ಪ್ರಶಸ್ತಿ ವಾಪಸ್ ನೀಡಲು ಮುಂದಾದ ದೇವನೂರು ಮಹದೇವ್

ಪ್ರಶಸ್ತಿ ವಾಪಸ್ ನೀಡಲು ಮುಂದಾದ ದೇವನೂರು ಮಹದೇವ್

Nov 15, 2015 12:41:55 PM (IST)

ಮೈಸೂರು: ಸಹಿಷ್ಣುತೆ, ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕ್ಕೆ ಬಂದಿರುವ ಸಂಧರ್ಭದಲ್ಲಿ ನಾನು ಹೆದರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸ್ ಮಾಡಲು ನಿರ್ಧರಿಸಿದ್ದೇನೆ ಎಂದು ಪ್ರಗತಿಪರ ಚಿಂತಕ ಹಾಗೂ ಸಾಹಿತಿ ದೇವನೂರು ಮಹದೇವ್ ತಿಳಿಸಿದ್ದಾರೆ.

ಇಂದು ದೇಶ ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಹಾಗೂ ಸಹಿಷ್ಣುತೆಗೆ ಧಕ್ಕೆಯಾಗಲು ಕೇಂದ್ರದ ಬಿಜೆಪಿ ಸರ್ಕಾರವೇ ಕಾರಣವಾಗಿದ್ದು, ಇತ್ತಿಚೇಗೆ ಸಿಡಿನ ಲಕ್ಷಣಗಳು ಹಾಗೂ ಸಂವೇದನಾ ಶೀಲ ವ್ಯಕ್ತಿತ್ವಕ್ಕೆ ತೊಡಕಾಗುತ್ತಿದ್ದು ರಾಜ್ಯಗಳ ನಡುವಿನ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತಿದ್ದು, ಇದರಿಂದ ಭಾರತಕ್ಕೆ ಉಳಿಗಾಲವಿಲ್ಲ ಎಂದು ಹೆದರಿಕೆಯಾಗಿ ಗಾಬರಿಯಿಂದ, ನನಗೆ ನೀಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದುರುಗಿಸಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.