ಮೈಸೂರು: ಮಳೆಗೆ ಮರ ಬಿದ್ದು ನಾಲ್ಕು ದ್ವಿಚಕ್ರ  ವಾಹನಗಳು  ಜಖಂ 

ಮೈಸೂರು: ಮಳೆಗೆ ಮರ ಬಿದ್ದು ನಾಲ್ಕು ದ್ವಿಚಕ್ರ  ವಾಹನಗಳು  ಜಖಂ 

CI   ¦    May 19, 2020 02:34:02 PM (IST)
ಮೈಸೂರು: ಮಳೆಗೆ ಮರ ಬಿದ್ದು ನಾಲ್ಕು ದ್ವಿಚಕ್ರ  ವಾಹನಗಳು  ಜಖಂ 

ಮೈಸೂರು: ನಗರದ ಹಾರ್ಡಿಂಜ್‌  ವೃತ್ತದಲ್ಲಿ ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ಮರವೊಂದು  ಉರುಳಿ ಬಿದ್ದು  ನಾಲ್ಕು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಈ ನಾಲ್ಕು  ವಾಹನಗಳೂ ದೇವರಾಜ ಪೋಲೀಸ್‌ ಠಾಣೆಯ ಸಿಬ್ಬಂದಿ ಮತ್ತು ಹೋಂ  ಗಾರ್ಡ್‌ ಗಳಿಗೆ ಸೇರಿದವುಗಳಾಗಿವೆ. 

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮರ ಬೀಳುವ ವೇಳೆ ಹೋಂ ಗಾರ್ಡ್ ಗಳಾದ ಛಾಯಾದೇವಿ ಹಾಗೂ ನರಸಮ್ಮ ಅಲ್ಲಿಯೇ ಕುಳಿತಿದ್ದರು. ಮರ ಬೀಳುವ ಶಬ್ಧ ಕೇಳಿ ಅಲ್ಲಿಂದ ಓಡಿದರು.

ಇಲ್ಲವಾದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಈ ವೇಳೆ ಹೋಂ ಗಾರ್ಡ್ ಛಾಯಾದೇವಿ ಅವರ ಬೆನ್ನಿಗೆ ಸ್ವಲ್ಪ ಗಾಯವಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಂದು  ಮರ ತೆರವುಗೊಳಿಸಿದ್ದಾರೆ.