ಫ್ರೀ ಕಾಶ್ಮೀರ ಫಲಕ ಹಿಡಿದಿದ್ದ ಯುವತಿ ಪರ ವಕಾಲತ್ತು ವಹಿಸದಿರಲು ವಕೀಲರ ಸಂಘ ನಿರ್ಣಯ

ಫ್ರೀ ಕಾಶ್ಮೀರ ಫಲಕ ಹಿಡಿದಿದ್ದ ಯುವತಿ ಪರ ವಕಾಲತ್ತು ವಹಿಸದಿರಲು ವಕೀಲರ ಸಂಘ ನಿರ್ಣಯ

HSA   ¦    Jan 14, 2020 02:53:37 PM (IST)
ಫ್ರೀ ಕಾಶ್ಮೀರ ಫಲಕ ಹಿಡಿದಿದ್ದ ಯುವತಿ ಪರ ವಕಾಲತ್ತು ವಹಿಸದಿರಲು ವಕೀಲರ ಸಂಘ ನಿರ್ಣಯ

ಮೈಸೂರು: ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಫಲಕ ಹಿಡಿದ ಯುವತಿ ಬಿ.ನಳಿನಿ ಪರವಾಗಿ ವಕಾಲತ್ತು ನಡೆಸಬಾರದು ಎಂದು ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಮಂಗಳವಾರ ನಿರ್ಣಯ ತೆಗೆದುಕೊಂಡಿದೆ.

ಇದು ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ವಿಚಾರವಾಗಿದೆ. ಇಂತಹ ಕೃತ್ಯದ ಪರವಾಗಿ ವಕಾಲತ್ತು ವಹಿಸುವುದು ಸರಿಯಲ್ಲ. ಬಹುಮತದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಶಿವಪ್ಪ ತಿಳಿಸಿದರು.

ಕೆಲವು ವಕೀಲರು ನಳಿನಿ ಪರವಾಗಿ ವಕಾಲತ್ತು ವಹಿಸದಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಪತ್ರ ಬರೆದಿದ್ದರು ಎಂದು ಶಿವಪ್ಪ ಹೇಳಿದರು.