NewsKarnataka
Monday, December 06 2021

Lava Kumar

ಬೆಂಬಲ ನೀಡುವ ಕುರಿತು ಇನ್ನೆರಡು ದಿನದಲ್ಲಿ ತೀರ್ಮಾನ: ಹೆಚ್.ಡಿ.ಕುಮಾರಸ್ವಾಮಿ

04-Dec-2021 ಮೈಸೂರು

ವಿಧಾನಪರಿಷತ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬುದರ ಬಗ್ಗೆ ಇನ್ನೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ...

Know More

ಇಬ್ಬರನ್ನು ಹತ್ಯೆಗೈದು, ಐವರಿಗೆ ಗಾಯಗೊಳಿಸಿದ ಹಂತಕ

02-Dec-2021 ಮೈಸೂರು

ಹೆಂಡತಿ ಮೇಲೆ ಅನುಮಾನ ವ್ಯಕ್ತಪಡಿಸಿದ ಗಂಡ ಎದುರು ಮನೆಯ ವ್ಯಕ್ತಿಯ ತಂದೆ ತಾಯಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಲ್ಲದೆ, ಹೆಂಡತಿ ಮತ್ತು ಸಂಬಂಧಿಕರ ಮೇಲೆ ಮಚ್ಚು ಬೀಸಿ ರಕ್ತದ ಕೋಡಿ ಹರಿಸಿದ ಘಟನೆ...

Know More

ಮೈಸೂರಿನ ಚಿತ್ರನಗರಿಗೆ ಪುನಿತ್ ರಾಜ್‌ಕುಮಾರ್ ಹೆಸರು?

11-Nov-2021 ಮೈಸೂರು

ಮೈಸೂರು: ಪ್ರತಿಭಾವಂತ ನಟ ಮತ್ತು ಕನ್ನಡದ ಮನೆಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಳೆದುಕೊಂಡು ರಾಜ್ಯ ಶೋಕಸಾಗರದಲ್ಲಿ ಮುಳುಗಿರುವಾಗಲೇ ಅಪ್ಪು ಹೆಸರು ಚಿರಸ್ಥಾಯಿಯಾಗಿಸುವ ಸಂತಸದ ಸುದ್ದಿಯೊಂದು ಹೊರಬಂದಿದೆ. ಮೈಸೂರಿನಲ್ಲಿ ನಿರ್ಮಾಣವಾಗಲಿರುವ ಮಹತ್ವಾಕಾಂಕ್ಷೆಯ ಚಿತ್ರನಗರಿಗೆ...

Know More

ಥ್ರೋಬಾಲ್ ತಂಡಕ್ಕೆ ಕೊಡಗಿನ ಮಹಿಳೆ ಆಯ್ಕೆ

25-Oct-2021 ಕರ್ನಾಟಕ

ಮಡಿಕೇರಿ: ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ಕೊಡಗಿನ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ಮಡಿಕೇರಿ ಮೆಡಿಕಲ್ ಕಾಲೇಜಿನ ಉದ್ಯೋಗಿ ವಿ.ಎಮ್.  ತಷ್ಮ  ಥ‍್ರೋಬಾಲ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವುದರೊಂದಿಗೆ ಕೊಡಗಿಗೆ ಹೆಮ್ಮೆ ತಂದಿದ್ದಾರೆ. ಇವರು, ಮಡಿಕೇರಿ ಸಮೀಪದ ಬೆಟ್ಟಗೇರಿಯ ಮಂಜೇಶ್ ಅವರ ಪತ್ನಿ ಯಾಗಿದ್ದು,   ಮದೆನಾಡು ಗೋಳಿಕಟ್ಟೆ ಗ್ರಾಮದ ಮುತ್ತಪ್ಪ ಹಾಗೂ ಗಿರಿಜಾ ದಂಪತಿಗಳ ಪುತ್ರಿ ಯಾಗಿದ್ದಾರೆ. ಇವರು ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಕ್ರೀಡಾಕೂಟಗಳಲ್ಲಿ ಕೊಡಗಿನವರು ಒಂದಲ್ಲ ಕ್ರೀಡೆಯಲ್ಲಿ...

Know More

ಮೇಕೆ ರಕ್ಷಿಸಲು ಹೋದ ಯುವಕ ಸಾವು

13-Oct-2021 ಮೈಸೂರು

ಕೆ.ಆರ್.ಪೇಟೆ: ಯುವಕನೊಬ್ಬ ತಾನು ಸಾಕಿದ್ದ ಮೇಕೆಯನ್ನು ನಾಯಿಯಿಂದ ರಕ್ಷಿಸಲು ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೆಂಡೇಕೆರೆ ಗ್ರಾಮದ ನಿವಾಸಿ ಭೀಮೇಗೌಡರ ಮಗ ರಾಕೇಶ್...

Know More

ಅರ್ಚಕರಿಗೆ ವಿಮಾ ಯೋಜನೆ ಜಾರಿಗೆ ಕ್ರಮ

12-Oct-2021 ಬೆಂಗಳೂರು ನಗರ

ಬೆಂಗಳೂರು: ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ವಿಮಾ ಯೋಜನೆ ಹಾಗೂ ನೌಕರರಿಗೆ 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೆ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ ಹಜ್ ಮತ್ತು ವಕ್ಪ್  ಸಚಿವ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಪೂಜೆಸಲ್ಲಿಸುವ ಅರ್ಚಕರು ಹಾಗೂ ದೇವಾಲಯ ನೌಕರರು ಆರೋಗ್ಯ ಸಮಸ್ಯೆಗೆ ಒಳಗಾದರೆ ಅವರಿಗೆ ರಕ್ಷಣೆ ಒದಗಿಸಲು ನಾನು ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ಮೇಲೆ ಅವರದ ರಕ್ಷಣೆಗೆ ವಿನೂತನ ವಿಮೆ ಯೋಜನೆ ಜಾರಿಗೊಳಿಸಿದ್ದು, ಅರ್ಚಕರು ಹಾಗೂ ಇಲಾಖೆ ನೌಕರರಿಗೆ ವಿಮೆ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದರಿಂದ ಮುಜರಾಯಿ ಇಲಾಖೆಯ ಸುಮಾರು 37,000 ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದರು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಸಂಸ್ಥೆಗಳಲ್ಲಿ ಈಗಾಗಲೇ 5ನೇವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಅರ್ಚಕರಿಗೆ 6ನೇವೇತನ ಆಯೋಗದ ವೇತನ ದೊರಕಿಸಿಕೊಡುವಂತೆ ಅರ್ಚಕರಿಂದ ಬಹಳ ದಿನಗಳಿಂದ ಬೇಡಿಕೆ ಇತ್ತು. ಈ ಬಗ್ಗೆ  ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತ್ವರಿತಗತಿಯಲ್ಲಿ ಅರ್ಚರಿಕರಿಗೆ 6ನೇ ವೇತನ ಆಯೋಗದ ವೇತನ ನೀಡಲು ತೀರ್ಮಾನಿಸಲಾಗಿದೆ. ಕೆಲವು ಷರತ್ತುಗಳನ್ನು ವಿಧಿಸಿ, ದೇವಾಲಯದ ವಾರ್ಷಿಕ ಆದಾಯದಲ್ಲಿ ನೌಕರರ ವೇತನ ಶೇ 35ರಷ್ಟು ಮೀರದಂತೆ ನೌಕರರನ್ನು 6ನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದ ಮುಜರಾಯಿ ಇಲಾಖೆಯ ಸುಮಾರು 1034 ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಇದಕ್ಕೆ 20 ಕೋಟಿ ರೂ. ವೆಚ್ಚವಾಗಲಿದ್ದು, ಆಯಾ ದೇವಸ್ಥಾನಗಳ ನಿಧಿಯಿಂದ ಒದಗಿಸಲಾಗುವುದು. ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ  ಎಂದು ತಿಳಿಸಿದರು. “ಸಿ” ದರ್ಜೆಯ ದೇವಸ್ಥಾನಗಳ ಅರ್ಚಕರಿಗೆ 6 ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ವೇತನ ನೀಡುಲಾಗುತ್ತದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಸಿ” ದರ್ಜೆಯ ಬಹುತೇಕ ದೇವಸ್ಥಾನಗಳಲ್ಲಿ ಖಾಯಂ ಅರ್ಚಕರು ಇರುವುದಿಲ್ಲ. ಈ ಬಗ್ಗೆ ಎಲ್ಲ ದೇವಸ್ಥಾಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಎಲ್ಲ ದೇವಸ್ಥಾನಗಳಿಗೆ ತಸ್ತಿಕ ಹಣ 19.ಕೋಟಿ ರೂ. ಬಾಕಿ ಇದ್ದು ಶೀಘ್ರವೇ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು....

Know More

ಮೈಷುಗರ್ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ

12-Oct-2021 ಮಂಡ್ಯ

ಮಂಡ್ಯ: ಮೈಷುಗರ್ ನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ. ಮೈಸೂರು ಬೆಂಗಳೂರು ಹೆದ್ದಾರಿಯ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ಮೈಷುಗರ್...

Know More

ಆಹಾರ ಸಂಸ್ಕರಣ ಘಟಕದಲ್ಲಿದ್ದ ಮಹಿಳೆ ಆತ್ಮಹತ್ಯೆಗೆ ಕಾರಣವೇನು?

12-Oct-2021 ಚಾಮರಾಜನಗರ

ಚಾಮರಾನಗರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಹಾರ ಸಂಸ್ಕರಣ ಘಟಕದಲ್ಲಿ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಆಹಾರ ಸಂಸ್ಕರಣ ಘಟಕದ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ...

Know More

ಮೈಸೂರಿನ ಮನೆಗಳಲ್ಲೀಗ ಬೊಂಬೆಗಳ ಮೆರವಣಿಗೆ

12-Oct-2021 ಮೈಸೂರು

ಮೈಸೂರು: ಮೈಸೂರು ದಸರಾ ಸರಳ ಸಾಂಪ್ರದಾಯಿಕವಾಗಿ ನಡೆಯುತ್ತಿದೆ. ನಗರದಲ್ಲಿ ದಸರಾ ಸಂಭ್ರಮ ಕಾಣಿಸದಿದ್ದರೂ ನವರಾತ್ರಿಯ ಒಂಬತ್ತು ದಿನವೂ ಮನೆಮನೆಗಳಲ್ಲಿ ಬೊಂಬೆಗಳ ಮೆರವಣಿಗೆ ಮಾತ್ರ ಯಾವುದೇ ಅಡ್ಡಿಯಿಲ್ಲದೆ ಸಾಗುತ್ತಿದೆ. ಬೊಂಬೆ ಕೂರಿಸುವುದು ಮೈಸೂರಿನ ಮನೆಗಳಲ್ಲಿ ಮಾತ್ರವಲ್ಲ...

Know More

ದೇವಾಲಯಗಳ ಸಂರಕ್ಷಣೆ ಎಲ್ಲರ ಹೊಣೆ: ಡಾ.ಕೆ.ಸಿ.ಎನ್

11-Oct-2021 ಮೈಸೂರು

ಕೃಷ್ಣರಾಜಪೇಟೆ: ದೇವಾಲಯಗಳು ನಮ್ಮ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ ಶರಣ ಶ್ರದ್ಧಾ ಕೇಂದ್ರಗಳಾದ ದೇವಾಲಯಗಳ ಸಂರಕ್ಷಣೆಯು ನಮ್ಮೆಲರ ಹೊಣೆಯಾಗಿದ್ದು, ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡಬೇಕಾಗಿದೆ ಎಂದು ರಾಜ್ಯದ ಯುಜನ ಸಬಲೀಕರಣ,...

Know More

ಅಂಬೇಡ್ಕರ್ ಕನಸು ನನಸು ಮಾಡಿದವರು ಕಾನ್ಸಿರಾಮ್

11-Oct-2021 ಮಂಡ್ಯ

ಪಾಂಡವಪುರ: ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರವರ ಕನಸನ್ನು ನನಸು ಮಾಡಿದವರೇ ಬಿಎಸ್ಪಿ ನಾಯಕ ದಾದಾಸಾಹೇಬ್ ಕಾನ್ಸಿರಾಮ್ ಎಂದು ಸಮಾಜ ಪರಿವರ್ತನಾ ಜನಸೇವಾ ಕೇಂದ್ರದ ತಾಲೂಕು ಅಧ್ಯಕ್ಷ ಲೋಕರಕ್ಷಕ ಹೇಳಿದರು. ತಾಲೂಕಿನ ಟಿ.ಎಸ್.ಛತ್ರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ...

Know More

ಮೈಷುಗರ್: ಸರ್ಕಾರದ ವಿಳಂಬ ಧೋರಣೆಗೆ ಆಕ್ರೋಶ

11-Oct-2021 ಮಂಡ್ಯ

ಮಂಡ್ಯ: ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸದೇ ಇರುವ ಸಕ್ಕರೆ ಕಾರ್ಖಾನೆ  ಸಾವಿನ ಅಂಚಿನಲ್ಲಿದೆ. ಸರ್ಕಾರ ಇದಕ್ಕೆ  ತಕ್ಷಣ ಚಿಕಿತ್ಸೆ ನೀಡಿ ಕಾರ್ಖಾನೆ ಉಳಿಸಿಕೊಳ್ಳುವ ಕೆಲಸ ಮಾಡದೇ ಸಂಪುಟ ಉಪಸಮಿತಿ ರಚಿಸುವ ತೀರ್ಮಾನ ಕೈಗೊಂಡಿರುವುದು ಮೂರ್ಖತನದ...

Know More

ಜನೌಷಧಿ ಮಳಿಗೆಗಳಲ್ಲಿ ಗುಣಮಟ್ಟ ಔಷಧ

11-Oct-2021 ಬೆಂಗಳೂರು

ಬೆಂಗಳೂರು: ಜನೌಷಧಿ ಮಳಿಗೆಗಳಲ್ಲಿನ ಔಷಧಗಳ ಉನ್ನತ ಗುಣಮಟ್ಟಹೊಂದಿದ್ದು, ಪ್ರತಿತಿಂಗಳು ಔಷಧ ನಿಯಂತ್ರಕರಿಂದ ಸೂಕ್ತ ತಪಾಸಣೆಗೆ ಒಳಪಡುತ್ತಿವೆ. ಈ ಮೂಲಕ ಜನ ಸಾಮಾನ್ಯರಿಗೆ ಕೇಂದ್ರ ಸರ್ಕಾರ ಆರೋಗ್ಯ ವಲಯದಲ್ಲಿ ಅತ್ಯುತ್ತಮ ಸೇವೆ ಒದಗಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವೀಯಾ ಹೇಳಿದ್ದಾರೆ. ನಗರದ ಬಸವನಗುಡಿಯಲ್ಲಿ ಫಾರ್ಮಸಿಟಿಕಲ್ಸ್ ಅಂಡ್ ಮೆಡಿಕಲ್ ಡಿವೈಸ್ ಬ್ಯೂರೋ ಆಫ್ ಇಂಡಿಯಾ- ಪಿಎಂಬಿಐನಿಂದ ಆಯೋಜಿಸಿದ್ದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಜನೌಷಧಿ ಮಳಿಗೆ ಕಾರ್ಯಕ್ರಮದಡಿ ನಾಗರಿಕರಿಗೆ ಅಗತ್ಯವಾಗಿರುವ ಔಷಧಿಗಳನ್ನು ಯುವ ಸಮೂಹ ಒಳಗೊಂಡಿರುವ ಜನಮಿತ್ರ ಕಾರ್ಯಕರ್ತರು ಸೂಕ್ತ ರೀತಿಯಲ್ಲಿ ತಲುಸುತ್ತಿದ್ದಾರೆ. ಕೇಂದ್ರದ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರ ರೈತಪರ, ಜನಪರ ಮತ್ತು ಕೈಗಾರಿಕಾ ಸ್ನೇಹಿಯಾಗಿ ಆಡಳಿತ ನಡೆಸುತ್ತಿದೆ ಎಂದರು. ಜನೌಷಧಿ ಮಳಿಗೆಗಳಿಂದ ಬಡವರು ಮತ್ತು ಮಧ್ಯಮವರ್ಗದವರಿಗೆ ಹೆಚ್ಚಿನ ರೀತಿಯಲ್ಲಿ ಲಾಭವಾಗುತ್ತಿದೆ. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಮಾಸಿಕ ಕನಿಷ್ಠ 4 ಸಾವಿರ ರೂಪಾಯಿ ಮೊತ್ತದ ಔಷಧಿ ಅಗತ್ಯವಿದೆ. ಆದರೆ, ಜನೌಷಧಿ ಮಳಿಗೆಗಳಲ್ಲಿ ಕೆಲವೇ ನೂರು ರೂಪಾಯಿಗಳಲ್ಲಿ ಈ ಎಲ್ಲಾ ರೀತಿಯ ಔಷಧಿಗಳು ದೊರೆಯುತ್ತಿವೆ. ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಜೀವನ ಪರ್ಯಂತ ಔಷಧ ಪಡೆಯುವ ಪರಿಸ್ಥಿತಿ ಇದ್ದು, ಇವರ ಮಾಸಿಕ ವೆಚ್ಚವನ್ನು ಸರ್ಕಾರ ಗಣನೀಯವಾಗಿ ಕಡಿಮೆ ಮಾಡಿದೆ. ದೇಶದಲ್ಲಿ ಇಂದು 8 ಸಾವಿರಕ್ಕೂ ಹೆಚ್ಚು ಜನೌಷಧಿ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಯೋಜನೆಯ ಯಶಸ್ಸಿಗೆ ಇದು ಸಾಕ್ಷಿಯಾಗಿದೆ ಎಂದು ಸಚಿವ ಮನ್ಸುಖ್ ಮಾಂಡವೀಯಾ ತಿಳಿಸಿದರು. ಜನೌಷಧಿ ಮಳಿಗೆಗಳಲ್ಲಿ ಗುಣಮಟ್ಟದ ಔಷಧಿಗಳನ್ನು ಪೂರೈಸುತ್ತಿದ್ದು, ಪ್ರತಿ ತಿಂಗಳು ಔಷಧಗಳನ್ನು ಔಷಧ ನಿಯಂತ್ರಕರು ಪರಿಶೀಲನೆಗೆ ಒಳಪಡಿಸುತ್ತಿದ್ದಾರೆ. ಈ ಹಿಂದೆ ಜಾಹೀರಾತುಗಳ ಮೂಲಕ ಔಷಧಗಳಿಗೆ ಮಾರುಕಟ್ಟೆ ಮತ್ತು ಬ್ರ್ಯಾಂಡ್ ಒದಗಿಸಲಾಗುತ್ತಿತ್ತು. ಇದನ್ನು ಮನಗಂಡು ಪ್ರಧಾನಮಂತ್ರಿ ಅವರು ಜನರಿಕ್ ಔಷಧಿಗಳಿಗೆ ಪ್ರತ್ಯೇಕ ಬ್ರ್ಯಾಂಡ್ ರೂಪಿಸುವಂತೆ ಸೂಚನೆ ನೀಡಿದ್ದರು. ಇದರಿಂದ ಇದೀಗ ಜನರಿಕ್ ಔಷಧಗಳಿಗೆ ತನ್ನದೇ ಆದ ಮಾನ್ಯತೆ ದೊರೆತಿದೆ. ಒಂದು ಜನೌಷಧಿ ಮಳಿಗೆಯಲ್ಲಿ ಕನಿಷ್ಠ 25ರಿಂದ 50 ಮಂದಿ ಜನೌಷಧಿ ಮಿತ್ರರನ್ನು ಒಳಗೊಂಡಿದ್ದು, ಕೋವಿಡ್ ಸಂದರ್ಭದಲ್ಲೂ ಅಗತ್ಯವಿರುವವರಿಗೆ ಸಮರ್ಪಕವಾಗಿ ಔಷಧಿಗಳನ್ನು ಪೂರೈಸಲಾಗಿದೆ ಎಂದು ಅವರು ತಿಳಿಸಿದ್ದಾರೆ....

Know More

ಶ್ರೀರಂಗಪಟ್ಟಣದಲ್ಲಿ 9ದಿನಗಳ ದಸರಾ ಆಚರಣೆಗೆ ಚಿಂತನೆ

10-Oct-2021 ಮಂಡ್ಯ

ಮಂಡ್ಯ: ಕೊರೋನಾ ಮಹಾಮಾರಿ ನಿರ್ನಾಮವಾಗಿ, ಕೋವಿಡ್ ಇಲ್ಲದಂತಾದರೇ ಮುಂದಿನ ವರ್ಷ 9 ದಿನಗಳ ಕಾಲ ದಸರಾ ಆಚರಿಸೋಣ. ಕೊರೋನಾ ಮುಕ್ತವಾಗಲು ತಾಯಿ ಚಾಮುಂಡೇಶ್ವರಿ ದೇವಿಯನ್ನ ಪ್ರಾರ್ಥಿಸೋಣ ಎಂದು ನಾರಾಯಣ ಗೌಡ ಅವರು ತಿಳಿಸಿದರು. ಶ್ರೀರಂಗಪಟ್ಟಣ...

Know More

ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಬಂಜರು

10-Oct-2021 ಚಾಮರಾಜನಗರ

ಕೃಷ್ಣರಾಜಪೇಟೆ: ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಅತಿಯಾಗಿ ಬಳಸಿ ಬೇಸಾಯ ಮಾಡುತ್ತಿರುವುದರಿಂದ ಫಲವತ್ತತೆ  ನಾಶವಾಗಿ ಭೂಮಿ ಬಂಜರಾಗುತ್ತಿದೆ ಎಂದು ರಾಜ್ಯದ ರೇಷ್ಮೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ ಹೇಳಿದರು. ತಾಲೂಕಿನ ಕಿಕ್ಕೇರಿ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!