ಕಬ್ಬಿನ ಗದ್ದೆಯಲ್ಲಿ ಮುದ್ದಾದ ಮೂರು ಚಿರತೆ ಮರಿಗಳು ಪತ್ತೆ: ಕೂಡನಹಳ್ಳಿಯಲ್ಲಿ ಹೆಚ್ಚಿದ ಆತಂಕ

ಕಬ್ಬಿನ ಗದ್ದೆಯಲ್ಲಿ ಮುದ್ದಾದ ಮೂರು ಚಿರತೆ ಮರಿಗಳು ಪತ್ತೆ: ಕೂಡನಹಳ್ಳಿಯಲ್ಲಿ ಹೆಚ್ಚಿದ ಆತಂಕ

CI   ¦    May 17, 2020 03:47:24 PM (IST)
ಕಬ್ಬಿನ ಗದ್ದೆಯಲ್ಲಿ ಮುದ್ದಾದ ಮೂರು ಚಿರತೆ ಮರಿಗಳು ಪತ್ತೆ: ಕೂಡನಹಳ್ಳಿಯಲ್ಲಿ ಹೆಚ್ಚಿದ ಆತಂಕ

ಮೈಸೂರು:  ಇಂದು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಾಡಾನೆಗಳ ಕಾಟ ಇದೆ. ಈಗ ಅದರ ಜತೆಗೇ ಚಿರತೆಯ ಕಾಟ ಕೂಡ ಸೇರಿಕೊಂಡಿದೆ. 

ಭಾನುವಾರ  ಇಲ್ಲಿಗೆ ಸಮೀಪದ ವರುಣಾ ಹೋಬಳಿಯ  ಕೂಡನಹಳ್ಳಿಯ  ಹೊನ್ನಪ್ಪ  ಎಂಬುವವರ ಕಬ್ಬಿನ ಗದ್ದೆಯಲ್ಲಿ  ಕಬ್ಬನ್ನು ಕಟಾವು  ಮಾಡಲು ತೆರಳಿದಾಗ ಆಶ್ಚರ್ಯವೊಂದು  ಕಂಡಿತ್ತು. ಮುದ್ದಾದ ಮೂರು ಚಿರತೆ ಮರಿಗಳು ಗದ್ದೆಯಲ್ಲಿ ಆಟವಾಡಿಕೊಂಡಿದ್ದವು. ಕೂಡಲೇ ಅರಣ್ಯ ಇಲಾಖೆಯವರಿಗೆ ಚಿರತೆ ಮರಿಗಳನ್ನು ಒಪ್ಪಿಸಲಾಯಿತು. 

ಕಳೆದ ೧೦ ದಿನಗಳ ಹಿಂದಷ್ಟೆ ಜನಿಸಿದ ಮರಿಗಳು ಇವಾಗಿದ್ದು ಒಂದು ಗಂಡು , ಎರಡು ಹೆಣ್ಣು ಇವೆ. ಅದರೆ ಇದರ ತಾಯಿ ಚಿರತೆ  ಹತ್ತಿರದಲ್ಲೇ ಇದ್ದು  ಜನರ ಮೇಲೆ ಅಕ್ರಮಣ ನಡೆಸಬಹುದೇ ಎಂಬ ಬಗ್ಗೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಇನ್ನೊಂದು  ಪ್ರಕರಣದಲ್ಲಿ  ಶ್ರೀರಂಗಪಟ್ಟಣ ತಾಲ್ಲೂಕಿನ ಆಲಗೂಡು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಇಂದು ಬೆಳಿಗ್ಗೆ  3 ಚಿರತೆ ಮರಿಗಳು ಪ್ರತ್ಯಕ್ಷ ಆಗಿವೆ. ಸ್ಥಳೀಯರು ಚಿರತೆ ಮರಿಗಳನ್ನು ರಕ್ಷಿಸಿ ಅರಣ್ಯ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಇಂದು ಶ್ರೀರಂಗ ಪಟ್ಟಣದಲ್ಲೇ ೬ ಚಿರತೆ ಮರಿಗಳು ಸಿಕ್ಕಿದಂತಾಗಿದೆ.