ಟೀ ಕುಡಿದ ಮೇಲೆ ಲೋಟ ಬಿಸಾಡಬೇಡಿ ತಿನ್ನಿ... ಇದು  'ಬಿಸ್ಕತ್ ಟೀ'

ಟೀ ಕುಡಿದ ಮೇಲೆ ಲೋಟ ಬಿಸಾಡಬೇಡಿ ತಿನ್ನಿ... ಇದು  'ಬಿಸ್ಕತ್ ಟೀ'

Prema K H   ¦    Mar 13, 2021 02:54:50 PM (IST)
ಟೀ ಕುಡಿದ ಮೇಲೆ ಲೋಟ ಬಿಸಾಡಬೇಡಿ ತಿನ್ನಿ... ಇದು  'ಬಿಸ್ಕತ್ ಟೀ'

ಸೂರ್ಯ ತನ್ನ ದೈನಂದಿನ ಕೆಲಸಕ್ಕೆ ಹಾಜರಿಹಾಕಿದ ಕ್ಷಣದಿಂದ ಹೊಸ ದಿನದ ಪ್ರಾರಂಭದ ಸಂಕೇತ.  ಹೊಸ ದಿನದ ಪ್ರಾರಂಭ ಆಗುವುದು ಒಂದು ಕಪ್ ಚಹಾದಿಂದ. ಚಹಾದ ಉತ್ತಮ ಜೋಡಿ ಬಿಸ್ಕತ್ತು ಎಂದರೆ ತಪ್ಪಗಾಲಾರದು. ಈ ಜೋಡಿಗೆ ವಿನೂತನ ರೂಪ ಕೊಡುವ ದೃಷ್ಟಿಯಿಂದ ಬಿಸ್ಕತ್ತು  ಚಹಾ ಎನ್ನುವ   ಪರಿಚಯಿಸಿದ್ದು, "ಟೀ ಕುಡಿರಿ ಲೋಟ ತಿನ್ನಿ" ಬಿಸ್ಕತ್ತು ಚಹಾಯ ಸಂದೇಶ.

ಸಾಮಾನ್ಯವಾಗಿ ಟೀ ಅನ್ನು ಗಾಜು, ಪ್ಲಾಸ್ಟಿಕ್, ಸ್ಟೀಲ್ ಅಥವಾ ಮಣ್ಣಿನ, ಪೇಪರ್ ಲೋಟ ಗಳಲ್ಲಿ ಕೊಡುವುದು ಸರ್ವೇಸಾಮಾನ್ಯ. ಆದರೆ  ಟೀ ಅನ್ನು ಒಂದು ಖಾದ್ಯ ಕಪ್ ನಲ್ಲಿ ನೀಡಲಾಗುತ್ತಿದ್ದು, ಈ ಲೋಟ ಐಸ್ ಕ್ರೀಮ್ ಶಂಕುವಿನಿಂದ ತಯಾರಿಸಲಾಗುತ್ತದೆ. ಚಾಕೊಲೇಟ್ ರುಚಿಯನ್ನು ಹೊಂದಿದ್ದು ಈ  ಪರಿಸರಸ್ನೇಹಿ ಚಹಾ, ಚಹಾ ಪ್ರೀಯರನ್ನು ಚಹಾ ಪ್ರಿಯರ ಹೊಮ್ಮಸನ್ನು ಇನ್ನೂ ದ್ವಿಗುಣಗೊಳಿಸಿದೆ.  

ಬಿಸ್ಕತ್ತು ಚಹಾ ಹೆಸರು ಹೇಗೆ ಬಂತು? 
ಟೀ ಅನ್ನು ಬಿಸ್ಕೆಟ್ ಕಪ್ ನಲ್ಲಿ ಕೊಡುವುದರಿಂದ ಇದಕ್ಕೆ ಬಿಸ್ಕತ್ತು ಚಹಾ ಎಂದು ಕರೆಯಲಾಗುತ್ತದೆ. ಬಿಸ್ಕತ್ತು ಚಹಾ ಹೆಸರಿನಲ್ಲಿ ಕುತೂಹಲ ಆಡಗಿದ್ದು  ಹೆಚ್ಚಿನ ಸಂಖ್ಯೆಯಲ್ಲಿ ಜನರು ಟೀ  ಬಿಸ್ಕೆಟ್ ಕಪ್ಪನ್ನು ಇಷ್ಟ ಪಟ್ಟು ಕುಡಿಯುತ್ತಾರೆ. ಕೆಲವರು ಬಿಸ್ಕೆಟ್ ಗಾಗಿ ಕುಡಿದರೆ ಇನ್ನೂ ಕೆಲವರು ಟೀ ಗಾಗಿ ಕುಡಿಯುವುದುಂಟು. ಮೊದಲು ಬಿಸ್ಕತ್ತು ಚಹಾ ಸದ್ದು ಮಾಡಿದ್ದು  ಕೇರಳದ ತ್ರಿಶೂರ್ ಪಟ್ಟಣ್ದ ಬೇಕರಿಯೊಂದರಲ್ಲಿ.  ತಮಿಳುನಾಡಿನನಲ್ಲಿ ನಂತರ ಕೇರಳ. ಇದೀಗ ನಮ್ಮ ತುಳುನಾಡಿನಲ್ಲಿ ಬಿಸ್ಕತ್ತು ಚಹಾ ಹಗ್ಗೆ ಇಟ್ಟಿದ್ದು ನಗರದ ಕಲ್ಲಾಪುವಿನಲ್ಲಿ "ದಿ ಚಾಯ್ ಚೌಕ್ ಎಂಬ ಚಹಾ ಸ್ಟೋಲ್ ನಲ್ಲಿ  ದೊರೆಯುತ್ತದೆ. 

ಬಿಸ್ಕತ್ತು ಚಹಾ ಮಾಡುವ ವಿಧಾನ:
ಚಹಾದಲ್ಲಿ ಹಲವಾರು ವಿಧಗಳಿವೆ ಅಸ್ಸಾಂ ಟೀ, ಕಪ್ಪು ಚಹಾ, ಮಸಲಾ ಚಾಯ್, ಹಸಿರು ಚಹಾ, ಜಾಸ್ಮಿನ್ ಟೀ ಈ ಪಟ್ಟಿಯಲ್ಲಿ ಹೊಸದಾಗಿ ಬಿಸ್ಕತ್ತು ಚಹಾ ಕೂಡ ಸೇರ್ಪಡೆಗೊಂಡಿದೆ. ಬಿಸ್ಕತ್ತು ಚಹಾ ಮಾಡುವ ವಿಧಾನ ಸಾಮಾನ್ಯವಾಗಿ ಭಾರತೀಯರು ಸದಾ ಟೀ ಮಾಡುವ ರೀತಿಯೇ. ಒಂದು ಕಪ್ ಹಾಲುಗೆ ಚಹಾ ಎಲೆಗಳನ್ನು ಹಾಕಿ ಕುದಿಸಿ ಚಹಾ ತಯಾರದ ಮೇಲೆ ಗಾಜು, ಪ್ಲಾಸ್ಟಿಕ್, ಸ್ಟೀಲ್ ಚಹಾಯನ್ನು ಹಾಕದೆ ಬದಲಾಗಿ ಲೋಟದ ಆಕಾರದಲ್ಲಿ ಮೊದಲೆ ತಯಾರಿಸಿದ ಬಿಸ್ಕತ್ತು ಲೋಟಕ್ಕೆ ಹಾಕಿ್ವುದು. ಏಲಕ್ಕಿ, ಕೇಸರಿ, ಬಿಳಿಎಲ್ಲು, ವೆನಿಲ್ಲಾ ಹಾಗೂ ಸದಾ ಚಹಾ ರುಚಿಯಲ್ಲಿ ಲಭ್ಯವಿದ್ದು, ಮೊದಲೆ ಸಿದ್ದವಾಗಿರಿಸಿದ ಬಿಸ್ಕತ್ತು ಚಹಾಗೆ  ಚಹಾ ಪ್ರೀಯರು ಯಾವ ರುಚಿಯನ್ನು ಇಷ್ಟ ಪಡುತ್ತಾರೆ ಆ ರುಚಿಯ ಸಾಮಾಗ್ರಿಯನ್ನು ಸೇರಿಸುವುದು. ಬಿಸ್ಕತ್ತು ಬಿಸ್ಕೆಟ್ ನ ಬೆಲೆ 3೦ ರೂ. ಯಿಂದ ೪೦ ರೂ. ವರೆಗೆ ಲಭ್ಯವಿದೆ.

ಬಿಸ್ಕತ್ತು ಚಹಾ ಕಪ್ ನ ವಿಶೇಷತೆ:
ಈ ಕಪ್  ೬೦ ಮಿಲಿ ಬಿಸಿ ಟೀ ಅನ್ನು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ೨೦೧೯ರಲ್ಲಿ ದೇಶದಾದ್ಯಂತ ಪ್ಲಾಸ್ಟಿಕ್ ಕವರ್ ಬಳಕೆಗೆ ಸರ್ಕಾರವು  ನಿಷೇಧವನ್ನು ಹೇರಿದ್ದು ೨೦೨೦ರಲ್ಲಿ ಈ ಹೊಸ ಉತ್ಪನ್ನವನ್ನು ಜಾರಿಗೆ ತರಲಾಗಿದ್ದು ಪ್ಲಾಸ್ಟಿಕ್ ಬಳಕೆಯನ್ನು ತಡೆಯುವುದಕ್ಕೆ ಪರ್ಯಾಯ ಮಾರ್ಗವಾಗಿದೆ