ಕೊಡಗು ಆಘೋಷಿತ ಬಂದ್: ವ್ಯಾನ್ಗೆ ಬೆಂಕಿ

ಕೊಡಗು ಆಘೋಷಿತ ಬಂದ್: ವ್ಯಾನ್ಗೆ ಬೆಂಕಿ

Nov 11, 2015 05:03:31 PM (IST)

ಮಡಿಕೇರಿ: ಗೋಣಿಕೊಪ್ಪದಲ್ಲಿ ಹೋಟೆಲ್ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿಗೆ ರಾತ್ರಿ ದುಷ್ಕರಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಗೋಣಿಕೊಪ್ಪ, ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಂದ್ ಮಾಡಲಾಗಿದೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆಯಾದರೂ ಬೂದಿ ಮುಚ್ಚಿ ಕೆಂಡದಂತೆ ಪರಿಸ್ಥಿತಿ ಇದ್ದು ಜನರಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ. ವೀರಾಜಪೇಟೆಯಲ್ಲಿ ನಡೆಯ ಬೇಕಾಗಿದ್ದ ಸಂತೆಯನ್ನು ಮುಂದೂಡಲಾಗಿದೆ.

ಈಗಾಗಲೇ ಜಿಲ್ಲೆಯಾದ್ಯಂತ ಅಘೋಷಿತ ಬಂದ್ ಏರ್ಪಟ್ಟಿದೆ. ರಣರಂಗವಾಗಿ ಮಾರ್ಪಟ್ಟಿದ್ದ ಮಡಿಕೇರಿಯಲ್ಲಿ ನೀರವ ಮೌನ ಮನೆ ಮಾಡಿದ್ದು, ಬಿಕೋ ಎನ್ನುತ್ತಿದೆ. ಯಾವುದೇ ವಾಹನ ರಸ್ತೆಗಿಳಿದಿಲ್ಲ. 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಸಿಆರ್ಪಿಎಫ್, ಕೆಎಸ್ಆರ್ಪಿಎಫ್, ಡಿಎಆರ್ ಸೇರಿದಂತೆ ಪೊಲೀಸ್ ಪಡೆಯನ್ನು ನಿಯೋಜಿಸಿದ್ದು ಎಲ್ಲೆಡೆ ಪೊಲೀಸ್ ಸರ್ಪಕಾವಲು ಹಾಕಲಾಗಿದೆ.

ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ನಾಳೆ ಮಧ್ಯರಾತ್ರಿವರೆಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.