ಗುಪ್ತವಾಗಿ ನಡೆದ ಸಿಎಂ ಫಾರಂ ಹೌಸ್ ನ ಗೃಹಪ್ರವೇಶ

ಗುಪ್ತವಾಗಿ ನಡೆದ ಸಿಎಂ ಫಾರಂ ಹೌಸ್ ನ ಗೃಹಪ್ರವೇಶ

Nov 16, 2015 05:40:56 PM (IST)

ಮೈಸೂರು: ನಗರದ ಹೊರಭಾಗದ ಟಿ.ಕಾಟೂರಿನಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಮಿಸಿದ ಭವ್ಯವಾದ ಫಾರಂ ಹೌಸ್ ನ ಗೃಹಪ್ರವೇಶ ಭಾನುವಾರ ಗುಪ್ತವಾಗಿ ನಡೆಯಿತು.

ಎಂಟು ಮಂದಿ ಪುರೋಹಿತರು ಬೆಳ್ಳಗ್ಗೆಯಿಂದಲೇ ವಿವಿಧ ಹೋಮ ಹವನ ಯಜ್ಞಗಳನ್ನು  ನೇರವೇರಿಸಿದರು. ಈ ಹೋಮದಲ್ಲಿ ಸಿಎಂ ಸಿದ್ಧರಾಮಯ್ಯ ಪತ್ನಿ ಸಮೇತ ಭಾಗವಹಿಸಿದ್ದು ಎಲ್ಲವೂ ಗುಪ್ತವಾಗಿ ನಡೆಯಿತು. ಆದರೆ ಸಿಎಂ ಯಾಕೆ ಗೃಹಪ್ರವೇಶವನ್ನು ಗುಪ್ತವಾಗಿ ನೆರವೇರಿಸಿದರೆಂಬುದು ಎಲ್ಲರಿಗೂ ಪ್ರಶ್ನೆಯಾಗಿ ಉಳಿದಿದೆ.

 ಕಳೆದ ಎರಡು ವರ್ಷಗಳ ಹಿಂದೆ ಸುಮಾರು 8 ಎಕರೆ ತೋಟವನ್ನು ಸಿಎಂ ಸಿದ್ಧರಾಮಯ್ಯನವರು ಖರೀದಿಸಿದ್ದರು. ಈಗ ಈ ತೋಟದ ಮನೆಯಲ್ಲಿ ಭವ್ಯವಾದ ಫಾರಂ ಹೌಸ್ ನ ನಿರ್ಮಾಣ ಮಾಡಿದ್ದು, ನಿನ್ನೆ ಗೃಹಪ್ರವೇಶಕ್ಕೆ ಕೇವಲ ಆಪ್ತ ಕುಟುಂಬ ಸದಸ್ಯರಿಗೆ ಮಾತ್ರ ಭಾಗವಹಿಸಿದ್ದು, ಯಾವುದೇ ರಾಜಕಾರಣಿಗಳಾಗಲಿ, ಸ್ನೇಹಿತರಾಗಲಿ ಪಾಲ್ಗೊಂಡಿರಲಿಲ್ಲ.

ರಾಜಕೀಯ ನಿವೃತ್ತಿಯ ನಂತರ ತಮ್ಮ ಕೊನೆ ದಿನಗಳನ್ನು ತೋಟದ ಮನೆಯಲ್ಲಿ ಕಳೆಯುವ ಆಸೆಯಿಂದ ಅಧಿಕಾರವಿದ್ದಾಗಲೇ ಒಂದು ಒಳ್ಳೆಯ ಫಾರಂ ಹೌಸ್ ಕಟ್ಟಿಸಿಕೊಂಡಿರುವ ಸಿಎಂ ಸಿದ್ಧರಾಮಯ್ಯ ರಾಜಕೀಯ ನಿವೃತ್ತಿಯ ವಯಸ್ಸನ್ನು ತೋಟದಲ್ಲಿ ಹೆಂಡತಿ ಜತೆ ಕಳೆಯುವ ಇಚ್ಛೆಯಿಂದ ಟಿ. ಕಾಟೂರಿನ ತೋಟದಲ್ಲಿ ಭವ್ಯವಾದ ಫಾರಂಹೌಸ್ ವೊಂದನ್ನು ಕಟ್ಟಿಸಿಕೊಂಡಿದ್ದಾರೆ. ಅದಕ್ಕೆ ನಿನ್ನೆ ಇದರ ಗೃಹ ಪವೇಶ ಮಾಡಿದ್ದು ಅದಕ್ಕೆ ನಿನ್ನೆ ಆಯ್ದ ಕುಟುಂಬ ಸದಸ್ಯರ ಮಾತ್ರ ಆಹ್ವಾನ ನೀಡಿದ್ದ ಈ ಗೃಹಪ್ರವೇಶದಲ್ಲಿ ಬೆಳ್ಳಗ್ಗೆಯಿಂದಲೇ ಹೋಮ ಹವನಗಳು, ಪೂಜೆ ಗಳು ಎಲ್ಲಾ ಗೃಹ ಪ್ರವೇಶ ಶಾಸ್ತ್ರಗಳನ್ನು ಸಿಎಂ ಧರ್ಮಪತ್ನಿ ಪಾರ್ವತಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಡೆಯಿತು.

ಫಾರಂಹೌಸ್ ತೋಟದ ಮನೆಯ ಗೃಹಪ್ರವೇಶವನ್ನು ಚಿತ್ರೀಕರಿಸಲು ಹೋಗಿದ್ದ ಖಾಸಗಿ ವಾಹಿನಿ ಕ್ಯಾಮರಾಮೆನ್ನ ಕ್ಯಾಮರಾವನ್ನು ಕಸಿದು ಕ್ಯಾಮರಾ ಚಿಪ್ಪನ್ನು ತೆಗೆದುಕೊಂಡು ವಿಡಿಯೋ ಕ್ಲಿಪಿಂಗ್ ಡಿಲಿಟ್ ಮಾಡಿ 2 ಗಂಟೆಗಳ ನಂತರ ಚಿಪ್ಪನ್ನು ವಾಪಾಸ್ ಕೊಡಲಾಯಿತು.  ಈಗ ಮೈಸೂರಿನಲ್ಲಿ ಸಿಎಂ ಅವರ ತೋಟದ ಮನೆಯ ಗೃಹಪ್ರವೇಶ ಗುಪ್ತವಾಗಿ ನಡೆದಿದ್ದು ಏಕೆ ಎಂಬುದು ಎಲ್ಲಾ ಕಡೆ ಚರ್ಚೆಗೆ ಗ್ರಾಸವಾಗಿದೆ.