ಮಂಡ್ಯದಲ್ಲಿ ಜ್ವರದಿಂದ ಬಾಲಕ ಸಾವು

ಮಂಡ್ಯದಲ್ಲಿ ಜ್ವರದಿಂದ ಬಾಲಕ ಸಾವು

Jul 19, 2017 10:56:08 AM (IST)
ಮಂಡ್ಯದಲ್ಲಿ ಜ್ವರದಿಂದ ಬಾಲಕ ಸಾವು

ಮಂಡ್ಯ: ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಹೊನಗಾನಹಳ್ಳಿ ಮಠದಲ್ಲಿ ನಡೆದಿದ್ದು, ಡೆಂಗ್ಯೂನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

ಹೊನಗಾನಹಳ್ಳಿ ಮಠದ ನಿವಾಸಿ ಮಮತಾ-ಶಿವಾನಂದ ದಂಪತಿ ಪುತ್ರ ಹೇಮಂತ್ (7) ಜ್ವರದಿಂದ ಮೃತಪಟ್ಟ ಬಾಲಕನಾಗಿದ್ದಾನೆ. ಈತ ಹನಕೆರೆ ಗ್ರಾಮದ ವಿವೇಕಾ ವಿದ್ಯಾ ಸಂಸ್ಥೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಹೇಮಂತ್ ಕಳೆದ ಗುರುವಾರ ತೀವ್ರ ಜ್ವರಕ್ಕೆ ತುತ್ತಾಗಿದ್ದನು. ಕೂಡಲೇ ಶಿಕ್ಷಕರು ಪೋಷಕರಿಗೆ ವಿಷಯ ಮುಟ್ಟಿಸಿ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸೂಕ್ತ ಚಿಕಿತ್ಸೆ ದೊರಕದ ಕಾರಣ ನಂತರ ನಗರದ ಮಾತಾ ನರ್ಸಿಂಗ್ ಹೋಂಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ಜ್ವರದ ತೀವ್ರತೆ ಕಡಿಮೆಯಾಗದ ಕಾರಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.


ಚಿಕಿತ್ಸೆ ಫಲಕಾರಿಯಾಗದೆ ಹೇಮಂತ್ ಮೃತಪಟ್ಟಿದ್ದು, ಡೆಂಗ್ಯೂ ಜ್ವರದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಜ್ವರಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿಯಾಗಿದ್ದು, ಜನ ಭಯಪಡುವಂತಾಗಿದೆ.