ಮಧುಮಲೈನಲ್ಲಿ ಹುಲಿ ಸಾವು: ಎರಡು ಮರಿಗಳ ರಕ್ಷಣೆ

ಮಧುಮಲೈನಲ್ಲಿ ಹುಲಿ ಸಾವು: ಎರಡು ಮರಿಗಳ ರಕ್ಷಣೆ

LK   ¦    Nov 21, 2020 05:40:35 PM (IST)
ಮಧುಮಲೈನಲ್ಲಿ ಹುಲಿ ಸಾವು: ಎರಡು ಮರಿಗಳ ರಕ್ಷಣೆ

ಗುಂಡ್ಲುಪೇಟೆ: ಬಂಡೀಪುರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೈ  ಅರಣ್ಯ ಪ್ರದೇಶ ದಲ್ಲಿ ಹುಲಿ ಸಾವನ್ನಪ್ಪಿದ್ದು, ಎರಡು ಹುಲಿ ಮರಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಮಸಿಣಗುಡಿ ಭಾಗದ ಸಿಂಗರಾ ಪ್ರದೇಶದಲ್ಲಿ  ಹುಲಿಯೊಂದು ಸಾವನ್ನಪ್ಪಿದ್ದರೆ, ಅದೇ ಪ್ರದೇಶದಲ್ಲಿ  ಎರಡು ಗಂಡು ಹುಲಿ ಮರಿಗಳು ಪತ್ತೆಯಾಗಿವೆ. ಹುಲಿ ಸಾವಿನ ತನಿಖೆ ನಡೆಸುವಾಗ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿಗೆ ಬೆಳಿಗ್ಗೆ ಮರಿಗಳು ಸಿಕ್ಕಿದ್ದು ಅವುಗಳನ್ನು ರಕ್ಷಿಸಲಾಗಿದೆ. ಎರಡು ತಿಂಗಳ ಹಿಂದೆ ಐದು ಕೆನ್ನಾಯಿಗಳು ಇದೇ ಸ್ಥಳದಲ್ಲಿ ಪಾಶಾಣದಿಂದ ಸಾವನ್ನಪ್ಪಿದ್ದವು. ಅದೇ ರೀತಿ ಹುಲಿಯೂ ಸಾವನ್ನಪ್ಪಿದೆಯಾ ಎಂಬ ಸಂಶಯ ವ್ಯಕ್ತವಾಗಿದೆ.

ಜುಲೈನಲ್ಲಿ ಮಸಿಣಗುಡಿಯಲ್ಲಿ ಹುಲಿಯೊಂದು ಅಲ್ಲಿನ ಬುಡಕಟ್ಟು ಮಹಿಳೆಯನ್ನು ಕೊಂದಾಗಿನಿಂದಲೂ ಈ ರೀತಿಯ ಘಟನೆಗಳು ನಡೆಯುತ್ತಿವೆ. ಈ ಕುರಿತು ರಾಷ್ಟ್ರೀಯ ಸಂರಕ್ಷಣಾ ಪ್ರಾಧಿಕಾರ ಎನ್‍ಟಿಸಿಎ ಕೂಡ ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದರು.

ಹುಲಿ ಸಾವಿಗೆ ನಿಖರವಾದ ಕಾರಣ ತಿಳಿಯಲು ವಿಧಿ ವಿಜ್ಞಾನ ವರದಿಗೆ ಕಾಯುತ್ತಿದ್ದಾರೆ  ಮರಿಗಳ ವಿಚಾರದಲ್ಲಿ ನಾವು ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಎನ್ ಟಿಸಿಎ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಮಧು ಮಲೈ ಹುಲಿ ಸಂರಕ್ಷಿತ ಪ್ರದೇಶ ಉಪನಿರ್ದೇಶಕ ಶ್ರೀಕಾಂತ ತಿಳಿಸಿದ್ದಾರೆ.