ಅನಗತ್ಯ ಸಂಚಾರ ಮಾಡುತ್ತಿದ್ದವರ 300 ವಾಹನ ವಶ

ಅನಗತ್ಯ ಸಂಚಾರ ಮಾಡುತ್ತಿದ್ದವರ 300 ವಾಹನ ವಶ

Apr 30, 2021 02:12:56 PM (IST)
ಅನಗತ್ಯ ಸಂಚಾರ ಮಾಡುತ್ತಿದ್ದವರ 300  ವಾಹನ  ವಶ

ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್‌ಡೌನ್‌ ನಿಮಯ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವ ವಾಹನ ಸವಾರರಿಗೆ ತಕ್ಕಪಾಠ ಕಲಿಸಲು ಮುಂದಾಗಿರುವ ನಗರ ಪೊಲೀಸರು, ವಾಹನ ಸವಾರರಿಗೆ ಬುದ್ದಿಕಲಿಸುವ ಸಲುವಾಗಿ ನಗರದೆಲ್ಲೆಡೆ 300 ವಾಹನಗಳನ್ನು ಸೀಜ್ ಮಾಡಿದ್ದಾರೆ. ಲಾಕ್‌ಡೌನ್‌ ನಡುವೆಯೂ ಮೈಸೂರಲ್ಲಿ ವಾಹನಗಳ ಸಂಚಾರ ಮಿತಿಮೀರಿದ್ದು, ನೂರಾರು ಜನರು ನಾನಾ ಕಾರಣಗಳನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸರು, ನಗರದಲ್ಲಿ ಅನಗತ್ಯವಾಗಿ ಸಂಚಾರಿಸುತ್ತಿದ್ದ ವಾಹನ ಸವಾರರನ್ನು ತಡೆದು, ನೂರಾರು ವಾಹನಗಳನ್ನು ಸೀಜ್‌ ಮಾಡಿದ್ದಾರೆ. ಅದರಂತೆ ಒಟ್ಟು 300 ವಾಹನಗಳನ್ನ ಸೀಜ್ ಮಾಡಲಾಗಿದೆ.
ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಈವರೆಗೂ 248 ದ್ವಿಚಕ್ರ ವಾಹನ, 4 ಆಟೋ ರಿಕ್ಷಾ, 1 ಗೂಡ್ಸ್ ಆಟೋ, 28 ಕಾರುಗಳು ಸೀಜ್ ಮಾಡಲಾಗಿದೆ. ಈ ಎಲ್ಲಾ ವಾಹನಗಳನ್ನು ಗುರುವಾರ ಒಂದೇ ದಿನದಲ್ಲಿ ಸೀಜ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ. ವಾಹನಗಳು ಸೀಜ್ ಮಾಡಿರುವ ಪೊಲೀಸರು, ಸೂಕ್ತ ಕಾರಣದ ಜೊತೆಗೆ ವಾಹನದ ದಾಖಲೆ ನೀಡಿದರೆ ಮಾತ್ರ ವಾಹನ ವಾಪಸ್ ನೀಡುತ್ತಿದ್ದಾರೆ. ಇಲ್ಲವಾದಲ್ಲಿ ಲಾಕ್‌ಡೌನ್‌ ಮುಗಿಯುವವರೆಗೂ ವಾಹನ ನೀಡದಿರಲು ತೀರ್ಮಾನಿಸಿದ್ದಾರೆ. ಹೀಗಾಗಿ ನೂರಾರು ಜನರು ತಮ್ಮ ವಾಹನ ಪಡೆಯಲು ಪೊಲೀಸ್ ಠಾಣೆ ಮುಂಭಾಗ ಕಾಯುತ್ತಾ, ವಾಹನ ಹಿಂದಿರುಗಿಸುವಂತೆ ಮನವಿ ಮಾಡಿದ್ದರು. ಪೊಲೀಸರು ಯಾವುದೇ ಮನ್ನಣೆ ನೀಡುತ್ತಿಲ್ಲ.