ಮೈಸೂರು: ವಿಧಾನ ಪರಿಷತ್ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತ ಎಣಿಕೆ ಕಾರ್ಯ ಮೈಸೂರಿನ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನಲ್ಲಿ ಬೆಳ್ಳಗ್ಗೆ 8 ರಿಂದಲೇ ಆರಂಭವಾಗಿದೆ.
ಮೈಸೂರು: ಸಿನಿಮಾ ನೋಡಲು ಬಂದ ವೃದ್ಧನನ್ನು ನಿರಾಶ್ರಿತರ ಕೇಂದ್ರಕ್ಕೆ ದೂಡಿ ಅನಾಥನನ್ನಾಗಿಸಿದ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಕಳೆದ ವರ್ಷ ಅಂಬರೀಶ್ ಅಭಿನಯದ ಬುಲ್ ಬುಲ್ ಚಿತ್ರ ನೋಡಲು ಬಂದ ಮಂಡ್ಯ ಜಿಲ್ಲೆಯ ವೃದ್ಧನನ್ನು ಭಿಕ್ಷುಕನೆಂದು ಹಿಡಿದು ನಿರಾಶ್ರಿತರ ...
ಮೈಸೂರು: ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದು, ಅವರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಆ್ಯಪ್ವೊಂದನ್ನು ಸಿದ್ಧಗೊಳಿಸಿದ್ದು, ಅತಿ ಶೀಘ್ರದಲ್ಲೇ ಆ್ಯಪ್...
ಮೈಸೂರು: ಮೈಸೂರಿನ ನಗರಪಾಲಿಕೆ ಮತಗಟ್ಟೆ ಸಂಖ್ಯೆ 122 ರಲ್ಲಿ ತಮ್ಮ ಹಕ್ಕು ಚಲಾಯಿಸಿದ ಸಿಎಂ ಸಿದ್ಧು ಬಳಿಕ ಮಾತನಾಡಿ ವಿಧಾನ ಪರಿಷತ್ ಚುನಾವಣೆಯಲ್ಲಿ 20 ಸ್ಥಾನವನ್ನು ಗೆಲ್ಲಲು ಪಕ್ಷ ಶ್ರಮವಹಿಸಿದ್ದು, 15 ಸ್ಥಾನವನ್ನು ಖಚಿತವಾಗಿ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು: ನಂಜನಗೂಡಿನ ಚಾಮಲಾಪುರದಹುಂಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನ (ಮಾರಮ್ಮನ ದೇವಸ್ಥಾನ) ನಿರ್ಮಾಣದಲ್ಲಿ 1 ಲಕ್ಷದ 66 ಸಾವಿರ ರೂ. ಗಳನ್ನು ಗುಳುಂ ಮಾಡಿರುವ ವಿಚಾರ ಗ್ರಾಮದಲ್ಲಿ ಬಿಗುವಿನ ವಾತಾವರಣವನ್ನು ಸೃಷ್ಟಿಸಿದೆ.
ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜತೆ ಯಾವುದೇ ಹೊಂದಾಣಿಕೆಯಾಗಲಿ ಒಳ ಒಪ್ಪಂದವಾಗಲಿ ಮಾಡಿಕೊಂಡಿಲ್ಲ. ಮತದಾರರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಟ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು: ಇಲ್ಲಿನ ಹುಣಸೂರು ಪಟ್ಟಣ ಎಪಿಎಂಸಿ ದ್ವಾರದ ಬಳಿ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದ ಹಿನ್ನಲೆಯಲ್ಲಿ ಇಂದು ಮೈಸೂರಿನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಮೈಸೂರು: ಮಠದ ಚಿನ್ನದ ತಟ್ಟೆ ಮತ್ತು ಬೆಳ್ಳಿ ರಥವನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಲ್ಲಿ ವಿವಾದಕ್ಕೆ ಗುರಿಯಾಗಿ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಮೈಸೂರಿನ ಪುರಾತನ ಸೋಸಲೆಮಠದ ಶ್ರೀ ವಿದ್ಯಾ ಮನೋಹರ ತೀರ್ಥ ಸ್ವಾಮಿಗಳು ಪದತ್ಯಾಗ ಮಾಡಿದ್ದಾರೆ.
ಮೈಸೂರು: ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೆ ಮೈಸೂರು ವಿವಿ ಐತಿಹಾಸಿಕ ಗಡಿಯಾರ ನಿರ್ಮಿಸುವ ಭರದಲ್ಲಿ ಪುರಾತನ ಬೃಹತ್ ಆಲದ ಮರದ ರೊಂಬೆ-ಕೊಂಬೆಗಳನ್ನೇ ಕತ್ತರಿಸಿ ಹನನ ಮಾಡಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮೈಸೂರು: ಲಕ್ಕಿಡಿಪ್ ಹೆಸರಿನಲ್ಲಿ ಹತ್ತೇ ರೂಗೆ ಬುಲೆಟ್ ಬೈಕ್, ಕಾರು ಸಿಗುತ್ತದೆ ಎಂದು ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಘಟನೆ ಮೈಸೂರಿನ ಸರ್ಕಾರಿ ವಸ್ತುಪ್ರದರ್ಶನ ಆವರಣದಲ್ಲಿ ನಡೆಯುತ್ತಿದೆ.