ಅಣ್ಣನ ಹೆಂಡತಿ ಜತೆ ಸಂಸಾರ ನಡೆಸಿ ಮಗಳನ್ನೇ ಅಪಹರಿಸಿಕೊಂಡು ಹೋದ ಕಿರಾತಕ 

ಅಣ್ಣನ ಹೆಂಡತಿ ಜತೆ ಸಂಸಾರ ನಡೆಸಿ ಮಗಳನ್ನೇ ಅಪಹರಿಸಿಕೊಂಡು ಹೋದ ಕಿರಾತಕ 

CI   ¦    May 22, 2020 11:24:01 AM (IST)
ಅಣ್ಣನ ಹೆಂಡತಿ ಜತೆ ಸಂಸಾರ ನಡೆಸಿ ಮಗಳನ್ನೇ ಅಪಹರಿಸಿಕೊಂಡು ಹೋದ ಕಿರಾತಕ 

ಮೈಸೂರು: ಅಣ್ಣನ ಹೆಂಡತಿ  ಜೊತೆ ಮೂರು ವರ್ಷ ಸಂಸಾರ ನಡೆಸಿ  ಅಣ್ಣನ ಅಪ್ರಾಪ್ತ ವಯಸ್ಸಿನ   ಜೊತೆ ಮೈದುನ  ಓಡಿ ಹೋಗಿರುವ  ಘಟನೆ ನಂಜನಗೂಡು ಸಮೀಪದ  ಇಮ್ಮಾವುಹುಂಡಿ ಗ್ರಾಮದಲ್ಲಿ ನಡೆದಿದೆ.

 ಇಲ್ಲಿನ ನ ನಿವಾಸಿ ಕಷ್ಣ  ಎಂಬಾತನ   ಅಣ್ಣ ಮಹದೇವು  ಕಳೆದ ಮೂರು ವರ್ಷಗಳ ಹಿಂದೆ ತೀರಿಕೊಂಡಿದ್ದರು. ನಂತರ ಅತ್ತಿಗೆ ಜಯಲಕ್ಷ್ಮಿಯನ್ನು ತಾನೇ ಕಟ್ಟಿಕೊಂಡ ಮೈದುನ ಕೃಷ್ಣ ಅಣ್ಣನ ಮೂರು ಮಕ್ಕಳ ಜವಾಬ್ದಾರಿಯನ್ನೂ  ಹೊತ್ತಿದ್ದ.  ಅದರೆ ಮೊದಲ ಮಗಳು ಋತುಮತಿಯಾಗುತ್ತಿದ್ದಂತೆ ಕೆಟ್ಟ ದೃಷ್ಟಿ ಬೀರಿದ್ದ  ಈ ಕಾಮ ಕ್ರಿಮಿ ಆಕೆಯ  ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ. ಈ ವಿಚಾರದಲ್ಲಿ ಅತ್ತಿಗೆ ಜೊತೆ  ಜಗಳವೂ ಅಗಿತ್ತು.  ನಂತರ  ಗ್ರಾಮದ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಕೂಡ ಆಗಿತ್ತು. ಪಂಚಾಯ್ತಿಯಲ್ಲಿ ತಪ್ಪನ್ನು ಒಪ್ಪಿ ತಿದ್ದಿಕೊಂಡಂತೆ ನಟಿಸಿದ್ದ ಕೃಷ್ಣ ಕಳೆದ ಮೇ 17ರ ಮಧ್ಯ ರಾತ್ರಿ ಮೂರು ಗಂಟೆ ಸಮಯದಲ್ಲಿ ತಾನೇ ಸಾಕುತ್ತಿದ್ದ ಅಣ್ಣನ ಮಗಳನ್ನು ಅಪಹರಿಸಿಕೊಂಡು ನಾಪತ್ತೆಯಾಗಿದ್ದಾನೆ.

ಮಗಳಿಗೂ ವಂಚಿಸಿ ಮೊಮ್ಮಗಳ ಬಾಳನ್ನೂ ಹಾಳು ಮಾಡಿದ್ದಾನೆಂದು ಅಜ್ಜಿ ತಾಯಮ್ಮ ಕಣ್ಣೀರಿಡುತ್ತಿದ್ದಾರೆ.  ಮಗಳು ಹಾಗೂ ಮೈದುನ ಇಬ್ಬರಿಗೂ ಸತ್ತು ಹೋಗಲಿ ಎಂದು  ತಾಯಿ ಜಯಲಕ್ಷ್ಮಿ  ಶಾಪ ಹಾಕುತಿದ್ದಾಳೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಕಿರಾತಕ ಮೈದುನ ಕೃಷ್ಣ ಮೇಲೆ ಅಪಹರಣ ದೂರು ದಾಖಲಿಸಿದ್ದಾರೆ. ಕೃಷ್ಣನನ್ನು ಪೋಲೀಸರು ಹುಡುಕುತಿದ್ದಾರೆ.