ಖುಷಿಯನ್ನು ಕಳೆದುಕೊಂಡು ಬದಲಾಗಬೇಕೇ???

ಖುಷಿಯನ್ನು ಕಳೆದುಕೊಂಡು ಬದಲಾಗಬೇಕೇ???

MS   ¦    Dec 22, 2020 08:09:49 PM (IST)
ಖುಷಿಯನ್ನು ಕಳೆದುಕೊಂಡು ಬದಲಾಗಬೇಕೇ???

ಸಂತಸ, ನೆಮ್ಮದಿಯ ಹುಡುಕಾಟದಲ್ಲಿ ಇಂದು ಜನ ಹಲವಾರು ಕೆಲಸಗಳನ್ನು ಮಾಡುವುದು ಉಂಟು. ನಮ್ಮ ತನವನ್ನೇ ಮರೆತು ಇನ್ನೊಬ್ಬರನ್ನು ಅನುಸರಿಸುವುದಂತು ಸರ್ವೆಸಾಮಾನ್ಯ. ಆದರೆ ನಿಜವಾದ ನಿಶ್ಕಲ್ಮಶ ಖುಷಿ ಎಲ್ಲಿದೆ ಎಂಬುದನ್ನು ಅರಿಯುವುದರಲ್ಲಿ ಹಲವಾರು ಮಂದಿ ಸೋತು ಹೋಗುತ್ತಾರೆ. ತನ್ನಲ್ಲೆ ಇರುವ ಖುಷಿಯನ್ನು ಸುತ್ತಲಿನ ಸಮಾಜದಲ್ಲಿ ಹುಡುಕಲು ಪ್ರಾರಂಭಿಸುತ್ತಾರೆ. 

ಅಷ್ಟಕ್ಕೂ ಖುಷಿ ಎಂದರೆನೂ? ಸಿರಿವಂತರ ಬಳಿ ಇರುವ ಹಣದ ಗುಲಾಮನೆ, ಮೇಧಾವಿಗಳ ಬಳಿ ಇರುವ ಜ್ಞಾನದ ದಾಹವೆ, ತಾಂತ್ರಿಕತೆಯ ಹಿಂಬಾಲಿಸುವ ಮನುಜನ ಅನುಯಾಯಿಯೆ. ಇವುಗಳಲ್ಲಿ ಯಾವೊಬ್ಬರಲ್ಲು ನಿಶ್ಚಲ ಖುಶಿ ಇರುವುದಿಲ್ಲ. ಏಕೆಂದರೆ ಹಣವೇ ಜೀವನ ಎಂದು ಕೊಂಡವನಿಗೆ ತೃಪ್ತಿ ಇರುವುದಿಲ್ಲ. ಜ್ಞಾನದ ಅಂಚನ್ನು ಹುಡುಕಿ ಹೊರಟವನಿಗೆ ಒಂದು ನೆಲೆ ಇರುವುದಿಲ್ಲ. ತಾಂತ್ರಿಕ ಜಗತ್ತಿನಲ್ಲಿ ಕಾಣಿಯಾದವರಿಗೆ ಮಾನವೀಯತೆಯ ಮೌಲ್ಯ ಮರೆಯಾಗಿರುತ್ತದೆ. ಹೀಗಿರುವಾಗ ಅವರಲ್ಲಿ ಸಂತಸ ಹೇಗೆ ನೆಲೆ ಮಾಡೀತೂ.

ಒಂದು ಖುಷಿಯ ಬದುಕನ್ನು ಕಟ್ಟಿಕೊಳ್ಳಲು ಇಂದು ಮನೆ, ತನ್ನವರು ಎಲ್ಲರನ್ನೂ ಬಿಟ್ಟು ದೂರ ಬರುತ್ತೇವೆ. ಹೊರಗಿನ ವಿಚಿತ್ರ ಸಮಾಜವುನ್ನು ನೋಡುತ್ತ ಅದರೊಳಗೊಂದಾಗುತ್ತೇವೆ. ಹೊಸಾ ಜೀವಿಯಾಗಿ ಅಲ್ಲೇ ನಮಗರಿವಿಲ್ಲದಂತೆ ಕಳೆದೇ ಹೋಗುತ್ತೇವೆ. ಆ ನಂತರ ಕಳೆದುಕೊಂಡ ತನ್ನವರನ್ನು ಹಿಂದಿನ ಖುಷಿಯನ್ನು ಆ ಜಗತ್ತಿನಲ್ಲಿ ಹುಡುಕಲು ಪ್ರಾರಂಭಿಸುತ್ತೇವೆ. ಅದರೆ ಅಲ್ಲಿ ಒಂದು ವಿಷಯವನ್ನು ಮರೆಯುತ್ತೇವೆ. ಅದುವೆ ನಾವು ಕೆಳೆದು ಕೊಂಡಿರುವ ನಮ್ಮ ಮೂಲ ಅಸ್ತಿತ್ವ.
ಹೊಸಾ ಮನುಷ್ಯನಾಗಿ ನಿಂತವ ತನ್ನಲ್ಲಿ ಏನು ಬದಲಾಗಿಲ್ಲ. ಆದರೆ ತನ್ನವರೆಲ್ಲ ಬದಲಾಗಿದ್ದಾರೆ, ಅವರ ನೋಟ ಬದಲಾಗಿದೆ. ಹೀಗೆ ಸುತ್ತಲಿನವರಲ್ಲಿ ತಪ್ಪನ್ನು ಕಾಣಲು ಆರಂಭವಾದಮೇಲಂತೂ ತಾನೂ ನಡೆಯುತ್ತಿರುವ ಹಾದಿಯೇ ಸರಿ ಎಂದು ನಿರ್ದರಿಸಿ, ಸಿಗುತ್ತಿದ್ದ ಅಲ್ಪ-ಸ್ವಲ್ಪ ಖುಷಿಯ ಮಾತುಗಳನ್ನು ಕಳೆದುಕೊಳ್ಳುತ್ತೇವೆ. ಆದರೆ ಇಲ್ಲಿ ನಿಜಕ್ಕೂ ಬದಲಾಗಿರುವುದು ಯಾರು ಎಂದು ಯೋಚಿಸದೆ ವಿನಾಕಾರಣ ಪರರ ದೂಷಣೆಯಲ್ಲೇ ಕಾಲ ಕಳೆಯುವಂತೆ ಆಗುತ್ತದೆ. ಕಾಲ ಕ್ರಮೇಣ ತನ್ನವರನ್ನೆಲ್ಲರನ್ನು ದೂರಮಾಡಿಕೊಂಡು ಒಬ್ಬಂಟಿಯಾಗುತ್ತೇವೆ. ಆ ಸಮಯದಲ್ಲಿ ಕೆಲವರಿಗೆ ತನ್ನ ತಪ್ಪಿನ ಅರಿವಾಗುವುದುಂಟು. ಆದರೆ ಕಾಲ ಉರುಳಿ ದೂರಹೋಗಿಬಿಟ್ಟಿರುತ್ತದೆ. ತಿದ್ದಿಕೊಳ್ಳುವ ಮನಸ್ಸಾದರೂ ಅದಕ್ಕೆ ಬೇಕಾದ ಹಾದಿಗಳು ಬಹುತೇಕ ಮುಚ್ಚಿ ಹೋಗಿರುತ್ತದೆ.

ಈಗ ನನಲ್ಲಿ ಮೂಡುತ್ತಿರುವ ಪ್ರಶ್ನೆ, ನಿಜಕ್ಕೂ ಮನುಷ್ಯ ಸಮಾಜಕ್ಕಾಗಿ ಬದಲಾಗುವ ಅವಶ್ಯಕತೆ ಇದೆಯೇ? ಕಾಲಹರಣಿಗಳ ಮಾತಿಗೆ ಬುದ್ಧಿಕೊಟ್ಟು ತನ್ನ ಖುಷಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇದೆಯೇ? ಮಕ್ಕಳಂತೆ ಮುಗ್ದ ಮನಸ್ಸಿನಿಂದ ನಗಲು ಸಾಧÀ್ಯ ಇಲ್ಲವೆ? ಹೀಗೆ ಯೋಚಿಸುತ್ತಾ ಹೋದರೆ ಮುಗಿಯಲಾರದಷ್ಟು ಉತ್ತರ ಸಿಗದ ಪ್ರಶ್ನೆಗಳ ಸರೆಮಾಲೆ ಒಂದಕ್ಕೊಂದು ಕೊಂಡಿಯಂತೆ ಮನಸ್ಸನ್ನು ಕಾಡಲಾರಂಭಿಸುತ್ತದೆ. ಆದರೆ ಇದರಿಂದ ಹೊರಬರಲು ಒಂದು ಸುಲಭ ಮಾರ್ಗ ಇದೆ. ಅದು ಇನ್ನೆಲ್ಲೂ ಇಲ್ಲ ಪ್ರತಿಯೊಬ್ಬರ ಮನಸ್ಸಿನಲ್ಲೇ ಇದೆ. ಏನೆಂದರೆ ಸಮಾಜದ ಮಾತಿಗೆ ಕಿವಿಕೊಟ್ಟು ನಿರ್ಧಾರಗಳನನ್ನು ಬದಲಾಗುವ ಬದಲು, ಮನಸ್ಸಿನ ಮಾತಿನಂತೆ ಮುನ್ನಡೆಯತ್ತಾ ಅದರಲ್ಲಿ ಖಷಿ ಕಾಣುವುದು ಉತ್ತಮ. ಆಗ ಎಲ್ಲಿ ಹೋದರೂ ಯಾರೇ ಬಂದರು ನಮ್ಮತನವನ್ನು ಬದಲಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅಂತೆಯೇ ಇನೊಬ್ಬರನ್ನು ಅನುಸರಿಸುವ ಪ್ರಸಂಗವೂ ಬರುವುದಿಲ್ಲ.