ಎಂಟು ಮಂದಿ ದರೋಡೆ ಕೋರರ ಬಂಧನ

ಎಂಟು ಮಂದಿ ದರೋಡೆ ಕೋರರ ಬಂಧನ

CI   ¦    Sep 16, 2020 12:16:08 PM (IST)
ಎಂಟು ಮಂದಿ ದರೋಡೆ ಕೋರರ ಬಂಧನ

ಮೈಸೂರು:  ದರೋಡೆ ಮಾಡಲು ಹೊಂಚು ಹಾಕುತಿದ್ದ ಎಂಟು ಮಂದಿ ದರೋಡೆಕೋರರನ್ನು ಇಲ್ಲಿನ ಸರಸ್ವತಿಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಅರೋಪಿಗಳನ್ನು  ಶರತ್, ಸುಮಂತ್, ಧರ್ಮೇಶ್, ದಿನೇಶ್, ಸುನಿಲ್ ಕುಮಾರ್, ಶಶಾಂಕ್, ಕಾರ್ತಿಕ್, ಮಹದೇವ್  ಎಂದು ಗುರುತಿಸಲಾಗಿದ್ದು, ಇವರು ಈ ಹಿಂದೆ ಸರಸ್ವತಿಪುರಂ ಪೊಲೀಸ್ ಠಾಣೆ, ವಿದ್ಯಾರಣ್ಯಪುರಂ ಪೊಲೀಸ್ ಠಾಣೆ, ಲಕ್ಷ್ಮಿಪುರಂ ಪೊಲೀಸ್ ಠಾಣೆ, ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಹಾಗೂ ಕೆ.ಆರ್.ಪೊಲೀಸ್ ಠಾಣೆ ಕೊಲೆಯತ್ನ ಪ್ರಕರಣದಲ್ಲಿ  ಭಾಗಿ ಆಗಿದ್ದರು.

ಈ  ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ, ಸರಸ್ವತಿ ಪುರಂ ಠಾಣೆ ಪೊಲೀಸರು ಕಳೆದ  ಸೆ.9 ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಭೋಗಲಿಂಗೇಶ್ವರ ದೇವಸ್ಥಾನದ ಹತ್ತಿರ  ಪಾರ್ಕ್‌ ಮಾಡಿದ್ದ ಓಮ್ನಿ ಕಾರಿನ ಹತ್ತಿರ ಎಂಟು ಮಂದಿ ನಿಂತಿದ್ದರು. ಅನುಮಾನ ಬಂದು ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಬೋಗಾದಿ ರಿಂಗ್ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಮತ್ತು ವಾಹನ ಸವಾರರನ್ನು ಹೆದರಿಸಿ ಅವರಿಂದ ಹಣ ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ತಿಳಿದುಬಂದಿದೆ.

ನಂತರ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳಿಂದ 6 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಕಾರು, 4 ಬೈಕ್/ಸ್ಕೂಟರ್, 11 ಮೊಬೈಲ್‌ಗಳು, ಒಂದು ಹಾಕಿ ಸ್ಟಿಕ್, ಎರಡು ಡ್ರಾಗನ್ ಚಾಕು, ಐದು ಮಂಕಿ ಕ್ಯಾಪ್, ಐದು ಖಾರದ ಪುಡಿ ಪ್ಯಾಕೇಟ್‌ಗಳು, ಒಂದು ರಾಡ್, ಮೂರು ವಿಕೆಟ್‌, ಒಂದು ಲಾಂಗ್ ವಶಪಡಿಸಿಕೊಳ್ಳಲಾಗಿದೆ ಎಂದರು.

ಈ ಪ್ರಕರಣದಿಂದ ಒಟ್ಟು ಐದು ಪ್ರಕರಣಗಳು ಪತ್ತೆಯಾಗಿವೆ ಎಂದೂ ಅವರು ತಿಳಿಸಿದರು.