ವರ್ಗಾವಣೆ ನಂತರ ಮುಂದುವರೆದ ರೋಹಿಣಿ ಸಿಂಧೂರಿ ಮೇಲಿನ ಆರೋಪಗಳು

ವರ್ಗಾವಣೆ ನಂತರ ಮುಂದುವರೆದ ರೋಹಿಣಿ ಸಿಂಧೂರಿ ಮೇಲಿನ ಆರೋಪಗಳು

Ms   ¦    Jun 09, 2021 04:23:21 PM (IST)
ವರ್ಗಾವಣೆ ನಂತರ ಮುಂದುವರೆದ ರೋಹಿಣಿ ಸಿಂಧೂರಿ ಮೇಲಿನ ಆರೋಪಗಳು

ಮೈಸೂರು: ಮೈಸೂರಿನಲ್ಲಿ ನಡೆದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಬಹಿರಂಗ ಕಿತ್ತಾಟದ ನಂತರ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೂ ಜಿಲ್ಲಾಧಿಕಾರಿ ರೋಹಿನಿ ವಿರುದ್ಧದ್ದ ಆರೋಪಗಳು ನಿಲ್ಲುತ್ತಿಲ್ಲ.  

 

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮತ್ತೆ ಅಧಿಕಾರಿ ರೋಹಿಣಿ ಸಿಂಧೂರಿಯವರ ಮೇಲೆ ಆಪಾದನೆಗಳ ಸುರಿಮಳೆಗೈದಿದ್ದಾರೆ. ಸರ್ಕಾರ ಅವರನ್ನು ವರ್ಗಾವಣೆ ಮಾಡುವ ಬದಲು ಸೇವೆಯಿಂದ ಅಮಾನತು ಮಾಡಬೇಕಿತ್ತು ಎಂದು ಹೇಳಿದ್ದಾರೆ.

 

ರೋಹಿಣಿ ಸಿಂಧೂರಿಯವರ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಅದರಲ್ಲಿ 10 ಅಂಶಗಳನ್ನು ಉಲ್ಲೇಖಿಸಿದ್ದಾರೆ. ಮಾತಿನಲ್ಲಿಯೇ ಸಿಂಧೂರಿ ವಿರುದ್ಧ ಛಾಟಿ ಬೀಸಿದ ಸಾ ರಾ ಮಹೇಶ್, ದಿ ಗ್ರೇಟ್ ಸಿಂಗಂ, ದಕ್ಷ ಅಧಿಕಾರಿಯಂತೆ ರೋಹಿಣಿಯವರು,ಅದೇನು ಸಿಂಗವೋ, ಸಿಂಗಳೀಕನೋ ಅವರ ಮನೆಯ ಕರೆಂಟ್ ಬಿಲ್ ತಿಂಗಳಿಗೆ 50 ಸಾವಿರ ರೂಪಾಯಿ, ಯಾವ ಮಂತ್ರಿ ಮನೆಗೂ ಇಷ್ಟು ಬರಲ್ಲ, ಒಬ್ಬ ಸೆಕೆಂಡ್ ಕ್ಲಾಸ್ ಅಧಿಕಾರಿಯ ವೇತನ 50 ಸಾವಿರ ರೂಪಾಯಿ, ಜನ ಇಂದು ಆರ್ಥಿಕ ಸಂಕಷ್ಟದಿಂದ ಸಾಯುತ್ತಿದ್ದಾರೆ, ಅಂತಹುದರಲ್ಲಿ ಇವರಿಗೆ ಮೋಜು ಮಸ್ತಿ ಎಂದು ಆರೋಪಿಸಿದರು.