕೂಗಿದರು. ಬಳಿಕ ಮಾತನಾಡಿದ ಕ್ರಿಕೆಟ್ ಅಭಿಮಾನಿ ಲೋಹಿತ್ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯತ್ತ ಇಡೀ ವಿಶ್ವವೇ ನೋಡುವ ಸಂದರ್ಭದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿ ಭಾರತ ತಂಡದ ಆಟಗಾರರಿಗೆ ದೈವ ಪ್ರೇರಣೆಯಿರಲಿ ಎಂದು ಸಂಕಲ್ಪ ಮಾಡಿಸಲಾಗುತ್ತಿದೆ ಹಾಗೂ ಯುವಕರು ಕ್ರಿಕೆಟ್ ವೀಕ್ಷಣೆಯನ್ನು ಕ್ರೀಡಾ ಮನೋಭಾವದಿಂದ ಮಾತ್ರ ನೋಡಬೇಕೆ ಹೊರತು ಜೂಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುಬಾರದು. ಇದರಿಂದ ಭವಿಷ್ಯ ನಶಿಸಿ ಹೋಗುತ್ತದೆ. ಹಾಗಾಗಿ ಆರಕ್ಷಕ ಇಲಾಖೆ ಜೂಜುಕೋರರ ಮೇಲೆ ಗಮನಹರಿಸಿ ಕ್ರಮಕೈಗೊಳ್ಳಲು ಮುಂದಾಗಬೇಕು. ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯವೂ ಪ್ರಮುಖವಾಗಿದ್ದು ಇಲ್ಲಿಯವರೆಗೂ ಎಲ್ಲಾ ಪಂದ್ಯಾವಳಿಯನ್ನು ಭಾರತ ತಂಡ ಗೆದ್ದುಕೊಂಡು ಬಂದಿದ್ದು ಅದೇ ರೀತಿಯಲ್ಲಿ ವಿಜಯಗಳಿಸಿ ಇತಿಹಾಸ ನಿರ್ಮಿಸುವಂತಾಗಲಿ ಎಂದರು,

ಇದೇ ಸಂದರ್ಭದಲ್ಲಿ ಸಂತೋಷ್, ನವೀನ್ ಶೆಟ್ಟಿ, ಪ್ರಮೋದ್, ಮುತ್ತಣ್ಣ, ಮನೋಜ್, ಸವ್ಯ ಸಾಚಿ. ಚೇತನ್ ಹಾಗೂ ಇನ್ನಿತರ ಕ್ರೀಡಾ ಪ್ರೇಮಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.