ಮೈ ಜುಮ್ಮೆನ್ನಿಸುವ ಜುಮ್ಮನ ಮರ

ಮೈ ಜುಮ್ಮೆನ್ನಿಸುವ ಜುಮ್ಮನ ಮರ

Megha R Sanadi   ¦    Sep 17, 2020 07:38:23 PM (IST)
ಮೈ ಜುಮ್ಮೆನ್ನಿಸುವ ಜುಮ್ಮನ ಮರ

ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುವ ವಿವಿದ ಜಾತಿಯ ಮರಗಳಲ್ಲಿ ಜುಮ್ಮ ಅಥವ ಕಾವಟೆ ಮರವು ಒಂದು. ಮೈಯಲ್ಲಾ ಮುಳ್ಳಾಗಿ, ಆಗಸವನ್ನು ಚುಂಬಿಸುವಂತೆ ಬೆಳೆಯುವ ಈ ಮರದ ತೊಗಟೆಯಲ್ಲಿ ಬೆಳೆದಿರುವ ಒತ್ತೊತ್ತಾದ ಮುಳ್ಳುಗಳನ್ನು ನೋಡಿದರೆ ಒಮ್ಮೆ ಮೈ ಜುಮ್ ಎನ್ನುತ್ತದೆ. ಹಾಗಾಗಿಯೇ ಈ ಮರಕ್ಕೆ ಜುಮ್ಮನ ಮರ ಎಂದು ಗ್ರಾಮೀಣ ಪ್ರದೇಶಗಳಲ್ಲಿ ಹೆಸರು ಬಂದಿರಬಹುದು.

ಜುಮ್ಮನ ಮರದಿಂದ ಮಾಡಿದ ದೊಣ್ಣೆಯಂನ್ನು ಹಿಂದಿನವರು ಮನೆಗಳಲ್ಲಿ ಇರಿಸಿಕೊಳ್ಳುತ್ತಿದ್ದರು. ಏಕೆಂದರೆ ಕಳ್ಳರು ಬಂದಾಗ ಅವರಿಂದ ಮನೆಯನ್ನು ರಕ್ಷಿಸಲು ಹಾಗೂ ತಮ್ಮನ್ನು ತಾವು ಕಾಪಾಡಿಕೊಳ್ಳಲು. ಈಗ ಅದನ್ನು ಶೋಪೀಸ್ ಆಗಿ ಇರಿಸಿಕೊಳ್ಳಲಾಗುತ್ತಿದೆ. ಈ ಮರದ ತೋಗಟೆಯಾಗಿರುವ ಮುಳ್ಳುಗಳನ್ನು ಒಮ್ಮೆ ಒಣಗಿಸಿದರೆ ಸುಮಾರು 30ರಿಂದ 40 ವರ್ಷಗಳವರೆಗೆ ಲಡ್ಡಾಗದೆ ಉಳಿಯುತ್ತದೆ. ಹಾಗಾಗಿಯೇ ಇದನ್ನು ಅಚ್ಚು ಹಾಕಲು ಬಳಸಲಾಗುತ್ತಿತ್ತು. ಇಂದು ಶೀಲ್‌ಗಳನ್ನು ತಮಗೆ ಬೇಕಾದ ಹೆಸರಿನಲ್ಲಿ ಹೇಗೆ ತಯಾರಿಸುತ್ತಾರೋ, ಹಾಗೇ ಈ ಮುಳ್ಳುಗಳ ಹಿಂದೆ ಕೆತ್ತಿ ಅವುಗಳನ್ನು ಉಪಯೋಗಿಸುತ್ತಿದ್ದರಂತೆ.

ನೋಡಲು ತುಂಬಾ ಒರಟಾಗಿ ಕಂಡರೂ ಈ ಮರದ ಉಪಯೋಗ ಹಲವು. ಇದನ್ನು ಆಹಾರವಾಗಿಯೂ ಹಲವುಕಡೆ ಬಳಸಲಾಗುತ್ತಿದೆ. ಮಸಾಲೆಗಳಿಗೆ ಈ ಮರದ ಕಾಯಿಯನ್ನು ಒಣಗಿಸಿ ಇಂದಿಗೂ ಉಪಯೋಗಿಸುತ್ತಾರೆ. ಅದರಲ್ಲಿನ ಘಾಟಿನ ಅಂಶ ಮಸಾಲೆಗೆ ಅದರಲ್ಲಿಯೂ ಮಾಂಸಾಹಾರಿ ಪದಾರ್ಥಗಳಿಗೆ ಹೆಚ್ಚು ರುಚಿಯನ್ನು ಮತ್ತು ಪರಿಮಳವನ್ನು ನೀಡುತ್ತದೆ. ಇದರ ಮುಳ್ಳನ್ನು ಕೆಪ್ಪಟರಾಯಕ್ಕೆ ಔಷದವಾಗಿ ಬಳಸುತ್ತರೆ ಇಷ್ಟೇ ಅಲ್ಲದೆ, ಈ ಜುಮ್ಮನ ಕಾಯಿಗಳನ್ನು ಬಾಳಂತನದ ಆರೈಕೆ ಮಾಡುವಾಗ ಹಳ್ಳಿಮದ್ದಿನಂತೆ ಬಳಸುತ್ತಾರೆ.