ಉ.ಕನ್ನಡದಲ್ಲಿ 24 ಕೊರೊನಾ ಸೋಂಕು ದೃಢ:ಆತಂಕದಲ್ಲಿ ಜನ

ಉ.ಕನ್ನಡದಲ್ಲಿ 24 ಕೊರೊನಾ ಸೋಂಕು ದೃಢ:ಆತಂಕದಲ್ಲಿ ಜನ

SB   ¦    Jun 30, 2020 10:00:45 AM (IST)
ಉ.ಕನ್ನಡದಲ್ಲಿ 24 ಕೊರೊನಾ ಸೋಂಕು ದೃಢ:ಆತಂಕದಲ್ಲಿ ಜನ

ಕಾರವಾರ: ಜಿಲ್ಲೆಯಲ್ಲಿ ಸೋಮವಾರ 24 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗುವ ಮೂಲಕ ಅತೀ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ಖಚಿತಗೊಂಡಿದೆ. ಈ ಪೈಕಿ ಏಳು ಪ್ರಕರಣಗಳು ಯಲ್ಲಾಪುರ, ಆರು ಮುಂಡಗೋಡ, ಕುಮಟಾ, ಶಿರಸಿ, ಭಟ್ಕಳ ತಲಾ ಒಂದು, ಆರು ಹೊನ್ನಾವರ, ಕಾರವಾರ ಎರಡು ಪ್ರಕರಣಗಳು ಖಚಿತವಾಗಿದೆ.

ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯ ಸೋಂಕಿತನಲ ಪ್ರಾತಮಿಕ ಸಂಪರ್ಕಕ್ಕೆ ಬಂದಿದ್ದ 37, 51 ವರ್ಷದ ವ್ಯಕ್ತಿ, 83 ರ ವೃದ್ಧೆ, ಮತ್ತು 26 ವರ್ಷದ ಇಬ್ಬರು ಯುವಕರಿಗೆ ಸೋಂಕು ದೃಢಪಟ್ಟಿದೆ. ಅದರಂತೆ ಮುಂಡಗೋಡದ 20 ವರ್ಷದ ಯುವಕನಲ್ಲೂ ಸೋಂಕು ಪತ್ತೆಯಾಗಿದೆ. ಈತ ಮುಂಡಗೋಡದ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದ್ದು ಪ್ರಯಾಣದ ಇತಿಹಾಸ ಪತ್ತೆ ಮಾಡುವ ಕಾರ್ಯ ಮುಂದುವರಿದದೆ.

ಗೋವಾ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಕಾರವಾರದ 23 ಹಾಗೂ 25 ವರ್ಷದ ಯುವಕರಿಗೆ ಸೋಂಕು ದೃಢಪಟ್ಟಿದೆ. ಯಲ್ಲಾಪುರದ ಸೋಂಕಿತ ಬಸ್ ನಿರ್ವಾಹಕನ 10649 ಸಂಪರ್ಕಕ್ಕೆ ಬಂದಿದ್ದ 26, 26, 28, 33, 42 ವರ್ಷದ ಪುರುಷರಿಗೆ ಹಾಗೂ 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಗೋವಾದಿಂದ ವಾಪಾಸ್ ಆಗಿದ್ದ 33 ವರ್ಷದ ವ್ಯಕ್ತಿಗೆ ಸಹ ಸೋಂಕು ದೃಢಪಟ್ಟಿದೆ. ಹೊನ್ನಾವರದಲ್ಲಿ ಮುಂಬೈನಿಂದ ವಾಪಾಸ್ ಆಗಿದ್ದ 35 ಹಾಗೂ 65 ವರ್ಷದ ಮಹಿಳೆಯರಿಗೆ ಜೊತೆಗೆ 39, 31,53, 29 ವರ್ಷದ ಪುರುಷರಿಗೆ ಸೋಂಕು ಪತ್ತೆಯಾಗಿದೆ. ಭಟ್ಕಳದಲ್ಲಿ ಆಂದ್ರಪ್ರದೇಶದ ವಿಜಯವಾಡದಿಂದ ವಾಪಾಸ್ ಆಗಿದ್ದ 50 ವರ್ಷದ ಪುರುಷನಿಗೆ, ಮುಂಬೈನಿಂದ ವಾಪಾಸ್ ಆಗಿದ್ದ ಕುಮಟಾ ತಾಲೂಕಿನ 30 ವೃಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ 213 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು 153 ಜನ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪ್ರಸ್ತುತ 54 ಮಂದಿ ಸಕ್ರಿಯ ಪ್ರಕರಣಗಳಿದ್ದು ಚಿಕಿತ್ಸೆ ನಡೆಯುತ್ತಿದೆ.