ಹಳ್ಳಿ ಸೊಗಡಿನಲ್ಲಿ  ಮಕ್ಕಳ ಸಂಕ್ರಾಂತಿ ಸಂಭ್ರಮ

ಹಳ್ಳಿ ಸೊಗಡಿನಲ್ಲಿ  ಮಕ್ಕಳ ಸಂಕ್ರಾಂತಿ ಸಂಭ್ರಮ

LK   ¦    Jan 14, 2020 05:06:50 PM (IST)
ಹಳ್ಳಿ ಸೊಗಡಿನಲ್ಲಿ  ಮಕ್ಕಳ ಸಂಕ್ರಾಂತಿ ಸಂಭ್ರಮ

ಮೈಸೂರು: ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂಬ ಸಂದೇಶ ಸಾರುವ ಸಂಕ್ರಾಂತಿ ಹಬ್ಬವನ್ನು ಮೈಸೂರಿನ ಕನಕದಾಸ ನಗರದ ಕೌಟಿಲ್ಯ ವಿದ್ಯಾಲಯದ ಮಕ್ಕಳು ಹಳ್ಳಿ ಸೊಗಡಿನಲ್ಲಿ ಆಚರಿಸಿ ಹಬ್ಬದ ಮಹತ್ವನ್ನು ಸಾರಲಾಯಿತು.

ಶಾಲೆಯ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ವಿಭಾಗದ ಹೆಣ್ಣುಮಕ್ಕಳು ಹೊಸ ಉಡುಗೆ ತೊಟ್ಟು ಎಳ್ಳುಬೆಲ್ಲ ಹಂಚಿ ಶುಭಕೋರಿದೆ. ಗಂಡು ಮಕ್ಕಳು, ಹಸು-ಕರುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸುವ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾದರು.

ಶಾಲೆಯ ಆವರಣದ ವೇದಿಕೆಯಲ್ಲಿ ಸಿಹಿ ಪೊಂಗಲ್ ತಯಾರಿಕೆಗೆ ಒಲೆ ಹೊತ್ತಿಸುವ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲೆಯ ವಿದ್ಯಾರ್ಥಿ ಪೋಷಕರಾದ ತೇಜಸ್ವಿನಿ ಅವರು ಸಂಕ್ರಾಂತಿ ಸಗಡರಕ್ಕೆ ಚಾಲನೆ ನೀಡಿ, ಮಕ್ಕಳಿಗೆ ಸಂಕ್ರಾಂತಿ ಮಹತ್ವ ತಿಳಿಸಿದರು.

ಸಂಕ್ರಾಂತಿ ದಿನದಂದೇ ಹುಟ್ಟುಹಬ್ಬ ಆಚರಿಸಿಕೊಂಡ ಶಾಲೆಯ ಮೂರು ಹೆಣ್ಣು ಮಕ್ಕಳಿಗೆ ಶಾಲೆಯ ಶಿಕ್ಷಕಿಯರು ಆರತಿ ಬೆಳಗಿ ಹರಸಿದರು. ಅಂತೆಯೇ ಗೋವಿನ ಪಾದ ಪೂಜೆ ಮಾಡಿ ಗೋಮಾತೆಯನ್ನು ಆರಾಧಿಸಲಾಯಿತು.

ಮೂರು ಹಾಗೂ ನಾಲ್ಕನೇ ತರಗತಿ ಮಕ್ಕಳು ನಡೆಸಿಕೊಟ್ಟ ಜನಪದ ಸೊಗಡಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಕರ್ನಾಟಕ ಮಾತ್ರವಲ್ಲದೆ ಪಂಜಾಬ್, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಯ ಬಗೆಯನ್ನು ಆಯಾ ರಾಜ್ಯದ ವೇಷಭೂಷಣದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪರಿಚಯಿಸಿದ್ದು ವಿಶೇಷವಾಗಿತ್ತು. ಶಾಲೆಯ ಉಪಪ್ರಾಂಶುಪಾಲರಾದ ರಾಧಿಕಾ, ಕಿಂಡರ್ ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿಯರಾದ ಸ್ನೇಹ, ಯಶಿಕಾ ಹಾಗೂ ಶಿಕ್ಷಕಿ ಹೇಮಮಾಲಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More Images