ಕಾಡಾನೆ ದಂತ ಮಾರಾಟಕ್ಕೆ ಯತ್ನ: ಮೂವರ ಬಂಧನ

ಕಾಡಾನೆ ದಂತ ಮಾರಾಟಕ್ಕೆ ಯತ್ನ: ಮೂವರ ಬಂಧನ

LK   ¦    Jan 11, 2020 09:09:46 AM (IST)
ಕಾಡಾನೆ ದಂತ ಮಾರಾಟಕ್ಕೆ ಯತ್ನ: ಮೂವರ ಬಂಧನ

ಹಾಸನ: ಕಾಡಾನೆ ದಂತ ಮಾರಾಟಕ್ಕೆತ್ನಿಸಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿರುವ ಘಟನೆ ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್‍ನಲ್ಲಿ ನಡೆದಿದೆ. 

ಅಸ್ಸಾಂ ಮೂಲದ ಗುರುಪ್ರಸಾದ್, ಸಿಲಾಸ್ ಬರ್ಲ್ ಮತ್ತು ಉಣಿಲ್ ಬಂಧಿತ ಆರೋಪಿಗಳು.  ಇವರು ಕಾಡುಮನೆ ಎಸ್ಟೇಟ್‍ಗೆ ಕೆಲಸಕ್ಕಾಗಿ ಅಸ್ಸಾಂನಿಂದ ಬಂದಿದ್ದರು. ಇವರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸತ್ತ ಆನೆಯ ದಂತವನ್ನು ಕತ್ತರಿಸಿ ಬಳಿಕ ಅದನ್ನು ಭೂಮಿಯಲ್ಲಿ ಹೂತಿಟ್ಟು, ಅಸ್ಸಾಂಗೆ ಕೊಂಡೊಯ್ದು ಮಾರಾಟ ಮಾಡಲು ತೀರ್ಮಾನಿಸಿದ್ದರು. 

ಈ ನಡುವೆ ಸಮಯ ಸಾಧಿಸಿ ಆನೆ ದಂತವನ್ನು ಭೂಮಿಯಿಂದ ಹೊರತೆಗೆದು ಅದನ್ನು ಅಸ್ಸಾಂಗೆ ಕೊಂಡೊಯ್ಯಲು ಮುಂದಾಗಿದ್ದರು. ಈ ಸಂದರ್ಭ  ಸಕಲೇಶಪುರ ಆರ್‍ಎಫ್‍ಓ ರವೀಂದ್ರ ನೇತೃತ್ವದ ತಂಡ  ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಆರೋಪಿಗಳು ಸಹಿತ ಸಿಕ್ಕಿ ಬಿದ್ದಿದ್ದಾರೆ.