ವಾಯುಮಾಲಿನ್ಯದ ಬಗ್ಗೆ ವಾಯು ಗುಣಮಟ್ಟ ಸೂಚ್ಯಂಕ ಏನು ಹೇಳುತ್ತದೆ?

ವಾಯುಮಾಲಿನ್ಯದ ಬಗ್ಗೆ ವಾಯು ಗುಣಮಟ್ಟ ಸೂಚ್ಯಂಕ ಏನು ಹೇಳುತ್ತದೆ?

GM   ¦    Mar 16, 2020 01:56:32 PM (IST)
ವಾಯುಮಾಲಿನ್ಯದ ಬಗ್ಗೆ ವಾಯು ಗುಣಮಟ್ಟ ಸೂಚ್ಯಂಕ ಏನು ಹೇಳುತ್ತದೆ?

ಇಸವಿ 2015ರಿಂದ ಭಾರತವು ವಾಯುಮಾಲಿನ್ಯವನ್ನು ಅಳೆಯುವುದಕ್ಕಾಗಿ ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕವನ್ನು ಬಳಸುತ್ತಿದ್ದು, ಇದು ದಿನವಿಡೀ ಅಥವಾ ಒಂದು ದೊಡ್ಡ ಪ್ರದೇಶದಾದ್ಯಂತ ಮಾಲಿನ್ಯದ ಸರಾಸರಿ ಲೆಕ್ಕವನ್ನು ದಾಖಲಿಸುತ್ತದೆ. ಈ ಸೂಚ್ಯಂಕವು ಪಿಎಂ 10 ಹಾಗೂ ಪಿಎಂ 2.5 ನಂತಹ ವಾಯು ಮಾಲಿನ್ಯಕಾರಕಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳುತ್ತದೆ. ದತ್ತಾಂಶಗಳ ಸರಳತೆ ಹಾಗೂ ನಿಖರತೆಗಾಗಿ ಕೇವಲ ಒಂದು ಮಾಲಿನ್ಯಕಾರಕ - ಪಿಎಂ 2.5ಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದಾಗಿ ತಜ್ಞರು ಶಿಫಾರಸು ಮಾಡಿದ್ದಾರೆ.

ನೀತಿ ಸಂಶೋಧನಾ ಕೇಂದ್ರದ ಸಂಶೋಧಕ ಸಂತೋಷ್ ಹರೀಶ್ ಅವರ ಪ್ರಕಾರ `ಇತ್ತೀಚಿಗೆ ವಾಯುಗುಣಮಟ್ಟ ಸುಧಾರಿಸಿದೆಯೇ? – ಎಂಬ ಪ್ರಶ್ನೆಗೆ ಉತ್ತರಿಸಬೇಕಾದರೆ ನಾನು ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ)ವನ್ನು ಬಳಸಬಹುದೇ ಎಂಬುದು ನನಗೆ ತಿಳಿದಿರುವುದಿಲ್ಲ.

ಇದೊಂದು ನೇರವಾದ ವಿಧಾನವಲ್ಲ. ಬಹುಮಾಲಿನ್ಯಕಾರಕಗಳನ್ನು ಅಳೆಯುವುದಕ್ಕೆ ಈ ಸೂಚ್ಯಂಕ ಸಹಾಯ ಮಾಡಬಹುದು. ಆದರೆ ನಾವು ಭಾರತದಲ್ಲಿ ಪಿಎಂ 2.5 ಆಗಿರುವ ಸಾರ್ವಕಾಲಿಕ ಮಾಲಿನ್ಯಕಾರಕಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಸಾರ್ವಜನಿಕರು ಹಾಗೂ ಆಡಳಿತ ನಡೆಸುವವರೊಂದಿಗೆ ಸಂವಹನ ನಡೆಸಲು ಹಾಗೂ ಗಾಳಿಯ ಗುಣಮಟ್ಟವನ್ನು ಅಳೆಯಲು ಸುಲಭವಾಗುವಂತೆ ಒಂದು ಮಾಲಿನ್ಯಕಾರಕದ ಬಗ್ಗೆ ಕೇಂದ್ರೀಕರಿಸುವುದು ಅಗತ್ಯವಾಗಿದೆ.

ಎಕ್ಯೂಐ ಸೂಚ್ಯಂಕವು ವಾಯುಮಾಲಿನ್ಯದ ಶ್ರೇಣಿಯನ್ನು ತೋರಿಸುವಲ್ಲಿ ತಜ್ಞರನ್ನು ಗೊಂದಲಕ್ಕೀಡು ಮಾಡುತ್ತದೆ. ವಾಯುಮಾಲಿನ್ಯದ ಪ್ರಮಾಣದಲ್ಲಿ ಹೆಚ್ಚಳ ಅಥವಾ ಇಳಿಕೆಯ ವಿಷಯಗಳಲ್ಲಿ ಚರ್ಚೆಗೆ ಗ್ರಾಸವಾಗಿರುವ ಎಕ್ಯೂಐ ಸೂಚ್ಯಂಕವು ಅನೇಕ ಮಾಲಿನ್ಯಕಾರಕಗಳನ್ನು ಅಳೆಯುವುದಕ್ಕೆ ಅನುವು ಮಾಡಿಕೊಡುವ ಜೊತೆಗೆ ಒಂದು ನಿರ್ಧಿಷ್ಟ ಸಮಯದಲ್ಲಿ ವಾಯುಗುಣಮಟ್ಟವು ಕೆಟ್ಟದಾಗಿ ಕಾರ್ಯನಿರ್ವಹಿಸುವ ಮಾಲಿನ್ಯಕಾರಕವನ್ನು ಸೂಚಿಸುವುದು ಗೊಂದಲಕ್ಕೆ ಕಾರಣವಾಗಿದೆ.

ಉತ್ತರದ ಬಹುತೇಕ ನಗರಗಳಲ್ಲಿ ಪಿಎಂ 2.5 ಮಟ್ಟವು ಹೆಚ್ಚಾಗಿದ್ದು ತಜ್ಞರ ಪ್ರಕಾರ ಎಕ್ಯೂಐ ಸೂಚ್ಯಂಕದಲ್ಲಿ ತೋರಿಸುವ ಎಂಟು ಮಾಲಿನ್ಯಕಾರಕಗಳನ್ನು ಅಳೆಯುವ ಬದಲು ಮಾಲಿನ್ಯದ ಸೂಚಕವಾಗಿಯಷ್ಟೇ ಈ ವಿಧಾನವನ್ನು ಬಳಸಬೇಕು. ಇದನ್ನು ಹೊರತುಪಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಯೋಚನೆಯಿಂದ ಈ ರೀತಿ ಎಂಟು ವಿವಿಧ ಮಾಲಿನ್ಯಕಾರಕಗಳನ್ನು ತಿಳಿಯಪಡಿಸುವುದೇ ಗೊಂದಲನ್ನುಂಟು ಮಾಡುತ್ತದೆ.

ಮೇಲ್ವಿಚಾರಣಾ ಕೇಂದ್ರಗಳ ಕೊರತೆ: 
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮಾರ್ಗಸೂಚಿಗಳ ಪ್ರಕಾರ ಎಕ್ಯೂಐಯನ್ನು ಅಳೆಯುವುದಕ್ಕಾಗಿ ಭಾರತಕ್ಕೆ ಕನಿಷ್ಠ 4,098 ಕಾಂಪಾಕ್ಟ್ ಏರ್ ಕ್ವಾಲಿಟಿ ಮಾನಿಟರಿಂಗ್ ಸ್ಟೇಷನ್ (ಸಿಎಕ್ಯೂಎಮ್‍ಎಸ್)ಗಳ ಅಗತ್ಯವಿದ್ದು, ಆದರೆ ಈಗಿರುವುದು ಕೇವಲ 200 ಕೇಂದ್ರಗಳಷ್ಟೇ. ಅದಷ್ಟೇ ಅಲ್ಲದೆ, 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇನ್ನೂ ಕೂಡಾ ತಮ್ಮ ಮೊದಲ ಸಿಎಕ್ಯೂಎಮ್‍ಎಸ್ ಕೇಂದ್ರಗಳಿಗಾಗಿ ಕಾಯುತ್ತಿವೆ.

ಹೆಚ್ಚಿನ ನಗರಗಳು ಮಾಲಿನ್ಯಕಾರಕಗಳ ಸಂಪೂರ್ಣ ವಿವರಗಳನ್ನು ಪಡೆಯುವಂತಹ ವ್ಯವಸ್ಥೆಗಳಿರುವ ಇಂತಹ ಕೇವಲ ಒಂದು ಕೇಂದ್ರವನ್ನಷ್ಟೇ ಹೊಂದಿವೆ. ಇದರಿಂದಾಗಿ ಸಂಖ್ಯಾಶಾಸ್ತ್ರೀಯ ನೆಲೆಯಲ್ಲಿ ಹೇಳುವುದಾದರೆ ಈಗಿನ ಸೂಚ್ಯಂಕವು ನೀಡಿರುವ ವರದಿಗಳು ಗಾಳಿಯ ಮಾಲಿನ್ಯಕ್ಕಿಂತ ಅತ್ಯಲ್ಪವಾಗಿರಬಹುದು ಮತ್ತು ತಪ್ಪು ಚಿತ್ರಣವನ್ನೂ ನೀಡಿರಬಹುದು.

ಕ್ಲೀನ್ ಏರ್ ಕಲೆಕ್ಟಿವ್ ಇದರ ಸಂಯೋಜಕರಾಗಿರುವ ಬ್ರಿಕೇಶ್ ಸಿಂಗ್ `ಹೆಚ್ಚಿನ ಸಂಖ್ಯೆಯಲ್ಲಿ ಮಾನಿಟರಿಂಗ್ ಕೇಂದ್ರಗಳನ್ನು ಹೊಂದುವುದರಿಂದ ಉತ್ತಮ ಡಾಟಾವನ್ನು ನೀಡುತ್ತದೆ ಮತ್ತು ಪ್ರಾದೇಶಿಕವಾಗಿರುವ ಮಾಲಿನ್ಯ ಕಣಕಣಗಳ ಮಾಹಿತಿಯನ್ನೂ ಸಂಗ್ರಹಿಸುವುದು ಸಾಧ್ಯ. ಕಡಿಮೆ ವೆಚ್ಚದ ಸಂವೇದಕಗಳ ಬಳಕೆಯಿಂದ ಸಿಎಕ್ಯೂಎಮ್‍ಎಸ್‍ನಷ್ಟು ನಿಖರ ಮಾಹಿತಿ ಸಂಗ್ರಹ ಕಷ್ಟವಾಗಬಹುದು. ಆದರೆ ಮಾಲಿನ್ಯದ ಮಟ್ಟವು ಹೆಚ್ಚಿರುವಾಗ ನಿಖರತೆಯ ವಿಷಯ ನಮಗೆ ಅಪ್ರಸ್ತುತವೆನಿಸುತ್ತದೆ. ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಲು ಸಮರ್ಥವಾಗಿರುವ ದೇಶಗಳು ಸಾರ್ವಜನಿಕರು ಬಳಸುವ ಸಾಧನಗಳಿಂದಲೇ ಡೇಟಾವನ್ನು ಪಡೆಯಲು ಪ್ರೋತ್ಸಾಹಿಸುತ್ತವೆ ಮತ್ತು ಅದೇ ಮಾಹಿತಿಯನ್ನು ಆಡಳಿತವೂ ಪಡೆದುಕೊಳ್ಳುತ್ತದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಸ್ಥಳೀಯ ಮಟ್ಟಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸ್ವಯಂಪ್ರೇರಣೆಯ ವಾಯುಮಾಲಿನ್ಯದ ಜಾಗೃತಿ ಹಮ್ಮಿಕೊಳ್ಳುವುದು ಹಾಗೂ ಇದಕ್ಕಾಗಿ ಸಮುದಾಯದ ಗುಂಪುಗಳನ್ನು ರಚಿಸಿಕೊಂಡು ಕಾರ್ಯಪ್ರವೃತ್ತರಾಗುವುದಕ್ಕೆ ಪ್ರೋತ್ಸಾಹಿಸುವುದು. ಇಂತಹ ಉಪಕ್ರಮಗಳ ಮೂಲಕ ಏನಾದರೂ ವಾಯುಮಾಲಿನ್ಯದ ನಿಖರ ಮಾಹಿತಿಯನ್ನು ಪಡೆಯಲು ಸಾಧ್ಯವಾದರೆ ಇವು ಖಂಡಿತ ಯಶಸ್ವಿಯಾಗಬಹುದು’ ಎನ್ನುತ್ತಾರೆ ಸಿಂಗ್.

ಸಿಎಕ್ಯೂಎಮ್‍ಎಸ್ ಕೇಂದ್ರವೊಂದರ ಸ್ಥಾಪನೆಗೆ ತಗಲುವ ಸರಾಸರಿ ವೆಚ್ಚವು 1 ಕೋಟಿ ರೂಪಾಯಿ ಆಗಿರುವುದರಿಂದ ಕಡಿಮೆ ವೆಚ್ಚದ ಸಂವೇದಕ (ಸೆನ್ಸಾರ್) ಆಧಾರಿತ ಮಾನಿಟರ್‍ಗಳ ಹೆಚ್ಚು ಪ್ರಸಿದ್ಧಿಗೆ ಬರುತ್ತದೆ. `ಇಂತಹ ಮಾನಿಟರಿಂಗ್ ಕೇಂದ್ರಗಳ ಜಾಲವು ಕೇವಲ ಕೆಲವೇ ಕೆಲವು ನಗರಗಳನ್ನಷ್ಟೇ ಕೇಂದ್ರೀಕರಿಸದೆ ಕೈಗಾರಿಕಾ ಪ್ರದೇಶಗಳು ಹಾಗೂ ಇಂಡೋ ಗಂಗೆಟಿಕ್ ಬೆಲ್ಟ್ (ಉತ್ತರದ ಗಂಗಾ ತೀರ ಹಾಗೂ ಸಿಂಧೂ ನದಿ ತೀರದ ನಗರಗಳು) ವಿಸ್ತರಿಸುವುದು ಮುಖ್ಯ’ ಎನ್ನುತ್ತಾರೆ ಸಂತೋಷ್.

ಮಾನಿಟರಿಂಗ್ ಉಪಕರಣಗಳ ವಿಧಗಳು: ವಾಯುಗುಣಮಟ್ಟವನ್ನು ಅಳೆಯುವ ಮಾನಿಟರಿಂಗ್ ಉಪಕರಣಗಳಲ್ಲಿ ಎರಡು ವಿಧಗಳಿವೆ. ಎಸ್‍ಇಎಮ್ (ಸರ್ಫೇಸ್ ಎಮಿಷನ್ ಮಾನಿಟರಿಂಗ್ – ಮೇಲ್ಮೈ ಹೊರಸೂಸುವಿಕೆ ಮೇಲ್ವಿಚಾರಣೆ) ಮತ್ತು ಸಿಎಕ್ಯೂಎಮ್‍ಎಸ್ (ನಿರಂತರ ವಾಯುಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳು) ಎಂದು ಕರೆಯಲ್ಪಡುವ ಸುತ್ತುವರಿದ ಮೇಲ್ವಿಚಾರಣಾ ಕೇಂದ್ರಗಳು. ಎಸ್‍ಇಎಂಗಳನ್ನು ಮೂಲ ಮಾಲಿನ್ಯ ಮಾಪನಕ್ಕಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಕೈಗಾರಿಕೆಗಳು ಹಾಗೂ ಕಾರ್ಖಾನೆಗಳ ಮಾಲಿನ್ಯವನ್ನು ದಾಖಲಿಸುವುದು. ಇಂತಹ ಮಾಹಿತಿಯು ನೇರವಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗುತ್ತದೆ. ಇದು ಎಕ್ಯೂಐಗಿಂತ ಭಿನ್ನವಾಗಿ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತದೆ. ಆದರೂ ಎಸ್‍ಇಎಂ ಕೂಡಾ ಎಕ್ಯೂಐ ರೀತಿಯಲ್ಲೇ ಮಾನದಂಡವನ್ನು ಹೊಂದಿದೆ. ಸಿಎಕ್ಯೂಎಮ್‍ಎಸ್ ಸಂಗ್ರಹಿಸಿದ ಯುಎಸ್ ಇಪಿಎ ಪ್ರಮಾಣೀಕೃತ ಸಾಧನಗಳಿಂದ ಪಡೆದ ಮಾಹಿತಿಯನ್ನು ಎಕ್ಯೂಐ ಲೆಕ್ಕಹಾಕಿ ನೋಡುತ್ತದೆ. ದೇಶದಾದ್ಯಂತ ಇಂತಹ 200 ಸಿಎಕ್ಯೂಎಮ್‍ಎಸ್‍ಗಳಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲೇ ಸ್ಥಾಪಿಸಲಾಗಿದೆ.