ದೇಶದ ರಕ್ಷಣೆಗಾಗಿ ಎನ್ಆರ್ ಸಿ ಅಗತ್ಯವಿದೆ: ಬೈರಪ್ಪ

ದೇಶದ ರಕ್ಷಣೆಗಾಗಿ ಎನ್ಆರ್ ಸಿ ಅಗತ್ಯವಿದೆ: ಬೈರಪ್ಪ

HSA   ¦    Jan 10, 2020 08:29:48 PM (IST)
ದೇಶದ ರಕ್ಷಣೆಗಾಗಿ ಎನ್ಆರ್ ಸಿ ಅಗತ್ಯವಿದೆ: ಬೈರಪ್ಪ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಸನ್ಯಾಸಿ, ಅವರ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗುತ್ತಿದೆ. ಇದು ಕೊಳಕು ರಾಜಕೀಯ ಎಂದು ಲೇಖಕ, ಕಾದಂಬರಿಕಾರ ಎಸ್ ಎಲ್ ಬೈರಪ್ಪ ಅವರು ಹೇಳಿದರು.

ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿರಾಶ್ರಿತರಿಂದ ದೇಶದ ರಕ್ಷಣೆಗಾಗಿ ಎನ್ ಆರ್ ಸಿ ಅಗತ್ಯವಾಗಿದೆ. ಇಂದು ದೇಶದೆಲ್ಲೆಡೆಯಲ್ಲಿ ನಿರಾಶ್ರಿತರು ಹಬ್ಬಿಕೊಂಡಿದ್ದಾರೆ. ಇವರನ್ನೆಲ್ಲಾ ಅವರ ಸ್ವದೇಶಕ್ಕೆ ಹಿಂತಿರುಗಿಸುವ ಕೆಲಸವಾಗಬೇಕಾಗಿದೆ ಎಂದರು.

ವಿದ್ಯಾರ್ಥಿಗಳು ಓದು ಹಾಗೂ ಬರಹದಲ್ಲಿ ಪಾಲ್ಗೊಳ್ಳಬೇಕೇ ಹೊರತು ಹಿಂಸೆಯಲ್ಲಿ ಅಲ್ಲ. ಜೆಎನ್ ಯು ಗಾಳಿಯು ಮೈಸೂರು ವಿಶ್ವವಿದ್ಯಾಲಯಕ್ಕೂ ಹಬ್ಬಿದೆ. ವಿವಿಗಳನ್ನು ತೆರಿಗೆ ಹಣದಿಂದ ನಡೆಸಲಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಗಮನದಲ್ಲಿಡಬೇಕು. ರಾಜಕೀಯ ಬಿಟ್ಟು ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೆಎನ್ ಯು ವಿದ್ಯಾರ್ಥಿಗಳ ದಾರಿ ತಪ್ಪಿಸಲಾಗಿದೆ. ಮೋದಿ ಅವರು 370ನೇ ವಿಧಿಯನ್ನು ತೆಗೆದು ಹಾಕಿ ದಿಟ್ಟ ನಿರ್ಧಾರ ತೆಗೆದುಕೊಂಡಿರುವರು. ಇದು ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.