ಮೈಸೂರಿನಲ್ಲಿ ಪ್ರಧಾನ ಮಂತ್ರಿ ಮೋದಿ ಹುಟ್ಟುಹಬ್ಬ ಆಚರಣೆಗೆ ನಿರ್ಧಾರ

ಮೈಸೂರಿನಲ್ಲಿ ಪ್ರಧಾನ ಮಂತ್ರಿ ಮೋದಿ ಹುಟ್ಟುಹಬ್ಬ ಆಚರಣೆಗೆ ನಿರ್ಧಾರ

LK   ¦    Sep 15, 2020 04:03:45 PM (IST)
ಮೈಸೂರಿನಲ್ಲಿ ಪ್ರಧಾನ ಮಂತ್ರಿ ಮೋದಿ ಹುಟ್ಟುಹಬ್ಬ ಆಚರಣೆಗೆ ನಿರ್ಧಾರ

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ನಮೋ ದಿವಸ್ ನಮಸ್ಕಾರ ಶೀರ್ಷಿಕೆಯಡಿಯಲ್ಲಿ ಸೆ. 17ರಂದು ಬೆಳಗ್ಗೆ 9 ಗಂಟೆಯಿಂದ ರಿಂದ ಸಂಜೆ 4 ಗಂಟೆಯವರಗೆ ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ಉದ್ಯಾನವನದಲ್ಲಿ ಆಚರಿಸಲಾಗುವುದಾಗಿ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಇಲ್ಲಿಯವರೆಗೆ ಪ್ರಧಾನ ಮಂತ್ರಿಯವರು 200 ರಾಷ್ಟ್ರೀಯ ಯೋಜನೆಗಳನ್ನು ನೀಡಿದ್ದು ಇದರಲ್ಲಿ ಆಯ್ದ 70 ಯೋಜನೆಗಳ ಪ್ಲೆಕ್ಸ್ ಗಳನ್ನು ಪ್ರದರ್ಶನೀಯವಾಗಿ ನೀಡುತ್ತಿದ್ದು. ಮೈಸೂರು ನಗರದ ಕಾರ್ಯಕರ್ತರೊಂದಿಗೆ ಸಾರ್ವಜನಿಕರು ಭೇಟಿ ಕೊಟ್ಟು 35 ನಿಮಿಷಗಳ ಕಾಲ ವೀಕ್ಷಿಸಿ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಯೋಜನೆಯ ಅನುಷ್ಠಾನಕ್ಕೆ ಅವರ ಸಲಹೆ ಸೂಚನೆಗಳನ್ನು 2 ಪುಟಗಳು ಮೀರದಂತೆ ಬರಹದ ರೂಪದಲ್ಲಿ ನೀಡಲಿದ್ದಾರೆ. ಅತಿ ಒಳ್ಳೆಯ ಸಲಹೆ ಸೂಚನೆಗಳನ್ನು ನೀಡುವ ವ್ಯಕ್ತಿಗಳಿಗೆ ಸನ್ಮಾನಿಸಿ ನಮೋ ಪ್ರಶಸ್ತಿ ನೀಡಿ ಬಹುಮಾನಗಳನ್ನು ನೀಡಲಾಗುವುದಾಗಿ ಹೇಳಿದರು.

ವೃತ್ತಿ ಜೀವನವನ್ನು ಪ್ರೀತಿಸಿ, ಗೌರವಿಸಿ ಆತ್ಮ ಗೌರವದಿಂದ ಬದುಕುತ್ತಿರುವ ಸಮಾಜಕ್ಕೆ ಉದಾಹರಣೆಯಾಗಿರುವ 70 ಜನ ವೃತ್ತಿವಂತರನ್ನು (ಉದಾ: ಆಟೋ ಚಾಲಕ, ಲಾರಿ ಚಾಲಕ, ಪತ್ರಿಕೆ ವಿತರಕರು, ಪ್ರತಿಕೋದ್ಯಮಿಗಳು, ಪೌರಕಾರ್ಮಿಕರು ಹೀಗೆ 70 ವೃತ್ತಿಗಳ ಸಾಧಕರಿಗೆ) ಸನ್ಮಾನಿಸಿ ಸಮಾಜದ ಗಣ್ಯರೆಂದು ಗುರುತಿಸಲಾಗುವುದು.

ಅಂದು ಬೆಳಿಗ್ಗೆ  10.15ಕ್ಕೆ ಬಿ.ಜೆ.ಪಿ ಕಾರ್ಯಕರ್ತನೊಬ್ಬ ಅವರ ಚಿತ್ರವನ್ನು ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರಗೆ ನಿರಂತರವಾಗಿ ಹಾಡುಗಾರಿಕೆ, ಶಾಸ್ತ್ರೀಯ ಸಂಗೀತಾ, ವಾದ್ಯಗಳು, ದೇಶ ಭಕ್ತಿಗೀತೆ ಹಾಗೂ ಹಳೆಯ ಚಲನಚಿತ್ರ ಗೀತೆಗಳ ಮೂಲಕ ರಂಜಿಸಲಾಗುವುದಾಗಿ ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಗಳನ್ನು ಪಡೆಯ ಬಯಸುವವರಿಗೆ ಸ್ಥಳದಲ್ಲೇ ನೋಂದಾಯಿಸಿ, ಯೋಜನೆಗಳ ವಿವರಗಳನ್ನು ನೀಡಿ ಅರ್ಹರನ್ನು ಫಲಾನುಭವಿಗಳಾಗಿ ಮಾಡುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗುವುದಾಗಿ ಅವರು ಹೇಳಿದರು.