ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ನೋವಿನ ವಿಚಾರ: ಅನಿರುದ್ಧ್

ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ನೋವಿನ ವಿಚಾರ: ಅನಿರುದ್ಧ್

CI   ¦    Sep 16, 2020 11:47:06 AM (IST)
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ನೋವಿನ ವಿಚಾರ: ಅನಿರುದ್ಧ್

ಮೈಸೂರು: ಸ್ಯಾಂಡಲ್ ವುಡ್ ನಟ ನಟಿಯರ ಮೇಲೆ ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಅನಿರುದ್ಧ ಅವರು, ಡ್ರಗ್ಸ್ ಎನ್ನುವ ಪಿಡುಗು ಜಗತ್ತಿನ ಎಲ್ಲೆಡೆಯೂ ಎಲ್ಲ ರಂಗಗಳಲ್ಲೂ ಇದೆ. ಇದು ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ ಎಂದು ಹೇಳಿದರು.

ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನ ಪೊಲೀಸರು ಬಂಧಿಸಿದ ವಿಚಾರ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕನ್ನಡ ಚಿತ್ರರಂಗದಲ್ಲಿ ಈ ರೀತಿ ನಡೆಯುತ್ತಿರೋದು ನೋವಿನ ಸಂಗತಿ. ನಾವು ಹಿರಿಯರನ್ನು ಆದರ್ಶವಾಗಿಟ್ಟುಕೊಂಡು ಬೆಳೆಯಬೇಕು. ನಮ್ಮನ್ನ ನೋಡಿ ಸಮಾಜ ಮತ್ತು ಮಕ್ಕಳು ಕಲಿಯುತ್ತಾರೆ. ಮುಂದಿನ ಪೀಳಿಗೆಗೆ ನಾವು ಒಳ್ಳೆಯದನ್ನು ಬಿಟ್ಟು ಹೋಗಬೇಕು. ಹಿರಿಯರು ಹಾಕಿದ ಬುನಾದಿಯನ್ನು ನಾವು ಕೆಡಿಸಬಾರದು. ಹಾಗಾಗಿ ಆ ಹಾದಿಯಲ್ಲಿ ನಾವು ಸಾಗಬೇಕು ಎಂದು ಕಿವಿಮಾತು ಹೇಳಿದರು.

ಸ್ಯಾಂಡಲ್ ವುಡ್ ನ ಜವಾಬ್ದಾರಿ ಕೇವಲ ಒಬ್ಬರದಲ್ಲ, ಎಲ್ಲರದ್ದು. ಎಲ್ಲರೂ ಕೂಡ ಇದೀಗ ಸ್ಯಾಂಡಲ್ ವುಡ್ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು.