ಕಳಕೊಂಡಿದ್ದ ವೀಸಾ ಇ ಮೇಲ್ ಮೂಲಕ ಪಡೆದ ವಿದೇಶಿ ಮಹಿಳೆ

ಕಳಕೊಂಡಿದ್ದ ವೀಸಾ ಇ ಮೇಲ್ ಮೂಲಕ ಪಡೆದ ವಿದೇಶಿ ಮಹಿಳೆ

Nov 17, 2015 07:09:22 PM (IST)

ಮೈಸೂರು:  ಯುಎಸ್ ಎ ಮಹಿಳೆ ಕಳೆದುಕೊಂಡಿದ್ದ ಪಾಸ್ಪೋರ್ಟ್, ವೀಸಾ ಹಾಗೂ ಎಟಿಎಂ ಕಾರ್ಡ್ ಗಳನ್ನು ಇ ಮೇಲ್ ಮೂಲಕ ಮತ್ತೆ ಅವರಿಗೆ ತಲುಪಿಸುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ವಿದೇಶಿ ಮಹಿಳೆಯ ಪಾಸ್ಪೋರ್ಟ್ ನಗರದ ವ್ಯಕ್ತಿಯೊಬ್ಬರ ಕೈಗೆ ಸಿಕ್ಕಿ ಅದು ಪೊಲೀಸರ ಬಳಿಗೂ ಹೋಗಿ ಈ ಬಗ್ಗೆ ಪೊಲೀಸರು ತಮ್ಮ ಫೇಸ್ ಬುಕ್ ನಲ್ಲಿ ಹಾಕಿ ಕೊನೆಗೆ ಅದನ್ನು ಗಮನಿಸಿದ ವಿದೇಶಿ ಮಹಿಳೆ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಪಾಸ್ಪೋರ್ಟ್, ವೀಸಾ, ಎಟಿಎಂ ಕಾರ್ಡ್ ಗಳನ್ನು ಪಡೆದುಕೊಂಡು ಪೊಲೀಸರಿಗೆ ಅಭಿನಂದಿಸಿದ್ದರು. ಈಗ ಮತ್ತೊಮ್ಮೆ ಅಂತಹುದು ಘಟನೆಯೊಂದು ಮರುಕಳಿಸಿದೆ.

ಗಾಯಿತ್ರಿ ಪುರಂನ ನಿವಾಸಿಯೊಬ್ಬರು ನಗರ ಸಿದ್ಧಾರ್ಥ ಲೇಔಟ್ ನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಯುಎಸ್ಎ ರಾಷ್ಟ್ರೀಯರಾದ ಮೇಸ್ ಅಯಂಬರ್ ಲೀ ಎಂಬುವವರ ಪಾಸ್ಪೋರ್ಟ್, ವೀಸಾ, ಡೆಬಿಟ್ ಕಾರ್ಡ್, ಎಟಿಎಂ  ಹಾಗೂ ಇತರ ಐದು ಕಾರ್ಡ್ ಗಳು ಸಿಕ್ಕಿದ್ದು ಅದನ್ನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತಂದು ಕೊಟ್ಟಿದ್ದಾರೆ.
 
ಇನ್ನೂ ವಿದೇಶಿ ಮಹಿಳೆಯ ಪಾಸ್ಪೋರ್ಟ್, ವೀಸಾ ಸೇರಿದಂತೆ ಮುಂತಾದ ವಸ್ತುಗಳು ಸಿಕ್ಕಿರುವ ಬಗ್ಗೆ ಮೈಸೂರು ಪೊಲೀಸರು ತಮ್ಮ ಇಮೇಲ್ ಮೂಲಕ ಚೆನೈ ಪೊಲೀಸರಿಗೆ ತಿಳಿಸಿದ್ದಾರೆ. ಚೆನ್ಯೈ ಪೊಲೀಸರು ಈ ವಿಚಾರವನ್ನು ಅಮೆರಿಕ ಕಾನ್ಸುಲೇಟ್ ಜನರಲ್ ಗೆ ತಿಳಿಸಿ ಮೇಸ್ ಅಯಂಬರ್ ಲೀ ಅವರನ್ನು ಸಂಪರ್ಕಿಸಿ ತಮ್ಮ ಪಾಸ್ಪೋರ್ಟ್ ಸೇರಿದಂತೆ ಇನ್ನಿತರ ವಸ್ತುಗಳು ಮೈಸೂರಿನಲ್ಲಿ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ಇಂದು ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ವಿದೇಶಿ ಮಹಿಳೆ ಮೇಸ್ ಅಯಂಬರ್ ಲೀ ಪೊಲೀಸ್ ಆಯುಕ್ತ ದಯಾನಂದ್ ಅವರಿಂದ ತಮ್ಮ ವೀಸಾ, ಪಾಸ್ಪೋಟ್, ಎಟಿಎಂ ಕಾರ್ಡ್, ಡಿಬೆಟ್ ಕಾರ್ಡ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಪಡೆದಿಕೊಂಡು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.  ಸಾಮಾಜಿಕ ಜಾಲತಾಣಗಳನ್ನು ಸದ್ಭಳಕೆಗೂ ಬಳಸಿಕೊಳ್ಳಬಹುದು ಎಂಬುದನ್ನು  ಮೈಸೂರು ನಗರ ಪೊಲೀಸರು ಸಾಬೀತು ಮಾಡಿದ್ದಾರೆ.