‘ಐತಿಹಾಸಿಕ ಪಿಂಕ್‌ಬಾಲ್ ಟೆಸ್ಟಿಗೆ ಸಾಕ್ಷಿಯಾಗಲಿರುವ ಮೊಟೆರಾ ಸ್ಟೇಡಿಯಂ’

‘ಐತಿಹಾಸಿಕ ಪಿಂಕ್‌ಬಾಲ್ ಟೆಸ್ಟಿಗೆ ಸಾಕ್ಷಿಯಾಗಲಿರುವ ಮೊಟೆರಾ ಸ್ಟೇಡಿಯಂ’

Safwan   ¦    Feb 24, 2021 05:27:21 PM (IST)
‘ಐತಿಹಾಸಿಕ ಪಿಂಕ್‌ಬಾಲ್ ಟೆಸ್ಟಿಗೆ ಸಾಕ್ಷಿಯಾಗಲಿರುವ ಮೊಟೆರಾ ಸ್ಟೇಡಿಯಂ’

‘ಪಿಔಕ್ ಬಾಲ್ ಟೆಸ್ಟ್’, ‘ಡೇ ನೈಟ್ ಟೆಸ್ಟ್’ ಈ ಎರಡು ಹೊಸ ಪದಗಳು ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಲ್ಲಿದೆ. ೨೦೧೫ ರಿಂದ ಈ ಎರಡು ಶಬ್ದಗಳು ಚಾಲ್ತಿಯಲ್ಲಿದ್ದು, ಈ ಬಗ್ಗೆ ಹಲವು ಗೊಂದಲಗಳಿವೆ. ರೆಡ್ ಬಾಲ್ ಟೆಸ್ಟ್ ಪಂದ್ಯಗಳು ನಡೆಯುತ್ತಿದ್ದ ವೇಳೆಗೆ ಪಿಂಕ್ ಬಾಲ್ ಟೆಸ್ಟ್ ಸರಣಿಗಳನ್ನು ಆಯಾ ದೇಶಗಳ ಕ್ರಿಕೆಟ್ ಮಂಡಳಿ ಆಯೋಜಿಸಲು ಕಾರಣವೇನು? ಎಂಬುವುದು ಕ್ರೀಡಾಭಿಮಾನಿಗಳ ಪ್ರಶ್ನೆ.

೧೮೭೭ ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ವು ಕೆಂಪು ಚೆಂಡಿನೊoದಿಗೆ ಆರಂಭವಾಯಿತು. ೨೦೧೫ ರ ತನಕವು ಟೆಸ್ಟ್ ಪಂದ್ಯ ಗಳನ್ನು ಕೆಂಪು ಚೆಂಡಿನಿoದಲೇ ಆಡಲಾಗುತ್ತಿತ್ತು. ಐದು ದಿನಗಳ ಪ್ರತಿಯೊಂದು ಟೆಸ್ಟ್ ಪಂದ್ಯ ದಲ್ಲಿ ವೀಕ್ಷಕರ ಸಂಖ್ಯೆಯೂ ಕಡಿಮೆಯಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಸಿಲಿನಲ್ಲಿಯೇ ಪಂದ್ಯಗಳನ್ನು ವೀಕ್ಷಿಸಬೇಕಿತ್ತು. ಹೀಗಾದರೆ ಟೆಸ್ಟ್ ಪಂದ್ಯಕ್ಕೆ ಭವಿಷ್ಯವಿರಲ್ಲ ಅಂತಾ ಕ್ರಿಕೆಟ್ ತಜ್ಞರು ಭವಿಷ್ಯ ನುಡಿದಿದ್ದರು. ಇದೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಐಸಿಸಿ ಡೇ ನೈಟ್ ಟೆಸ್ಟ್ ಪಂದ್ಯ ಗಳನ್ನು ಆಯೋಜಿಸಲು ಮುಂದಾಯಿತು. ಪ್ರಪ್ರಥಮ ಪ್ರಾಯೋಗಿಕ ಡೇ ನೈಟ್ ಪಂದ್ಯ ವನ್ನು ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಸಲಾಯಿತು. ಜೊತೆಗೆ ಈ ಮಹತ್ವದ ಪಂದ್ಯ ದಲ್ಲಿ ಇನ್ನೊಂದು ಬದಲಾವಣೆ ಜಾರಿಗೊಳಿಸಾಲಾಯಿತು.


ಪ್ರಾರಂಭದಿoದಲೂ ಟೆಸ್ಟ್ ಪಂದ್ಯ ಗಳಲ್ಲಿ ಬಳಸುತ್ತಿದ್ದ ಕೆಂಪುಚೆoಡು, ಡೇ ನೈಟ್ ಟೆಸ್ಟಿನಲ್ಲಿ ಬಳಸಲು ಅನಾನುಕೂಲವಾಗಿತ್ತು. ಯಾಕೆಂದರೆ ರಾತ್ರಿಯ ಪಂದ್ಯ ಗಳಲ್ಲಿ ಕೆಂಪು ಚೆಂಡು ಆಟಗಾರರಿಗೆ ಸೂಕ್ಷ್ಮವಾಗಿ ಕಾಣುತ್ತಿರಲಿಲ್ಲ. ಈ ಕಾರಣಕ್ಕಾಗಿ ‘ಪಿಂಕ್ ಬಾಲ್’ ಅಥವಾ ಗುಲಾಬಿ ಬಣ್ಣದ ಚೆಂಡನ್ನು ಡೇ ನೈಟ್ ಪಂದ್ಯ ಗಳಲ್ಲಿ ಬಳಸಲು ತರ‍್ಮಾನಿಸಲಾಯಿತು. ಪಿಂಕ್ ಬಾಲ್ ಪಂದ್ಯದಲ್ಲಿ ಶೈನಿಂಗ್ (ಹೊಳಪು) ಇರುವುದರಿಂದ ಆಟಗಾರರಿಗೆ ಫೀಲ್ಡೀಂಗ್ -ಕ್ಷೇತ್ರ ರಕ್ಷಣೆ ಮಾಡಲು ಹೆಚ್ಚು ನೆರವಾಗುವ ಉದ್ದೇಶದಿಂದ ೨೦೧೫ ರ ನಂತರದ ಡೇ ನೈಟ್ ಟೆಸ್ಟ್ ಪಂದ್ಯಗಳಲ್ಲಿ ಪಿಂಕ್ ಬಾಲನ್ನು ಬಳಸಲಾಗುತ್ತಿದೆ.

ಭಾರತ ತಂಡವು ೨೦೧೯ ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೊಲ್ಕಾತ್ತಾದ ಈಡನ್ ಗರ‍್ಡನ್ ಕ್ರೀಡಾಂಗಣದಲ್ಲಿ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಆಡಿತ್ತು. ಈ ಪಂದ್ಯದಲ್ಲಿ ಬಾರತವು ಇನ್ನಿಂಗ್ಸ್ ಹಾಗೂ ೪೬ ರನ್ ಗಳ ಜಯ ಗಳಿಸತ್ತು. ಪ್ರಸ್ತುತ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಚೊಚ್ಚಲ ಪಿಂಕ್ ಬಾಲ್ ಸೆಂಚುರಿ, ಇಶಾಂತ್ ರ‍್ಮಾ ಹಾಗೂ ಉಮೇಶ್ ಯಾದವ್ ೫ ವಿಕೆಟ್ ಗಳ ಗೊಂಚಲು ಪಡೆದಿದ್ದರು. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಈ ಪಂದ್ಯಕ್ಕೆ ಹಾಜಾರಾಗುವ ಮೂಲಕ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಿದ್ದರು.
ಭಾರತ ಎರಡನೇ ಪಿಂಕ್ ಬಾಲ್ ಟೆಸ್ಟ್, ಆಸ್ಟ್ರೇಲಿಯಾ ವಿರುಧ್ಧವಾಗಿತ್ತು. ಆಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅಸಿಸ್ ೮ ವಿಕೆಟ್ ಗಳ ಜಯ ಗಳಿಸಿತ್ತು.

ಇದೀಗ ಭಾರತ ತವರಿನಲ್ಲಿ ಇಂಗ್ಲೆಂಡ್ ವಿರುಧ್ಧ ಪಿಂಕ್ ಬಾಲ್ ಟೆಸ್ಟ್ ಆಡಲು ಸಿದ್ದವಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಖ್ಯಾತಿಯ ಗುಜರಾತಿನ ಅಹ್ಮದಾಬಾದ್ ನ ಮೊಟೇರಾ ಸ್ಟೇಡಿಯಂನಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಸದಾರ್ ವಲ್ಲಭಾಯಿ ಪಟೇಲ್ ಕ್ರೀಡಾಂಗಣವು ೨೦೧೨ ರಲ್ಲಿ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಕೊನೆಯ ಬಾರಿ ಸಾಕ್ಷಿಯಾಗಿತ್ತು. ಈ ವೇಳೆ ಕೇವಲ ೫೦ ಸಾವಿರ ಪ್ರೇಕ್ಷಕರನ್ನು ಹೊಂದುವ ಸಾರ‍್ಥ್ಯ ಹೊಂದಿತ್ತು. ೨೦೧೫ ರಲ್ಲಿ ಈ ಕ್ರೀಡಾಂಗಣದ ನವೀಕರಣಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ಕಾಮಗಾರಿ ಪರ‍್ಣಗೊಂಡಿದ್ದು, ನಮಸ್ತೆ ಟ್ರಂಪ್ ಕರ‍್ಯಕ್ರಮ ಹಾಗೂ ಸೈಯದ್ ಮುಶ್ತಾಕ್ ಅಲಿ, ವಿಜಯ್ ಹಝಾರೆ ಟ್ರೋಫಿಯ ಪಂದ್ಯ ಗಳು ಇಲ್ಲಿ ನಡೆದಿದೆ. ಬರೋಬ್ಬರಿ ೧,೨೦,೦೦೦ ಆಸನಗಳು, ನಾಲ್ಕು ಡ್ರೆಸಿಂಗ್ ಕೋಣೆಗಳು, ವಿಶೇಷ ನೆಟ್ ಪ್ರಾಕ್ಟೀಸ್‌ಗಾಗಿ ಪ್ರತ್ಯೇಕ ಸ್ಥಳ, ಆಟಗಾರರ ನೆರಳು ಕಾಣದಂತೆ ಎಲ್.ಇ.ಡಿ ತಂತ್ರಜ್ಞಾನ, ಮಳೆ ನೀರು ಇಂಗಿಸುವಿಕೆಯ ತಂತ್ರಜ್ಞಾನಗಳು, ವಿಶಾಲವಾದ ಎರಡು ಸಣ್ಣ ಕ್ರೀಡಾಂಗಳನ್ನು ಹೊಂದಿರುವ ಮೊಟೇರಾ ಕ್ರೀಡಾಂಗಣವು, ನವೀಕರಣಗೊಂಡ ಬಳಿಕ ಇದೆ ಮೊದಲ ಬಾರಿ ಅಂತರರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಕೋವಿಡ್ ಮರ‍್ಗ ಸೂಚಿಯನುಸಾರ ಈ ಬಾರಿ ಕೇವಲ ೫೦ ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಗುಜಾರಾತ್ ಕ್ರಿಕೆಟ್ ಸಂಸ್ಥೆ ಹೇಳಿದೆ.

ಭಾರತ ಮತ್ತು ಇಂಗ್ಲೆಂಡ್ ಸರಣಿಯಲ್ಲಿ, ಉಳಿದ ಎರಡು ಟೆಸ್ಟ್ ಹಾಗೂ ಐದು ಟಿ-೨೦ ಪಂದ್ಯಗಳನ್ನು ಈ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ. ಕೊನೆಯ ಎರಡು ಟೆಸ್ಟ್ ಹಾಗೂ ಟಿ-೨೦ ಪಂಧ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಉಳಿದಂತೆ ಮೂರು ಏಕದಿನ ಪಂಧ್ಯಗಳು ಪುಣೆಯಲ್ಲಿ ನಡೆಯಲಿದೆ.

ಭಾರತ ಸೇರಿದoತೆ ವಿಶ್ವದ ಹಲವು ಆಟಗಾರರು ಮೊಟೆರಾ ಕ್ರಿಡಾಂಗಣದಲ್ಲಿ ಆಡಲು ಉತ್ಸುಕರಾಗಿದ್ದಾರೆ. ೧೪ ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಮುಂಬರುವ ಟಿ-೨೦ ವಿಶ್ವಕಪ್ ಪಂಧ್ಯಗಳು ಕೂಡಾ ಈ ಕ್ರೀಡಾಂಗಣದಲ್ಲಿ ನಡೆಯುವ ಎಲ್ಲಾ ಸಾಧ್ಯತೆಗಳಿವೆ.