ಬಯೋಮಿಡಿಕಲ್ ವೆಸ್ಟೇಜ್ ಸಮಸ್ಯೆ: ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್

ಬಯೋಮಿಡಿಕಲ್ ವೆಸ್ಟೇಜ್ ಸಮಸ್ಯೆ: ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್

Nov 18, 2015 12:39:39 PM (IST)

ಮೈಸೂರು: ಮೈಸೂರು ಮಹಾನಗರದಲ್ಲಿ ಬಯೋಮೆಡಿಕಲ್ ವೇಸ್ಟೇಜ್ ಸಮಸ್ಯೆಯಾಗಿದ್ದು ಇದರ ವಿರುದ್ಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರಣ ನೀಡುವಂತೆ ನೋಟಿಸ್ ಜಾರಿ ಮಾಡಿರುವ ಘಟನೆ ನಡೆದಿದೆ.

ಸಿಎಂ ಅವರ ಸ್ವಕ್ಷೇತ್ರ ವರುಣಾದ ವಾಜಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರುಣಾ ನಾಲೆ ಸಮೀಪ ಮೈಸೂರಿನ ಅಪಾಯಕಾರಿ  ಬಯೋಮೆಡಿಕಲ್ ವೇಸ್ಟೇಜ್ ನಾಶ ಪಡಿಸಲು ಶ್ರೀ ಕನ್ಸಲ್ಟೆನ್ಸಿ ಅವರು ಘಟಕವೊಂದನ್ನು ಇಟ್ಟಿದ್ದು ಈ ಘಟಕದಲ್ಲಿ ಮೈಸೂರಿನಲ್ಲಿರುವ ದೊಡ್ಡ ಆಸ್ಪತ್ರೆ ಕೆ.ಆರ್ ಆಸ್ಪತ್ರೆ ಸೇರಿದಂತೆ ನಗರದಲ್ಲಿರುವ 1500 ಚಿಕ್ಕ ಪುಟ್ಟ ಆಸ್ಪತ್ರೆಗಳಿಂದ ಹೊರ ಹಾಕುವ ಬ್ಯಾಂಡೇಜ್, ಸಿರೇಂಜ್, ಇಂಜಿಕ್ಷನ್, ಬಾಟಲ್ ಹಾಗೂ ಎಲ್ಲಾ ರೀತಿಯ ಅನುಪಯುಕ್ತ ಮೆಡಿಕಲ್ ವಸ್ತುಗಳನ್ನು ಸಂಗ್ರಹಿಸಿ ಘಟಕದಲ್ಲಿ ನಾಶ ಮಾಡಲು ಶ್ರೀ ಎಜೆನ್ಸಿ ಅವರು ಗುತ್ತಿಗೆ ತೆಗೆದುಕೊಂಡಿದ್ದಾರೆ.

ಆದರೆ ಎಜೆನ್ಸಿಯವರು ಘಟಕದಲ್ಲಿ ನಾಶ ಪಡಿಸದೆ ಎಲ್ಲೆಂದರಲ್ಲಿ ಸುಮಾರು ಇಲ್ಲಿಯವರೆಗೆ ಸುಮಾರು 16 ಟನ್ ಬಯೋಮೆಡಿಕಲ್ ವೇಸ್ಟೆಜ್ ಅನ್ನು ಬೀಸಾಡಿದ್ದು ಇದರಿಂದ ಪಕ್ಕದಲ್ಲೇ ಹರಿಯುವ ವರುಣಾ ನಾಲೆ ಸೇರುತ್ತಿದ್ದು, ಜತೆಗೆ ಸುತ್ತ-ಮುತ್ತಲ ಗ್ರಾಮಕ್ಕೂ ಇದರ ದುರ್ವಾಸನೆ ಹರಡುತ್ತಿದ್ದು, ಇದರ ಬಗ್ಗೆ ವ್ಯಕ್ತಿಯೊಬ್ಬರು ದೂರ ನೀಡಿದ್ದರು. ಈ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಘಟಕದ ಸ್ಥಳ ಪರಿಶೀಲನೆ ನಡೆಸಿ ಕಾನೂನು ಕಾಯ್ದೆ 1989, 1974, 1981 ರ ಕಾಯ್ದೆಯ ಪರಿಸರ ಮಾಲಿನ್ಯ ಅನ್ವಯ ಒಂದು ವಾರದೊಳಗೆ ಶ್ರೀ ಕನ್ಸಲ್ಟೆನ್ಸಿ ಅವರು ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಬಗ್ಗೆ ಸಿದ್ಧರಾಮಯ್ಯನವರ ಸ್ವಕ್ಷೇತ್ರ ವರುಣಾದಲ್ಲಿ ಬಯೋಮೆಡಿಕಲ್ ವೇಸ್ಟೇಜ್ ಸಮಸ್ಯೆಯಿಂದ ಪರಿಸರ ಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯ ಉಂಟಾಗಿದ್ದು ಇದರ ಬಗ್ಗೆ ಅಧಿಕಾರಿಗಳು ನೋಟಿಸ್ ನೀಡಿದ್ದು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.