ಧರೆಗೆ ದೊಡ್ಡವರು ಮಂಟೆಸ್ವಾಮಿ ಜಾತ್ರಾ ಮಹೋತ್ಸವ  

ಧರೆಗೆ ದೊಡ್ಡವರು ಮಂಟೆಸ್ವಾಮಿ ಜಾತ್ರಾ ಮಹೋತ್ಸವ  

LK   ¦    Apr 07, 2019 04:59:26 PM (IST)
ಧರೆಗೆ ದೊಡ್ಡವರು ಮಂಟೆಸ್ವಾಮಿ ಜಾತ್ರಾ ಮಹೋತ್ಸವ   

ಮಳವಳ್ಳಿ/ಬೆಳಕವಾಡಿ: ಮಳವಳ್ಳಿ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ರಾಜ ಬೊಪ್ಪೆಗೌಡನಪುರದಲ್ಲಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಜಾತ್ರೆ ಸಡಗರ ಸಂಭ್ರಮದಿಂದ ನಡೆಯಿತು. ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಮಂಟೆಸ್ವಾಮಿ ಗದ್ದುಗೆಯನ್ನು ದರ್ಶನ ಪಡೆದುಕೊಂಡರು. 

ಬಿ.ಜಿ.ಪುರದಲ್ಲಿರುವ ಮಠಕ್ಕೆ ಯುಗಾದಿ ಮುನ್ನ ದಿನ ಗದ್ದುಗೆ ದರ್ಶನಕ್ಕೆ ನುಗ್ಗುವ ಮುನ್ನ ಕಪಡಿಯಿಂದ ಭಕ್ತರು ಬಂದು ಪೂರಿಗಾಲಿ, ಮುಟ್ಟನಹಳ್ಳಿ, ಬಳ್ಳಗೆರೆ ತೋಪುಗಳಲ್ಲಿ ವಾಸ್ತವ್ಯ ಮಾಡಿ ಆ ನಂತರ ಎಲ್ಲರೂ ನಡೆದುಕೊಂಡು ಬಂದು ಮಠಕ್ಕೆ ನುಗ್ಗಿ ಮಂಟೇಸ್ವಾಮಿ ಗದ್ದುಗೆಯ ದರ್ಶನ ಪಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. 

ಪವಾಡ ಪುರುಷ ಧರೆಗೆ ದೊಡ್ಡವರಾದ ಮಂಟೇಸ್ವಾಮಿರವರು ಸಮಾಜವನ್ನು ಸುಧಾರಿಸಲು ಉತ್ತರ ನಾಡಿನಿಂದ ಬಂದು ರಾಜಬೊಪ್ಪೆಗೌಡನಪುರದಲ್ಲಿ ನೆಲೆಸಿ ಆ ನಂತರ ಮಾರೇಹಳ್ಳಿ ಮುದ್ದಮ್ಮನ ಮಗನಾದ ಕಂಪಚಾರಿಯನ್ನು ಕರೆತಂದು ಶಿಶುಮಗನಾಗಿ ಮಾಡಿ ಸಿದ್ಧಪ್ಪಾಜಿಯನ್ನು ಹಲಗೂರು ಚಿಲ್ಲಾಪುರಕ್ಕೆ ಕಳುಹಿಸಿ ಕಬ್ಬಿಣದ ಆಯುಧಗಳನ್ನು ತಂದು ಬೊಪ್ಪೆಗೌಡನಪುರ ಮಠದಲ್ಲಿ ಹನ್ನೇಡಾಳುದ್ದ ಬಾವಿಯನ್ನು ತೋಡಿಸಿ ಐಕ್ಯರಾದರು ಎಂಬ ಪ್ರತೀತಿಯಿದೆ. 

ಪ್ರತಿವರ್ಷವೂ ಇಲ್ಲಿ ಯುಗಾದಿ ಸಮಯದಲ್ಲಿ ಜಾತ್ರೆ ನಡೆಯುವುದು ರೂಢಿಯಾಗಿ ಬಂದಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆಯನ್ನು ಮಾಡಲಾಗುತ್ತದೆ. ಈ ಬಾರಿ ಸರಗೂರು ಹೊಸಮಠ ಹಾಗೂ ಬಿ.ಜಿ.ಪುರ ಹೊರಮಠಗಳಲ್ಲಿ ಕಪ್ಪಡಿಯಿಂದ ಬರುವ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಅಲ್ಲದೆ ಜಾತ್ರೆಗೆ ಬರುವ ಸಾವಿರಾರು ಭಕ್ತರ ಧಣಿವನ್ನು ನೀಗಿಸಲು ಅಕ್ಕ ಪಕ್ಕದ ರೈತ ಬಾಂಧÀವರು ನೀರು, ಮಜ್ಜಿಗೆ, ಪಾನಕ ಮೊದಲಾದವುಗಳನ್ನು ವಿತರಿಸಿದರು. 

ಪ್ರತಿ ವರ್ಷದಂತೆ ಕಪ್ಪಡಿ ಜಾತ್ರೆಯಲ್ಲಿ ಕಳೆದ ಬಾರಿ(2018) ಮಳವಳ್ಳಿ ಮಠದ ಎಂ.ಆರ್.ವರ್ಚಸ್ ಶ್ರೀಕಂಠ ಸಿದ್ಧಲಿಂಗರಾಜ ಅರಸು ಸ್ವಾಮೀಜಿಗಳು ಮಠದ ಪ್ರವೇಶ ಮಾಡಿದ್ದರು. ಈ ಬಾರಿ(2019) ಬಿ.ಜಿ.ಪುರ ಮಠದ ಪೀಠಾಧಿಪತಿಯಾದ ಶ್ರೀ ಜ್ಞಾನನಂದ ಚೆನ್ನರಾಜೇ ಅರಸುರವರು ಮಠದ ಪ್ರವೇಶ ಮಾಡಿದ್ದಾರೆ. ಇವರಿಗೆ ಮಳವಳ್ಳಿ ಮಠದ ತಮಟೆ, ಬಸವ, ಕೊಂಬುಕಹಳೆ ಸಾಥ್ ನೀಡಿದವು.