ನಾಗರಿಕ ಬಂದೂಕು ತರಬೇತಿ ಶೂಟಿಂಗ್ ನಲ್ಲಿ ಸೂರಜ್ ಪ್ರಥಮ

ನಾಗರಿಕ ಬಂದೂಕು ತರಬೇತಿ ಶೂಟಿಂಗ್ ನಲ್ಲಿ ಸೂರಜ್ ಪ್ರಥಮ

LK   ¦    Feb 11, 2021 09:13:26 AM (IST)
ನಾಗರಿಕ ಬಂದೂಕು ತರಬೇತಿ ಶೂಟಿಂಗ್ ನಲ್ಲಿ ಸೂರಜ್ ಪ್ರಥಮ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಮೈಸೂರು ನಗರದ ನಾಗರಿಕ ಬಂದೂಕು ತರಬೇತಿಯ ಪ್ರಾಯೋಗಿಕ ಶೂಟಿಂಗ್ ನಲ್ಲಿ ಸೂರಜ್ ಪ್ರಥಮ, ದ್ವಿತೀಯ ಜೋಗಿ ಮಂಜು ಮತ್ತು ತೃತೀಯ ಸ್ಥಾನವನ್ನು ನಿವೇದಿತಾ ಪ್ರಸಾದ್ ಪಡೆದುಕೊಂಡಿದ್ದಾರೆ.

ಕಳೆದ ಒಂದು ವಾರಗಳ ಕಾಲದಿಂದ 40 ಜನರಿಗೆ ತರಬೇತಿಯನ್ನು ನೀಡಿ, ತರಬೇತಿ ಪಡೆದ ಶಿಕ್ಷಾರ್ಥಿಗಳಿಗೆ ಬಂದೂಕಿನಲ್ಲಿ  ಪ್ರಾಯೋಗಿಕವಾಗಿ ಶೂಟಿಂಗ್ ಮಾಡಿಸಿ ಅದರಲ್ಲಿ ಸರಿಯಾಗಿ ಗುರಿ ಇಟ್ಟು ಹೆಚ್ಚು ಅಂಕ ಪಡೆದವರಿಗೆ ಪ್ರಥಮ, ದ್ವೀತಿಯ, ತೃತೀಯ ಸ್ಥಾನವನ್ನು ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ  ಅವರು, ಅನಾಗರಿಕತೆಯಿಂದ ನಾಗರಿಕತೆಯ ಕಡೆ ಹೆಜ್ಜೆ ಹಾಕುವವನೇ ನಿಜವಾದ ಮನುಷ್ಯ. ಇಂದಿನ ಯುಗದಲ್ಲಿ ಗನ್ ಬಳಸುವ ಅವಕಾಶ ಪ್ರತಿಯೊಬ್ಬರಿಗೂ ಇಲ್ಲ, ಅದು ಕೆಲವೇ ಮಂದಿಗಳಿಗೆ ಮಾತ್ರ.  ಜೀವನದಲ್ಲಿ ಮೊದಲ ಬಾರಿ ಬಂದೂಕು ಹಿಡಿದಾಗ ಅದರ ಸಂತೋಷವೆ ಬೇರೆ, ತರಬೇತಿ ಪಡೆದು ನಂತರ ಪಿಸ್ತೂಲ್ ಪರವಾನಗಿ ಪಡೆದವರಿಗೆ ಸಮಾಜದಲ್ಲಿ ಹೆಚ್ಚು ಜವಾಬ್ದಾರಿ ಇರುತ್ತದೆ. ತರಬೇತಿಯನ್ನು ಪಡೆದವರು ಎಲ್ಲರೂ ಕೂಡ ಲೈಸೆನ್ಸ್ ಗೋಸ್ಕರ ಅಂತ ತಿಳಿದು ಕೊಳ್ಳಬೇಡಿ, ಪಿಸ್ತೂಲ್ ನನ್ನು ಬಳಸುವವರು  ಇನ್ನೊಬ್ಬರ ಪ್ರಾಣ ಹಾನಿಗಾಗಿ ಮಾತ್ರ ಯಾರು ಬಳಸಬಾರದು, ಬಂದೂಕು ತರಬೇತಿ ಪಡೆದ ಸಾರ್ವಜನಿಕರು  ಪೊಲೀಸ್ ಇಲಾಖೆ ಜೊತೆ ಸೇರಿ  ನಾಗರಿಕರ ಸೇವೆ ಮಾಡಬೇಕು ಎಂದು ಹೇಳಿದರು.

ನಾಗರಿಕ ಬಂದೂಕು ತರಬೇತಿಯ ಸಮಾರೋಪ ಸಮಾರಂಭದಲ್ಲಿ  ಮೈಸೂರು ನಗರದ ಪೊಲೀಸ್ ಉಪ ಆಯುಕ್ತರಾದ ಶಿವರಾಜ್, ಸಮಾಜ ಸೇವಕರಾದ ಶ್ರೀಹರಿ, ತರಬೇತುದಾರರಾದ ಚನ್ನಬಸವ, ಶ್ರೀಧರ ಮೊದಲಾದವರಿದ್ದರು.