ಕಾರವಾರ ಮೆಡಿಕಲ್ ಕಾಲೇಜಿನಿಂದ‌ 20 ಸೋಂಕಿತರು ಗುಣಮುಖ: ಬಿಡುಗಡೆ

ಕಾರವಾರ ಮೆಡಿಕಲ್ ಕಾಲೇಜಿನಿಂದ‌ 20 ಸೋಂಕಿತರು ಗುಣಮುಖ: ಬಿಡುಗಡೆ

SB   ¦    May 23, 2020 02:52:37 PM (IST)
ಕಾರವಾರ ಮೆಡಿಕಲ್ ಕಾಲೇಜಿನಿಂದ‌ 20 ಸೋಂಕಿತರು ಗುಣಮುಖ: ಬಿಡುಗಡೆ

ಕಾರವಾರ: ಕೊರೊನಾ ಸೋಂಕು ಬಂದರೆ ಜನರು ಆತಂಕಕ್ಕೆ ಒಳಗಾಗಬಾರದು. ಈ ಬಗ್ಗೆ ಜಾಗೃತರಾಗಿರಬೇಕು. ಸೋಂಕು ಮುಚ್ಚಿಡದೆ ಉತ್ತಮ ಚಿಕಿತ್ಸೆಗೆ ಮಾಹಿತಿ ನೀಡಿ ಎಂದು‌ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಹೇಳಿದರು.

ಶನಿವಾರ ಕಾರವಾರದ ಮೆಡಿಕಲ್ ಕಾಲೇಜನಲ್ಲಿ 20 ಕೊರೊನಾ ಸೋಂಕಿತರನ್ನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮುದಾಯಕ್ಕೆ ಸೋಂಕು ಹರಡದಂತೆ ನೋಡಬೇಕು. ಸಾಮಾಜಿ ಅಂತರ ಕಾಯ್ದುಳ್ಳಬೇಕು.

ಜನರಲ್ಲಿ ಭಯಹುಟ್ಟಿಸುವ ಕೆಲಸ‌ ಮಾಡಬೇಡಿ ಎಂದರು. ಯಾರೇ ಸೋಂಕಿತರು ಗುಣಮುಖರಾಗಿ ಬಿಡುಗಡೆ ಆದಮೇಲೆ ಸಮಾಜ ಅವರನ್ನ ಸೋಂಕಿತರಂತೆ ನೋಡಬಾರದು ಜನರಲ್ಲಿ ಭಯಹುಟ್ಟಿಸುವ ಕೆಲಸ‌ ಮಾಡಬೇಡಿ, ಕ್ವಾರಂಟೈನ್ ಗೆ ಕರೆದುಕೊಂಡು ಹೋದರು ಸಹ ಅವರಿಗೆ ಸೋಂಕು ಬಂದೆ ಬಿಟ್ಟಿತ್ತು ಎನ್ನುವ ರೀತಿಯಲ್ಲಿ ವರ್ತಿಸುವುದನ್ನ ಬಿಡಬೇಕಾಗಿದೆ.

ಇದು ಸಂಭ್ರಮಿಸುವ ಕಾರ್ಯಕ್ರಮವಲ್ಲ, ವಿಶ್ವಾಸ ಮೂಡಿಸುವ ಕೆಲಸವಾಗಬೇಕು. ಎನ್ನುವ ಮೂಲಕ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಅಭಿನಂದಿಸಿದರು.