ಗಂಜಿಗಟ್ಟಿ ಗ್ರಾಮದ ಮೃತ ಬಾಲಕಿ ಶ್ರೀದೇವಿ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ

ಗಂಜಿಗಟ್ಟಿ ಗ್ರಾಮದ ಮೃತ ಬಾಲಕಿ ಶ್ರೀದೇವಿ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ

YK   ¦    Aug 09, 2020 11:31:17 AM (IST)
ಗಂಜಿಗಟ್ಟಿ ಗ್ರಾಮದ ಮೃತ ಬಾಲಕಿ ಶ್ರೀದೇವಿ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ

ಧಾರವಾಡ: ಶಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೆರೆ ನೀರಿನ ಸೇಳವಿನಲ್ಲಿ ತೇಲಿ ಹೋಗಿದ ಬಾಲಕಿ ಮೃತಪಟ್ಟಿದ್ದು, ಇಂದು ಬೆಳಿಗ್ಗೆ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಶೋಧನಾ ಕಾರ್ಯದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.

ಇಂದು ಸಂಜೆ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ, ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಶಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸರಕಾರದ 5 ಲಕ್ಷ ರೂ. ಪರಿಹಾರಧನದ ಚೆಕ್ ನೀಡಿ, ಸಾಂತ್ವನ ಹೇಳಿದರು.

ಶಾಸಕ ಸಿ.ಎಂ ನಿಂಬ್ಬಣವರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಗಂಜಿಗಟ್ಟಿ ಕಲಘಟಗಿ ಮದ್ಯದ ಲೋಕೊಪಯೋಗಿ ರಸ್ತೆಯ ದುರಸ್ಥಿಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಡಿವೈಎಸ್‍ಪಿ ರವಿ ನಾಯಕ್,ಸಿಪಿಐ ವಿಜಯ್ ಬಿರಾದಾರ, ಮುಖಂಡರಾದ ಬಸವರಾಜ ಕುಂದಗೊಳಮಠ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮತ್ತು ಹನುಮಂತಪ್ಪ ಗಾಣಿಗೇರ ಕುಟುಂಬ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದರು.