ರೈಲು ಸಂಚಾರ ಏ.೧೪ರವರೆಗೂ ಬಂದ್

ರೈಲು ಸಂಚಾರ ಏ.೧೪ರವರೆಗೂ ಬಂದ್

YK   ¦    Mar 26, 2020 09:45:23 AM (IST)
ರೈಲು ಸಂಚಾರ ಏ.೧೪ರವರೆಗೂ ಬಂದ್

ನವದೆಹಲಿ: ಪ್ರಧಾನಿ ನರೇಂಧ್ರ ಮೋದಿ ಭಾರತ ಲಾಕ್ ಡೌನ್ ಮಾಡಿ ಆದೇಶ ನೀಡಿದ ಹಿನ್ನೆಲೆ ರೈಲು ಸಂಚಾರವನ್ನು ಏಪ್ರಿಲ್ ೧೪ರವರಗೂ ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಭೀತಿಯಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಘಿದೆ. ಸರಕು ಸಾಘಣೆಯ ಗೂಡ್ಸ್ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ, ಅವು ಎಂದಿನಂತೆ ಓಡಾಡಲಿವೆ, ಆದರೆ ಪ್ರಯಾಣಿಕ ಸೇವೆಯ ಎಲ್ಲ ರೈಲುಗಳ ಬಂದ್ ಆಗಲಿವೆ ಎಂದು ರೈಲು ಇಲಾಖೆ ತಿಳಿಸಿದೆ.♫