ಚಿಕ್ಕಬಳ್ಳಾಪುರ ಕಲ್ಲಿನ ಕ್ವಾರೆಯಲ್ಲಿ ಸ್ಫೋಟ: ಐದು ಮಂದಿ ಮೃತ್ಯು

ಚಿಕ್ಕಬಳ್ಳಾಪುರ ಕಲ್ಲಿನ ಕ್ವಾರೆಯಲ್ಲಿ ಸ್ಫೋಟ: ಐದು ಮಂದಿ ಮೃತ್ಯು

HSA   ¦    Feb 23, 2021 09:09:39 AM (IST)
ಚಿಕ್ಕಬಳ್ಳಾಪುರ ಕಲ್ಲಿನ ಕ್ವಾರೆಯಲ್ಲಿ ಸ್ಫೋಟ: ಐದು ಮಂದಿ ಮೃತ್ಯು

ಚಿಕ್ಕಬಳ್ಳಾಪುರ: ಇಲ್ಲಿನ ಕಲ್ಲಿನ ಕ್ವಾರೆಯಲ್ಲಿ ನಡೆದಿರುವ ಸ್ಪೋಟದಲ್ಲಿ ಐದು ಮಂದಿ ಮೃತಪಟ್ಟು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯು ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಪೆರೆಸಂದ್ರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಕಲ್ಲಿನ ಕ್ವಾರೆಯಲ್ಲಿ ತಂದಿಡಲಾಗಿದ್ದ ಜಿಲೆಟಿನ್ ಕಡ್ಡಿಗಳಿಂದಾಗಿ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.