ಹೊಸ ರೂಪದಲ್ಲಿ ಎಲ್ಲರ ಮನಗೆದ್ದ ಹಳೆ ಶೈಲಿಯ ಉಡುಪು ಲೆಹೆಂಗ ಸೀರಿಯಲ್

ಹೊಸ ರೂಪದಲ್ಲಿ ಎಲ್ಲರ ಮನಗೆದ್ದ ಹಳೆ ಶೈಲಿಯ ಉಡುಪು ಲೆಹೆಂಗ ಸೀರಿಯಲ್

MS   ¦    Dec 27, 2020 04:17:06 PM (IST)
ಹೊಸ ರೂಪದಲ್ಲಿ ಎಲ್ಲರ ಮನಗೆದ್ದ ಹಳೆ ಶೈಲಿಯ ಉಡುಪು ಲೆಹೆಂಗ ಸೀರಿಯಲ್

ಸಾಂಪ್ರದಾಯಿಕ ಉಡುಗೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇರುವ ಸೀರೆ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಎಲ್ಲಾ ಕಾಲಘಟ್ಟದ, ಯಾವುದೇ ವಯಸ್ಸಿನ ಮಿತಿ ಇಲ್ಲದೆ ಉಡುಪು ಸೀರೆ ಎಂದರೆ ತಪ್ಪಾಗಲಾರದು. ಕಚ್ಚೆ ಸೀರೆಯಿಂದ ಹಿಡಿದು ಮಾರುಕಟ್ಟೆಯಲ್ಲಿ ದೊರೆಯುವ ಟ್ರೆಂಡೀ ಸೀರೆಯವರೆಗೂ ಹೆಂಗಳೆಯರು ನೆಚ್ಚಿ ಅತಿ ಜಾಗರೂಕತೆಯಿಂದ ಧರಿಸುವ ಒಂದು ಉಡುಪು. ಇದೀಗ ಆ ಉಡುಪಿಗೆ ಇನ್ನೊಂದು ಮಾದರಿಯ ಉಡುವ ವಿಧಾನ ಸೇರಿಕೊಂಡಿದೆ ಅಷ್ಟೇ, ಅದುವೇ ಲೆಹೆಂಗಾ.

ಇದರಲ್ಲಿರುವ ವಿಪರ್ಯಾಸ ಎಂದರೆ ಇಂದಿನ ಫ್ಯಾಷನ್ ಲೋಕದಲ್ಲಿ ನಟ-ನಟಿಯರು ಅದೇನೇ ಮಾಡಿದರೂ ಅದೊಂದು ಟ್ರೆಂಡ್ ಆಗಿ ಸ್ವೀಕರಿಸಲಾಗುತ್ತದೆ. ಅದಕ್ಕೆ ಅವರುಡುವ ಸೀರೆಯೂ ಹೊರತಾಗಿಲ್ಲ. ಸದ್ಯ ಫ್ಯಾಶನ್ ಲೋಕದಲ್ಲಿ ಸೀರೆ ಎನ್ನುವುದು ಇನ್ನೊಂದು ಆಯಾಮಾದಲ್ಲಿ ಹೆಣ್ಣುಮಕ್ಕಳ ನೆಚ್ಚಿನ ಪಟ್ಟಿಗೆ ಸೇರಿಕೊಂಡಿದೆ. ಅದುವೇ “ಲೆಹೆಂಗಾ ಶೈಲಿಯ ಸೀರೆ”.

ಈವರೆಗೂ ಸಾಮಾನ್ಯವಾಗಿ ಲೆಹೆಂಗಾದೊಂದೆಗೆ ಕುರ್ತಾ ಧರಿಸುತ್ತಾರೆ. ಈಗ ಅದೇ ಲೆಹೆಂಗಾ ಸೀರೆಯೊಂದಿಗೆ ಹೊಂದಿಕೊಂಡಿದೆ. ಲಂಗಾದಾವಣಿಯುಟ್ಟು ನೆರಿಗೆ ಮಾಡಿ ಸಂಭ್ರಮಿಸೊದು ಭಾರತೀಯರಿಗೆ ಹೊಸತಲ್ಲ. ಆದರೆ ಕೆಲವೊಮ್ಮೆ ಹಳೆ ಫ್ಯಾಷನ್‍ಗಳೇ ಹೊಸ ರೂಪದಲ್ಲಿ, ಹೊಸ ಹೆಸರಿನೊಂದಿಗೆ ಬಂದಾಗ ಹೆಂಗಳೆಯರ ಮನಸ್ಸನ್ನು ಬೇಗ ಸೆಳೆಯುತ್ತದೆ ಹಾಗೂ ಗೆಲ್ಲುತ್ತದೆ. ಅಂತಹುದರ ಪಟ್ಟಿಗೆ ಈಗ ಲೆಹೆಂಗಾ ಸ್ಟೈಲ್ ಸಾರೀ ಕೂಡ ಸೇರಿಕೊಂಡಿದೆ.

ಈ ಲೆಹೆಂಗಾ ಸೀರೆಗಳ ವಿಶೇಷತೆ ಎಂದರೆ ಸಾಮಾನ್ಯ ಸೀರೆಯ ನೆರಿಗೆಗಳು ಎದುರು ಇರುತ್ತವೆ ಆದರೆ ಲೆಹೆಂಗಾ ಶೈಲಿಯ ಸೀರೆಯಲ್ಲಿ ಬೆನ್ನಿನ ಬಳಿ ನೆರಿಗೆಗಳು ಇದ್ದು ಎದುರು ಲೆಹೆಂಗಾ ಧರಿಸಿದಂತೆ ಕಾಣುತ್ತದೆ. ಮದುವೆ, ಸಮಾರಂಭಗಳಿಗೆ ಈ ಸಾಂಪ್ರದಾಯಿಕ ಉಡುಗೆ ಉತ್ತಮವಾಗಿ ಒಪ್ಪುತ್ತದೆ ಹಾಗೂ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತದೆ. ಕಸೂತಿಯಿಂದ ಕೂಡಿದ ಲೆಹೆಂಗಾಗಳಿಗೆ ಒಪ್ಪುವಂತೆ ಬ್ಲೌಸ್‍ನೊಂದಿಗೆ ಸೀರೆಯನ್ನು ಸೆಟ್ ಮಾಡಿ, ಅದಕ್ಕೊಂದು ಒಪ್ಪುವ ಕಿವಿಯೋಲೆ ಧರಿಸಿ, ಹಾಗೆ ಒಪ್ಪುವಂತಹ ಕೇಶಾಲಂಕಾರ ಮಾಡಿದರೆ ಆಕೆಯ ಅಂದ ದುಪ್ಪಟ್ಟಾಗುವುದರಲ್ಲಿ ಸಂಶಯವಿಲ್ಲ.