ರೋಗ ನಿರೋಧಕ ಆರೋಗ್ಯ ಕಿಟ್ ವಿತರಣೆಗೆ ಯೋಜನೆ: ಎಸ್.ಎ.ರಾಮದಾಸ್

ರೋಗ ನಿರೋಧಕ ಆರೋಗ್ಯ ಕಿಟ್ ವಿತರಣೆಗೆ ಯೋಜನೆ: ಎಸ್.ಎ.ರಾಮದಾಸ್

YK   ¦    May 17, 2020 02:17:42 PM (IST)
ರೋಗ ನಿರೋಧಕ ಆರೋಗ್ಯ ಕಿಟ್ ವಿತರಣೆಗೆ ಯೋಜನೆ: ಎಸ್.ಎ.ರಾಮದಾಸ್

ಮೈಸೂರು: ಮುಂದಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಸಲುವಾಗಿ ಆರೋಗ್ಯ ಕಿಟ್ ಗಳನ್ನು ಮನೆಮನೆಗೆ ವಿತರಿಸುವುದಲ್ಲದೆ, ಪ್ರಾಣಯಾಮ ಅಗ್ನಿಹೋತ್ರ ಮತ್ತು ಆರ್ಯುವೇದದ ವ್ಯವಸ್ಥೆಗಳಿಂದ ಮನೆಯಲ್ಲಿರುವ ಮಕ್ಕಳು, ಹಿರಿಯರು ಪ್ರತಿಯೊಬ್ಬರು ಆರೋಗ್ಯವಂತರಾಗುವಂತಹ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಮನೆಮನೆಗಳಗೆ ಆರೋಗ್ಯ ಕಿಟ್ ವಿತರಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಕಾಡಾ ಕಛೇರಿಯ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೊರೋನ ವೈರಸ್ ನಿಂದ ಇಡೀ ಪ್ರಪಂಚವೇ ತತ್ತರಿಸಿದ್ದು ಮುಂದಿನ ದಿನಗಳಲ್ಲಿ ಹೇಗಿರಬೇಕೆಂಬ ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದರು.

ರೋಗ ನಿರೋಧಕ ಶಕ್ತಿ ವೃಧ್ಧಿಸುವ ಆರೋಗ್ಯ ಕಿಟ್ ಗಳನ್ನು ಮನೆಮನೆಗೆ ತಲುಪಿಸುವುದಕ್ಕೆ ಎಲ್ಲ ವಾರ್ಡ್‍ಗಳ ನಗರಪಾಲಿಕೆ ಸದಸ್ಯರು ಒಳಗೊಂಡು ಪಕ್ಷದ ಪದಾಧಿಕಾರಿಗಳು, ಎಲ್ಲ ವಾರ್ಡಿನ ಉಸ್ತುವಾರಿಗಳನ್ನು ಒಳಗೊಂಡು ಹೇಗೆ ಮುಂದಿನ ದಿನಗಳಲ್ಲಿ ಹೇಗೆ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳನ್ನು ಜೋಡಿಸಿಕೊಂಡ ರೀತಿಯಲ್ಲಿ ಕೋವಿಡ್ ಮತ್ತೊಂದು ಬಾರಿ ಜನಸಾಮನ್ಯರಿಗೆ ಹರಡದಂತೆ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳಲು ಸಮಗ್ರವಾಗಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ ಇಡೀ ರಾಜ್ಯದಲ್ಲಿ ಕೃಷ್ಣರಾಜ ಕ್ಷೇತ್ರ ಪಕ್ಷದ ಸಂಘಟನಾತ್ಮಕವಾಗಿ ಬಲಾಢ್ಯವಾಗಿದ್ದು ಶಾಸಕರಾದ ರಾಮದಾಸ್ ರವರು ಪಕ್ಷವನ್ನು ಬೇರು ಮಟ್ಟದಲ್ಲಿ ಕಟ್ಟಿ ಬೇಳಸಿದ್ದಾರೆ. ಕ್ಷೇತ್ರದ ಪದಾಧಿಕಾರಿಗಳು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ.

ಪಕ್ಷದ ವ್ಯವಸ್ಥೆಯೊಳಗೆ ದೇಶದ ಕಾರ್ಯವನ್ನು ಮಾಡುವಂತ ದೃಷ್ಟಿಯಿಂದ ಎಲ್ಲರೂ ಕೆಲಸ ಮಾಡುತ್ತಿದ್ದಾರೆ ಮತ್ತು ಕೊರೊನದ ಸಂದರ್ಭದಲ್ಲಿ ವಿಶೇಷವಾಗಿ ಕೈಗಾರಿಕಾ ವೃತ್ತಿಯಲ್ಲಿ ಎಲ್ಲರಿಗೂ ಬಿಸಿ ಊಟವನ್ನು ತಲುಪಿಸುವ ಒಂದು ದೊಡ್ಡ ಕಾರ್ಯವು ಸಂತೃಪ್ತಿಯನ್ನು ನೀಡಿದೆ ಎಂದರು.

ಸಭೆಯಲ್ಲಿ ನಗರ ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಸೌಮ್ಯ ಉಮೇಶ್, ರೂಪ, ಶಾಂತಮ್ಮ, ಗೀತಾಶ್ರೀ, ಶಾರದ, ಎಂ.ಸಿ.ರಮೇಶ್, ಛಾಯದೇವಿ ಬಿಜೆಪಿ ಕೃಷ್ಣರಾಜ ಕ್ಷೆತ್ರದ ಅಧ್ಯಕ್ಷರಾದ ವಡಿವೇಲು, ಪ್ರಧಾನ ಕಾರ್ಯದರ್ಶಿಗಳಾದ ನೂರ್ ಫಾತೀಮ, ನಾಗೇಂಧ್ರ, ಉಪಾಧ್ಯಕ್ಷರಾದ ಎಂ.ಆರ್. ಬಾಲಕೃಷ್ಣ, ಸಂತೋಷ್ ಶಂಬು, ವಿನಯ್ ಪಾಂಚಜನ್ಯ, ಜೆ.ರವಿ, ಓಂ ಶ್ರೀನಿವಾಸ್, ಕಾರ್ಯದರ್ಶಿಗಳಾದ ಪ್ರಸಾದ್ ಬಾಬು, ಡಿಪೊ ರವಿ, ಪಿ.ಟಿ.ಕೃಷ್ಣ, ಗಿರೀಶ್, ನಾಗರತ್ನ, ಖಜಾಂಚಿ ರೇವತಿ ಕಾರ್ಯಲಯ ಕಾರ್ಯದರ್ಶಿ ಆದರ್ಶ್(ಆದಿ), ಆಶ್ರಯ ಸಮಿತಿ ಸದಸ್ಯರಾದ ವಿದ್ಯಾ ಅರಸ್, ಹೇಮಂತ್, ಮೈಪು ರಾಜೇಶ್, ಜಗದೀಶ್, ಪ್ರಸನ್ನ, ಜಗದೀಶ್ ಮೋರ್ಚಾ ಪದಾಧಿಕಾರಿಗಳು ಇದ್ದರು.