ಸ್ನೇಹಿತನ ಪತ್ನಿಯ ಅಶ್ಲೀಲ ಚಿತ್ರ ತೆಗೆದು ಬ್ಲಾಕ್ ಮೇಲ್

ಸ್ನೇಹಿತನ ಪತ್ನಿಯ ಅಶ್ಲೀಲ ಚಿತ್ರ ತೆಗೆದು ಬ್ಲಾಕ್ ಮೇಲ್

Nov 18, 2015 04:58:06 PM (IST)

ಮೈಸೂರು: ತನ್ನ ಸ್ನೇಹಿತನ ಪತ್ನಿಯ ಅಶ್ಲೀಲ ಚಿತ್ರಗಳನ್ನು ತೆಗೆದು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಕಾಮುಕ ಸ್ನೇಹಿತನ ಬಂಧಿಸಿ ಇಲ್ಲದಿದ್ದರೇ, ಪೊಲೀಸ್ ಕಮೀಷನರ್ ಎದುರು ದಂಪತಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿರುವ ಘಟನೆ ಉದಯಗಿರಿಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Friend blackmails couple with obscene photos; complaint filed-1ಮೈಸೂರಿನ ಉದಯಗಿರಿಯ ನಿವಾಸಿ ಕಾಮುಕ ನಯೀಮ್ ಎಂಬಾತನೇ ತನ್ನ ಆಪ್ತ ಸ್ನೇಹಿತ ರಿಯಾಜ್ನ ಪತ್ನಿ ಜತಗೆ ಸಲುಗೆ ಬೆಳೆಸಿಕೊಂಡು ಆಕೆಯ ಬೆತ್ತಲೆ ಆಶ್ಲೀಲ ಚಿತ್ರಗಳನ್ನು ತೆಗೆದು ಈಗ ತನ್ನ ಜತೆ ಅಕ್ರಮ ಸಂಬಂಧ ಇಟ್ಟಕೊ ಹಾಗೂ ಕೇಳಿದಷ್ಟು ಹಣ ನೀಡುವಂತೆ ಬ್ಲಾಕ್ಮೇಲ್ ಮಾಡುತ್ತಿರುವ ಆಸಾಮಿಯಾಗಿದ್ದಾನೆ.

ಕಳೆದ ಒಂದು ವರ್ಷದ ಹಿಂದೆ ರಿಯಾಜ್ ಗೆ ಸ್ನೇಹಿತನಾದ ಈತ ಸ್ನೇಹಿತನ ಪತ್ನಿ ಜತೆಗೆ ಸ್ನೇಹ ಸಲುಗೆ ಬೆಳೆಸಿದ್ದು, ಆಕೆಗೆ ತಿಳಿಯದ ಹಾಗೆ ಆಕೆ ಬಟ್ಟೆ ಬದಲಿಸುವಾಗ ಹಾಗೂ ಸ್ನಾನ ಮಾಡುವಾಗ ನಗ್ನ ಫೋಟೊ ಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಬಳಿಕ ಆಕೆಗೆ ಫೋಟೊಗಳನ್ನು ತೋರಿಸಿ ತನ್ನ ಜತೆಗೆ ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸಿರುವುದಲ್ಲದೆ, ತಾನು ಕೇಳಿದಷ್ಟು ಹಣ ನೀಡುವಂತೆಯೂ ಬ್ಲಾಕ್ಮೇಲ್ ಮಾಡಿದ್ದಾನೆ. ಕೊನೆಗೆ ಭಯಗೊಂಡ ಪತ್ನಿ ಪತಿ ರಿಯಾಜ್ಗೆ ವಿಷಯವನ್ನು ತಿಳಿಸಿದ್ದು, ಕೊನೆಗೆ ಆತನಿಗೂ ಸಹ ಇದೇ ರೀತಿಯ ಬೆದರಿಕೆ ಹಾಕಿರುವ ಕಾಮುಕ ಸ್ನೇಹಿತ ನಯೀಮ್ ಈ ವಿಚಾರವನ್ನು ಪೊಲೀಸರಿಗೆ, ಮಾದ್ಯಮಗಳಿಗೆ ತಿಳಿಸಿದರೆ ನಿನ್ನೆ ಹೆಂಡತಿ ನಗ್ನ ಹಾಗೂ ಆಶ್ಲೀಲ ಚಿತ್ರಗಳ ವಿಡಿಯೋ ಹಾಗೂ ಚಿತ್ರಗಳನ್ನು ಇಂಟರ್ ನೆಟ್ ನಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾನೆ.

ಅಲ್ಲದೆ ಇದೇ ರೀತಿ ಬೆದರಿಕೆ ಹಾಕಿ ತಾನು ಸಾಲವಾಗಿ ಪಡೆದಿದ್ದ 3 ಲಕ್ಷವನ್ನು ನೀಡದೆ ಸತಾಯಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ. ಕಾಮುಕ ದೋಸ್ತಿಯ ಕಿರುಕುಳದಿಂದ ಬೇಸತ್ತ ದಂಪತಿಗಳು ಈಗ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿ ದೂರು ದಾಖಲಿಸಿದ್ದು, ಒಂದು ವೇಳೆ ತಮಗೆ ನ್ಯಾಯ ಸಿಗದಿದ್ದರೆ ನಗರ ಪೊಲೀಸ್ ಆಯುಕ್ತರ ಎದುರೆ ಇಬ್ಬರು ವಿಷ ಸೇವಿಸುವುದಾಗಿ ಹೇಳಿಕೊಂಡಿದ್ದಾರೆ.