ತಾಯಿ ಅಂತ್ಯ ಸಂಸ್ಕಾರಕ್ಕೆ ಬಂದ ಮಗನಿಗೆ ಹೃದಯಾಘಾತ

ತಾಯಿ ಅಂತ್ಯ ಸಂಸ್ಕಾರಕ್ಕೆ ಬಂದ ಮಗನಿಗೆ ಹೃದಯಾಘಾತ

May 17, 2021 08:19:51 AM (IST)
ತಾಯಿ   ಅಂತ್ಯ ಸಂಸ್ಕಾರಕ್ಕೆ ಬಂದ ಮಗನಿಗೆ ಹೃದಯಾಘಾತ

ಚಾಮರಾಜನಗರ: ಕೊರೊನಾಗೆ ಬಲಿಯಾದ ತಾಯಿಯನ್ನು ಕೊನೆಯ ಬಾರಿಗೆ ನೋಡಲೆಂದು ಬಂದ ಮಗನೂ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಚಾಮರಾಜನಗರ ತಾಲೂಕಿನ ಹುರುಳಿನಂಜನಪುರ ಗ್ರಾಮದಲ್ಲಿ ನಡೆದಿದೆ.ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರ ಅತ್ತೆ ಸರೋಜಮ್ಮ(76) ಶುಕ್ರವಾರ ರಾತ್ರಿ ಕೊರೊನಾದಿಂದ ಮೃತಪಟ್ಟಿದ್ದರು. ತಾಯಿಯನ್ನು ಕೊನೆಬಾರಿಗೆ ಕಾಣಲು ಬೆಂಗಳೂರಿನಿಂದ ಬಂದಿದ್ದ ಮಗ ಸುರೇಶ್ ಕುಮಾರ್ (53) ಕೂಡ ಅಂತ್ಯಕ್ರಿಯೆ ನಡೆಯುವ ಜಾಗದಿಂದ ಸ್ವಲ್ಪ ದೂರದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದಾರೆ. ತಾಯಿ, ಮಗ ಇಬ್ಬರೂ ಒಂದೇ ದಿನ ಸಾವನ್ನಪ್ಪಿದ್ದು, ನೀರವ ಮೌನ ಆವರಿಸಿದೆ.