ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

LK   ¦    Nov 08, 2019 04:38:05 PM (IST)
ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಹನೂರು: ಶನೇಶ್ವರ ದೇವಾಲಯಕ್ಕೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದ ಘಟನೆ ಮಲೆ ಮಹದೇಶ್ವರಬೆಟ್ಟದ ಅರಣ್ಯ ವಾಪ್ತಿಯ ಕೀರನಹೊಲ ಗ್ರಾಮದ ಬಳಿ ನಡೆದಿದೆ.

ಕಿರನಹೂಲ ಗ್ರಾಮದ ನಿವಾಸಿ ಮಹಾದೇವ(45) ಮೃತಪಟ್ಟ ದುರ್ದೈವಿ. ಈತ ಇಬ್ಬರು  ಸ್ನೇಹಿತರೊಂದಿಗೆ ಶನೇಶ್ವರ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ  ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು  ತೀವ್ರವಾಗಿ ಗಾಯಗೊಂಡಿದ್ದ ಮಹಾದೇವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ  ಅರಣ್ಯಾಧಿಕಾರಿಗಳು ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.  ಈ ಸಂಬಂಧ  ಮಾತನಾಡಿದ ಡಿಎಫ್‍ಓ ಏಡುಕೂಂಡಲು ಅವರು, ಮೃತ ದುರ್ದೈವಿ ಮಹದೇವ್ ಕಡುಬಡವನಾಗಿದ್ದು,  ಪತ್ನಿ ಮೂವರು ಪುತ್ರಿಯರು  ಓರ್ವ  ಪುತ್ರನಿದ್ದಾನೆ. ಕುಟುಂಬಕ್ಕೆ ಅರಣ್ಯ  ಇಲಾಖೆ ವತಿಯಿಂದ 5 ಲಕ್ಷ ರೂ ಪರಿಹಾರ ನೀಡಲಾಗುವುದು ಹೇಳಿದ್ದಾರೆ.