ಮೈಸೂರಿನಲ್ಲಿ ಪ್ರಯಾಣಿಕರಿಗೆ ಮಾಸ್ಕ್ ವಿತರಣೆ

ಮೈಸೂರಿನಲ್ಲಿ ಪ್ರಯಾಣಿಕರಿಗೆ ಮಾಸ್ಕ್ ವಿತರಣೆ

LK   ¦    May 19, 2020 04:50:06 PM (IST)
ಮೈಸೂರಿನಲ್ಲಿ ಪ್ರಯಾಣಿಕರಿಗೆ ಮಾಸ್ಕ್ ವಿತರಣೆ

ಮೈಸೂರು: ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ದೂರದ ಊರುಗಳಿಗೆ ತೆರಳು ಆಗಮಿಸಿದ ಪ್ರಯಾಣಿಕರಿಗೆ  ನೇಸರ ಸಂಸ್ಥೆಯ ವತಿಯಿಂದ ಉಚಿತವಾಗಿ ಮಾಸ್ಕ್ ಗಳನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ವೇಳೆ ನೇಸರ ಸೇವಾ ಸಂಸ್ಥೆ ಅಧ್ಯಕ್ಷ ರವಿತೇಜ ಮಾತನಾಡಿ ಲಾಕ್ ಡೌನ್ ತೆರೆದ  ಪ್ರತಿ ನಗರ ಹಾಗೂ ಜಿಲ್ಲೆಗಳಲ್ಲಿ ಹೆಚ್ಚಾಗಿ ಜನಸಂದಣಿ ಹೆಚ್ಚಿರುವುದರಿಂದ ಜನರಿಗೆ  ಕೊರೋನಾ ಬಗ್ಗೆ ಜಾಗೃತಿ ಮೂಡದಿರುವ ಕಾರಣ  ಮಾಸ್ಕ್ ಧರಿಸದೆ ಸ್ಯಾನಿಟೈಸರ್ ಉಪಯೋಗಿಸದೆ ನಗರದಾದ್ಯಂತ ಕೊರೋನಾ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು ಮೈಸೂರು ನಗರ ಇನ್ನೂ ಕೊರೋನಾ ಮುಕ್ತ ನಗರ ವಾಗಿಲ್ಲ. ಸಾವಿರಾರು ಜನಸಂಖ್ಯೆಯಲ್ಲಿ ಕ್ವಾರಂಟೈನ್ ನಲ್ಲಿ ಇನ್ನೂ ವಾಸಿಸುತ್ತಿದ್ದು  ಈ ಸಂದರ್ಭದಲ್ಲಿ ಮಾಸ್ಕ್ ಗಳನ್ನು ಸರಕಾರ ಕಡ್ಡಾಯ ಮಾಡಿದ್ದು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಮಾಸ್ಕ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಇನ್ನು ನಗರ ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಬಸ್ ನಿಲ್ದಾಣಕ್ಕೆ ಪ್ರವೇಶ   ನೀಡಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಮಧು ಎನ್ ಪೂಜಾರ್, ಸುಚೀಂದ್ರ, ಚಕ್ರಪಾಣಿ, ಹರೀಶ್ ನಾಯ್ಡು, ಮೋಹನ್, ಯೋಗೀಶ್ ಮೊದಲಾದವರಿದ್ದರು.