ವಸುಂಧರೆ ಇಕೋ ಕ್ಲಬ್ ವತಿಯಿಂದ ಸ್ವಚ್ಛತಾ ಅಭಿಯಾನ

ವಸುಂಧರೆ ಇಕೋ ಕ್ಲಬ್ ವತಿಯಿಂದ ಸ್ವಚ್ಛತಾ ಅಭಿಯಾನ

LK   ¦    May 11, 2019 04:42:26 PM (IST)
ವಸುಂಧರೆ ಇಕೋ ಕ್ಲಬ್ ವತಿಯಿಂದ ಸ್ವಚ್ಛತಾ ಅಭಿಯಾನ

ಮೈಸೂರು: ನಗರದ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ‘ವಸುಂಧರೆ’ ಇಕೋ ಕ್ಲಬ್ ವತಿಯಿಂದ ಇತ್ತೀಚೆಗೆ ನಗರದ ಬೋಗಾದಿಯಲ್ಲಿರುವ ಸಿಎಫ್‍ಟಿಆರ್‍ಐ ಬಡಾವಣೆಯ ಪಾರ್ಕ್‍ನ ಬಳಿ ಸ್ವಚ್ಛತಾ ಅಭಿಯಾನ - ವಿಶೇಷ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ ಚಾಲನೆ ನೀಡಿ ಮಾತನಾಡಿ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ರ್ಕತವ್ಯ. ಪರಿಸರ ಕಲ್ಮಶವಾದರೆ, ಇಡೀ ಸಮಾಜವೇ ಕಲ್ಮಶವಾದಂತೆ. ಹೀಗಾಗಿ ಸ್ವಚ್ಛತೆಯನ್ನು ಕಾಪಾಡಿ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಲು ನಾವೆಲ್ಲರೂ ಶ್ರಮಿಸಬೇಕು. ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ, ಪೌರಬಂಧುಗಳ ಕಷ್ಟದ ಜೊತೆಗೆ ಸ್ಚಚ್ಛತೆಯ ಅರಿವು ಉಂಟಾಗಿ ಅವರು ತಮ್ಮ ಪೋಷಕರಿಗೆ, ಮನೆ ಸುತ್ತಮುತ್ತಲಿನವರಿಗೆ ತಿಳಿಸುವುದರ ಜೊತೆಗೆ ತಮ್ಮ ಮನೆ ಮತ್ತು ಬೀದಿಯನ್ನು ಸ್ವಚ್ಛತೆಯಿಂದ ಕಾಪಾಡುವ ಜವಾಬ್ದಾರಿ ನನ್ನದು ಕೂಡ ಎಂಬ ತಿಳುವಳಿಕೆ ಅವರಲ್ಲಿ ಮೂಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸ್ವಚ್ಛ ಭಾರತ ನಮ್ಮೆಲ್ಲರ ಹೊಣೆ, ಸ್ವಚ್ಛ ಭಾರತ ಸ್ವಸ್ಥ ಭಾರತ, ಪರಿಸರ ಸಂರಕ್ಷಿಸಿ ಆರೋಗ್ಯ ಕಾಪಾಡಿ, ಎಂಬಿತ್ಯಾದಿ ಘೋಷವಾಕ್ಯದೊಂದಿಗೆ ಸಿಎಫ್‍ಟಿಆರ್‍ಐ ಬಡಾವಣೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ, ಸ್ಚಚ್ಛತಾ ಕಾರ್ಯವನ್ನು ಮಾಡಿ, ಶಾರದಾದೇವಿ ವೃತ್ತದಿಂದ ವರ್ತುಲ ರಸ್ತೆಯವರೆಗೆ ಜಾಥಾವನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ ಕರಿತು ವಿಶೇಷ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಖಜಾಂಜಿ ಎಸ್.ಮನೋಹರ್, ಇಕೋ ಕ್ಲಬ್‍ನ ಸಂಯೋಜಕ ಪ್ರದೀಪ್ ಡಿ’ಕುನ್ಹಾ, ಕಾಲೇಜಿನ ಉಪನ್ಯಾಸಕರಾದ ಪಿ.ಎಸ್.ನಿತಿನ್ ಎಂ.ಪಿ.ಹರೀಶ್ ನಿಲಯಪಾಲಕ ಹೆಚ್.ವಿ.ಶಿವಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.