ಕೆ.ಆರ್.ನಗರದಲ್ಲಿ ರೈತ ಆತ್ಮಹತ್ಯೆ

ಕೆ.ಆರ್.ನಗರದಲ್ಲಿ ರೈತ ಆತ್ಮಹತ್ಯೆ

Jul 23, 2017 01:58:38 PM (IST)
ಕೆ.ಆರ್.ನಗರದಲ್ಲಿ ರೈತ ಆತ್ಮಹತ್ಯೆ

ಮೈಸೂರು: ಸಾಲಬಾಧೆಯಿಂದ ರೈತನೊಬ್ಬ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಮೇಲಿಂದ ಮೇಲೆ ಸರಣಿ ಆತ್ಮಹತ್ಯೆಗಳು ನಡೆಯುತ್ತಲೇ ಇದ್ದು, ಸಿಎಂ ತವರಲ್ಲೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಆತಂಕಕಾರಿಯಾಗಿದೆ.

ಇದೀಗ ರೈತನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಕೊಂಡಿರುವ ಘಟನೆ ಕೆ.ಆರ್.ನಗರ ತಾಲೂಕಿನ ಹೊಸಅಗ್ರಹಾರ ಹೋಬಳಿಯ ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ದಿ.ಯೋಗೇಶ್ ಅವರ ಪುತ್ರ ಡಿ.ವೈ.ಹೇಮಂತ್(26) ದುರ್ದೈವಿ. ಈತ ಅಜ್ಜಿಯ ಪಿತ್ರಾಜಿತ ಆಸ್ತಿಯಾಗಿ ಬಂದಿದ್ದ ಒಂದು ಎಕರೆ ಜಮೀನಿನಲ್ಲಿ ಆರೇಳು ವರ್ಷದಿಂದ ವ್ಯವಸಾಯ ಮಾಡುತ್ತಿದ್ದನು. ಜಮೀನಿನಲ್ಲಿ ಸಣ್ಣದಾಗಿ ಕೋಳಿ ಫಾರಂ ಕೃಷಿ ಮಾಡಲು ಕೆ.ಆರ್.ನಗರದ ವಿಜಯ ಬ್ಯಾಂಕ್ನಿಂದ 10 ಲಕ್ಷ ಸಾಲ ಪಡೆದಿದ್ದನು. ಪ್ರತಿ ವರ್ಷಕ್ಕೊಮ್ಮೆ ಸಾಲ ಮರು ಪಾವತಿ ಮಾಡಿ ಸಾಲವನ್ನು ನವೀಕರಿಸುತ್ತಾ ಬಂದಿದ್ದು, ಕಳೆದ ವರ್ಷದಿಂದ ಕೋಳಿ ಫಾರಂ ಕೃಷಿಗೆ ಪಂಪ್ಸೆಟ್ ನೀರಿನ ಅಂತರ್ಜಲ ಕಡಿಮೆಯಾಗಿ ಕೋಳಿ ಸಾಕಾಣಿಗೆ ಬಹಳಷ್ಟು ತೊಂದರೆಯಾಗಿ ನಷ್ಟವುಂಟಾಗಿ ಸಾಲದ ಬಡ್ಡಿ ಹೆಚ್ಚಾಗಿದಲ್ಲದೆ, ಬ್ಯಾಂಕ್ ಅಧಿಕಾರಿಗಳು ತೋಟ ಮತ್ತು ಕೋಳಿಫಾರಂ ಜಪ್ತಿ ಮಾಡುವುದಾಗಿ ನೋಟೀಸ್ ನೀಡಿದ್ದರು. ಇದರಿಂದಾಗಿ ಮನನೊಂದು ಕೋಳಿಪಾರಂ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.

ಈ ಕುರಿತು ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.