ತುಂಬಿ ಹರಿದ ಮೂಲೆಹೊಳೆ: ಕೇರಳ ಸಂಪರ್ಕ ಕಡಿತ

  ತುಂಬಿ ಹರಿದ ಮೂಲೆಹೊಳೆ: ಕೇರಳ ಸಂಪರ್ಕ ಕಡಿತ

LK   ¦    Aug 09, 2020 02:11:55 PM (IST)
     ತುಂಬಿ ಹರಿದ ಮೂಲೆಹೊಳೆ: ಕೇರಳ ಸಂಪರ್ಕ ಕಡಿತ

ಚಾಮರಾಜನಗರ: ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಂಡೀಪುರಕ್ಕೆ ಹರಿದು ಬರುತ್ತಿರುವ ಮೂಲೆಹೊಳೆ ನದಿ ರೌದ್ರಾವತಾರ ತಾಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದ್ದು ಕೇರಳಕ್ಕೆ ತೆರಳಬೇಕಾದ ಲಾರಿ ಸೇರಿದಂತೆ ಹಲವು ವಾಹನಗಳು ಸಾಲುಗಟ್ಟಿ ನಿಂತಿದ್ದು, ಆಹಾರವಿಲ್ಲದೆ ಚಾಲಕರು ಪರದಾಡುವಂತಾಗಿದೆ.

 

ಕೇರಳದಲ್ಲಿ ಧಾರಾಕಾರವಾಗಿ ಆಗಸ್ಟ್ ತಿಂಗಳಲ್ಲಿ ಮಳೆ ಸುರಿಯುತ್ತಿರುವುದರಿಂದ ಕಳೆಸ ಎರಡು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿ ಈ ರೀತಿಯ ಸಮಸ್ಯೆವುಂಟಾಗುತ್ತಿದೆ. ಕೇರಳಕ್ಕೆ ಹೊಂದಿಕೊಂಡಂತೆ ಗುಂಡ್ಲುಪೇಟೆ ಗಡಿಭಾಗವಿದ್ದು, ಈ ವ್ಯಾಪ್ತಿಯಲ್ಲಿಯೂ ಮಳೆ ಸುರಿಯುತ್ತಿದೆ. ಮೂಲೆಹೊಳೆ ಅಪಾಯಮಟ್ಟ ಮೀರಿ ಹರಿಯುತ್ತಿರುವುದರಿಂದ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದ್ದು ಸರಕು ಸಾಗಾಣಿಕೆ ಲಾರಿಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ.

 

ನದಿ ಪ್ರವಾಹದಿಂದಾಗಿ ಗುಂಡ್ಲುಪೇಟೆ ಮೂಲೆಹೊಳೆ ಚೆಕ್ ಪೆÇೀಸ್ಟ್ ಸಂಪೂರ್ಣ ಜಲಾವೃತವಾಗಿದ್ದು ಸರಕು ಸಾಗಾಣಿಕೆ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ. ಕೇರಳದ ಮುತ್ತಂಗದಲ್ಲಿರುವ ಶ್ರೀರಾಮನ ದೇಗುಲವು ಸಂಪೂರ್ಣವಾಗಿ ಜಲಾವೃತವಾಗಿದೆ. ಸುಮಾರು ಐನೂರಕ್ಕೂ ಹೆಚ್ಚು ಸರಕು ವಾಹನಗಳು ಸಾಲುಗಟ್ಟಿ ನಿಂತಿದ್ದು, ಅದರ ಚಾಲಕರು ಹಸಿವಿನಿಂದ ಪರದಾಡುವಂತಾಗಿದೆ. ಜತೆಗೆ ವಾಹನಗಳು ಕೇರಳಕ್ಕೆ ತೆರಳಲಾಗದೆ ವಾಪಸ್ ಮರಳಿ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕನ್ನೇಗಾಲ ಮತ್ತು ಮದ್ದೂರು ಸಮೀಪ ಹೆದ್ದಾರಿ ಪಕ್ಕದಲ್ಲಿ ಸಾಲುಗಟ್ಟಿ ನಿಂತಿರುವ ಲಾರಿ ಚಾಲಕ ಮತ್ತು ಕ್ಲೀನರುಗಳಿಗೆ ಕನ್ನೇಗಾಲ ಗ್ರಾಮದ ಯುವಕರು ಒಂದು ಕ್ವಿಂಟಾಲ್ ನಲ್ಲಿ ಬಾತ್ ಹಾಗೂ ನೀರು ನೀಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ

 

ಸತತ ಮಳೆಯಿಂದಾಗಿ ಎರಡು ರಾಜ್ಯಗಳು ಸಂಪರ್ಕಕಡಿತವಾಗಿರುವ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮೂಲೆÉಹೊಳೆ ವಲಯಕ್ಕೆ ಹೊಂದಿಕೊಂಡಿರುವ ಪೆÇಂಗಳ್ಳಿ ಸಮೀಪದ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ವೀಕ್ಷಣೆ ಮಾಡಿ ಅರಣ್ಯಾಧಿಕಾರಿಗಳಿಗೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಕಟ್ಟು ನಿಟ್ಡಿನ ನಿಗವಹಿಸುವಂತೆ ಸೂಚನೆ ನೀಡಿದ್ದಾರೆ.