ಆನೆಗಳಿಗೆ ಕಬ್ಬು ಬೆಲ್ಲ ತಿನ್ನಿಸಿದ ಸಚಿವ ಸೋಮಶೇಖರ್‌

ಆನೆಗಳಿಗೆ ಕಬ್ಬು ಬೆಲ್ಲ ತಿನ್ನಿಸಿದ ಸಚಿವ ಸೋಮಶೇಖರ್‌

CI   ¦    Oct 16, 2020 02:54:53 PM (IST)
ಆನೆಗಳಿಗೆ ಕಬ್ಬು ಬೆಲ್ಲ ತಿನ್ನಿಸಿದ ಸಚಿವ ಸೋಮಶೇಖರ್‌

ಮೈಸೂರು: ನಾಳೆ ನಡೆಯಲಿರುವ ದಸರಾ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಂದು ಅರಮನೆ ಆವರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಭೇಟಿ ನೀಡಿ ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಯ ಯೋಗ ಕ್ಷೇಮವನ್ನು ಮಾವುತರ ಬಳಿ ವಿಚಾರಿಸಿದರು. ಮಾವುತರು, ಕಾವಾಡಿಗಳ ಸಮ್ಮುಖದಲ್ಲಿ ಗಜಪಡೆಗೆ ಕಬ್ಬು ಬೆಲ್ಲ ತಿನ್ನಿಸಿದರು.

ಸಚಿವ ಸೋಮಶೇಖರ್ ಅವರಿಗೆ ಶಾಸಕರಾದ ಎಸ್. ಎ. ರಾಮದಾಸ್, ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಎಚ್. ವಿ. ರಾಜೀವ್ ಸಾಥ್ ನೀಡಿದರು.

ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಆರ್.ಆರ್.ನಗರದಲ್ಲಿ ಡಿಕೆಶಿವಕುಮಾರ್ ಗೆಲ್ಲೋಕಾಗಲ್ಲ. ಅದಕ್ಕೆ ಪಿಳ್ಳೆನೆಪ ಹುಡುಕಿಕೊಂಡು ಮಾತನಾಡುತ್ತಿದ್ದಾರೆ. ನೀತಿ ಸಂಹಿತೆ ಯಾರೇ ಉಲ್ಲಂಘನೆ ಮಾಡಿದರೂ ಎಫ್ ಐ ಆರ್ ಹಾಕುತ್ತಾರೆ. ಪೊಲೀಸರು ಅವರ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಮುನಿರತ್ನ ಮೇಲೂ ಎಫ್ ಐ ಆರ್ ಹಾಕಿದ್ದರು. ಸ್ವಲ್ಪ ವ್ಯತ್ಯಾಸ ಆಗಿದ್ದರೆ ಮುನಿರತ್ನ ಜೈಲಿಗೆ ಹೋಗಬೇಕಿತ್ತು. ಈಗ ಕೋರ್ಟ್ ತೀರ್ಪು ಬಂದು ಮತ್ತೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಅಬ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದಿದರುವ ಶಿವಕುಮಾರ್ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.