ನಾವು ಯಾರ ಮೇಲೂ ದಾಳಿ ನಡೆಸಿದ ಇತಿಹಾಸವಿಲ್ಲ: ವೆಂಕಯ್ಯ ನಾಯ್ಡು

ನಾವು ಯಾರ ಮೇಲೂ ದಾಳಿ ನಡೆಸಿದ ಇತಿಹಾಸವಿಲ್ಲ: ವೆಂಕಯ್ಯ ನಾಯ್ಡು

YK   ¦    Nov 03, 2019 10:45:51 AM (IST)
ನಾವು ಯಾರ ಮೇಲೂ ದಾಳಿ ನಡೆಸಿದ ಇತಿಹಾಸವಿಲ್ಲ: ವೆಂಕಯ್ಯ ನಾಯ್ಡು

ಮೈಸೂರು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶನಿವಾರ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಶನಿವಾರ ನಡೆದ 10ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಯಾವುದೇ ದೇಶದ ಮೇಲೆ ಆಕ್ರಮಣ ನಡೆಸುವ ಉದ್ದೇಶ ಭಾರತಕ್ಕಿಲ್ಲ. ವಿದೇಶಿಗರೂ ಭಾರತದ ಸಂಪತ್ತು ಲೂಟಿ ಮಾಡಿದರು ಹೊರತು ಇದುವರೆಗೆ ನಾವು ಯಾರ ಮೇಲೂ ದಾಳಿ ಮಾಡಿದ ಇತಿಹಾಸವಿಲ್ಲ.

ಸಂವಿಧಾನದ ೩೭೦ನೇ ವಿಧಿ ರದ್ದು ಮಾಡಿರುವುದು ನಮ್ಮ ಆಂತರಿಕ ವಿಚಾರ. ಈ ವಿಷಯದಲ್ಲಿ ಹೊರಗಿನವರು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.